ನಿರಾಕರಣ
ರೂಪ ಹಾಸನ್

ಅವರು ತಮ್ಮಷ್ಟಕ್ಕೇ ಗೋಲುಗಳನ್ನು
ಹೊಡೆಯುತ್ತಲೇ ಹೋದರು
ಎಲ್ಲ ಮುಗಿಸಿದೆವೆಂಬ ಸೊಕ್ಕಿಗೆ ಬಿದ್ದರು.
.
ನಾವು ಮಾಮೂಲಿನಂತೆ ಸುಮ್ಮನಿದ್ದೆವು
ಆಟವಾಡದೆಯೂ ಸೋತಂತೆ ನಟಿಸಿದೆವು
ಏಟಿಗೆದಿರೇಟು ಕೊಡದೇ ಮೌನವಾಗಿದ್ದೆವು.
.
ಅವರು ಸೋಲು-ಗೆಲುವುಗಳ ಪಟ್ಟಿ ಕಟ್ಟಿದರು
ಸುಮ್ಮನೆ ಕುಣಿದು ನೆಗೆದು ಆಟವಾಡಿ ಬಳಲಿದರು
ಪ್ರತಿಸ್ಪರ್ಧಿಯಿಲ್ಲದೇ ಗೆದ್ದೆವೆಂದು ಬೀಗಿದರು.
.
ಅವರಾಗಲೇ ಗೆದ್ದ ಭ್ರಮೆಯಲ್ಲಿದ್ದರು
ನಮ್ಮಲ್ಲೀಗ ಹೊಸ ಪಟ್ಟುಗಳಿದ್ದವು
ಸ್ಪರ್ಧೆ ಯಾವಾಗ ಬೇಕಿದ್ದರೂ ಪ್ರಾರಂಭಿಸಬಹುದು
ಚೆಂಡೀಗ ನಮ್ಮ ಮೈದಾನದಲ್ಲಿರುವುದು!
.
ಆದರೂ ನಾವು ಸ್ಪರ್ಧೆಗಿಳಿಯುವುದಿಲ್ಲ
ಗೋಲು ಹೊಡೆಯುವುದಿಲ್ಲ
ಸುಮ್ಮನಿರುತ್ತೇವೆ ಹೀಗೇ ತಣ್ಣಗೆ
ನಗುತ್ತೇವೆ ಒಳಗೇ ಸಣ್ಣಗೆ.
.
ಅವರು……..
ಪಾಪ ಅವರೀಗ ಏನು ಮಾಡುತ್ತಾರೆ?
ಅಲ್ಲಲ್ಲ ಏನು ಆಡುತ್ತಾರೆ?





Kavite chennagide……stree vaadada nelegalannu naavu avaru emba sarala roopakagalinda gattiyaagi heliddeeri madam……Kaala nammadu emba spashta helike kaviteyallide.. Samashti adakke midiyabekshte….
ಜಾಣ ಪದ್ಯ!
ಏಟಿಗೆದುರೇಟು ಕೊಡದೆ ಮೌನವಾಗಿದ್ದೆವು………ಇದು ಅಹಿಂಸೆಯಾ?ಅಲ್ಲ ಅಂದುಕೊಂಡು ಅವರು ತಿಳಿದರೆ ಸಾಕು.
ಇತ್ತೀಚೆಗಿನ ದಿನಗಳಲ್ಲಿ ನಾನು ಓದಿದ ಅತ್ಯುತ್ತಮ ಕವಿತೆಗಳಲ್ಲಿ ಇದೂ ಒಂದು. ಗದ್ಯದಲ್ಲಿ ವೈದೇಹಿಯವರ ಲೇಖನಕ್ಕೆ ಪ್ರತಿಕ್ರಿಯೆ ನೀಡಲು ಶಬ್ಧಗಳಿಗಾಗಿ ಇನ್ನೂ ಹುಡುಕಾ ನಡೆಸಿದ್ದೇನಿ.
ಎಲ್ಲರಿಗೂ ಧನ್ಯವಾದಗಳು.