ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚುಚ್ಚುವುದು ಮುಳ್ಳುಗಳಷ್ಟೇ ಅಲ್ಲ ಗಾಲಿಬ್..

 

 
 
 
 
 
ಕಾವ್ಯಶ್ರೀ ಎಚ್
 
 
 
 
ಚುಚ್ಚುವುದು ಮುಳ್ಳುಗಳಷ್ಟೇ ಅಲ್ಲ ಗಾಲಿಬ್
ಇರಿಯುತ್ತವೆ ಮೃದು ಗುಲಾಬಿ ಪಕಳೆಗಳೂ
ಯಾವುದೋ ಹಾಡು ಹೊತ್ತುತರುವ ನೆನಪುಗಳೂ
ಚಳಿಗಾಲದ ದೀರ್ಘ ಇರುಳುಗಳು
ಕಣ್ಣಕೊಳದಲಿ ಹೊತ್ತಿ ಉರಿಯುವ ಬೆಳದಿಂಗಳು
ನೇವರಿಸುತ ರಮಿಸುವ ಸುಳಿಗಾಳಿ
ಹಾರಾಡುವ ಮುಂಗುರುಳೂ
ಶತ್ರುಸೇನೆಯ ಸೈನಿಕರಂತೆ ಸಜ್ಜಾಗಿಬಿಡುತ್ತವೆ
ಅದಕೇ ನನಗೆ
ಪ್ರೀತಿಯೆಂದರೆ ವಿರಹ
ಪ್ರೇಮಿಯೆಂದರೆ ಚಿರವಿರಹಿ
ನಂಬಿದವರು ಕೊಟ್ಟ ಪೆಟ್ಟು ಸಣ್ಣದಲ್ಲ ಗಾಲಿಬ್
ಯಾರಾದರು ವಿಶ್ವಾಸದಿಂದ ನೋಡಿದರೂ
ಕಂಪಿಸುತ್ತೇನೆ ನಾನು
ಅದಕೇ ನನಗೆ
ಸಂಬಂಧವೆಂದರೆ ಉರುಳು
ಬಂಧುಗಳೆಂದರೆ ಜನ್ಮಾಂತರದ ಕರ್ಮಫಲ!

ಧ್ಯಾನದಲ್ಲೀಗ ಹೊಸ ಗೊಂದಲ
ನಿನ್ನ ನೆನಪು
ಜಪಮಣಿಯೋ? ಚಡಪಡಿಕೆಯೋ?

ದುರುಳ ಚOದಿರ
ಕoಡ ಕಂಡವರ ಕೈ ಹಿಡಿದು
ಹೊರಟೇ ಬಿಡುತ್ತಾನೆ ಜೊತೆಗೆ…

ಹಗಲೆಲ್ಲ ಕೆಂಡಕಾರಿದ ಸೂರ್ಯ
ಇರುಳ ಸಂಧಾನಕ್ಕೆ ಬೆಳದಿಂಗಳ ಮೊಗೆದು ಕಳಿಸಿದ
ಇರುಳಿಡೀ ಅವನ ಮೊರೆತಕ್ಕೆ ಕಿವಿಯಾಗಿ
ಹಗಲಲಿ ಅದರ ಅನುರಣದಲೆ ಅನುರಕ್ತೆ

ಈ ಬದುಕು ಕಡೆಗೆ ಕೊಡುವುದಾದರೂ ಏನ್ನನ್ನು ದುಃಖವನ್ನಲ್ಲದೆ ?
ಪ್ರೀತಿಯ ಒಳಿತು ಕೆಡುಕು ಉಳಿಸುವುದಾದರೂ ಏನ್ನನ್ನು ದುಃಖವನ್ನಲ್ಲದೆ ?
ನಾ ನೋಡಿರುವ ಪ್ರಾಮಾಣಿಕ ಸಂಗಾತಿಯೆಂದರೆ ನೋವೊಂದೇ,
ಬೇರಾವ ನಿಷ್ಠಾವಂತ ಗೆಳೆಯರನೂ ನಾನರಿಯೆ ದುಃಖವನ್ನಲ್ಲದೆ.
_ಹಫೀಜ್

ಅವನದೊಂದು ಮಾತು
ನನ್ನದೊಂದು ಮಾತು…
ತೀವ್ರವಾಗುತ್ತಿದೆ ಚಳಿ
Kyoshi Takahama

ಮಾಗಿಯ ಸಂಜೆ
ಬಂದು ಕೇಳುತ್ತಾಳೆ
ದೀಪ ಬೆಳಗಲೇ?
Etsujin
 
 

‍ಲೇಖಕರು avadhi

30 December, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading