ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚಿತ್ರಪಟವನು ಹರಡಿ..

ಒಂದು ಸುನೀತ

ಮಹೇಶ್ವರಿ.ಯು

ಹಗಲೆಲ್ಲ ಹಂಬಲಿಸಿ ಇರುಳೆಲ್ಲ ಕುದಿಕುದಿದು
ಬರುವ ಬಾರನೊ ಲೆಕ್ಕಕ್ಕೆ ಪೇಜುಗಳೆ ಮುಗಿದು

ಚಿತ್ರಪಟವನು ಹರಡಿ ಭವಾವಳಿಯ ಪುಳಕಕೆ ಕಾದು
ನಗೆಪಾಟಲನು ಮೀರಿ ಚರಿತೆ ತೆರೆಮರೆಗೆ
ಹಾಲಕ್ಕಿಶುಭನುಡಿದು ತನ್ಮಯಕೆ ತನಿವೋಗಿ
ಕುರುಹನರಿತೂ ಕಾಣೆ, ಬಂತೆ ಮುಸ್ಸಂಜೆ?
ಎಲೆಯಲುಗೆ ದನಿಮಿಡಿಯೆ ಮೈಗಂಧ ನಿಜಸಾರೆ
ಅಲಲ, ಕೊರಳೆತ್ತಿ ಮೈತೂಗಿ ಹಿಂಗಾಲ ನಿಗುಚಿ
ನಡೆಮಡಿಯ ಹಾಸಿ ಒಳಗಿಕ್ಕಿದರೆ ಕದ
ಭ್ರಮೆಯ ಗೋಳಕ ಹಿಸಿದು ಕದದೊಳಗೆ ಪಾಡು!

ಕದದೊಳಗೆಯೇ ಕದ, ಕದವಿಕ್ಕಿ ಕುಳಿತವರೆ
ಬಾಗಿಲನು ತೆರೆಯಿರೋ ಬಾಕಿತೀರಿಸಲುಂಟು
ಭವಭವದಭಾರಗಳ ಮಡಿಲಿಗೊಟ್ಟಲಿಕುಂಟು
ಹಂಗಿನವಳೇ ನಾನು ಹೆಚ್ಚು ಹೇಳಲು ಆರೆ

 

‍ಲೇಖಕರು admin

25 January, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading