ಚಿತ್ರಕಲೆ, ಫೋಟೋಗ್ರಫಿ ಮತ್ತು ಕೆ ಟಿ ಶಿವಪ್ರಸಾದ್

ಚಿತ್ರಕಲೆಯಷ್ಟೇ ಫೋಟೋಗ್ರಪಿ ಕೂಡ ನನ್ನ ಜೀವಾಳ ಇದು ಒಂದು ಕ್ರಿಯೇಟಿವ್ ಆರ್ಟ್ ’

ಸುವರ್ಣ ಸಿ

ಮೊನ್ನೆ ನಾನು ಮತ್ತು ಕೆ.ಟಿ.ಶಿವಪ್ರಸಾದ್ ಇಬ್ಬರು ಫೋಟೋಗ್ರಪಿ ಮಾಡುವ ಸಲುವಾಗಿ ತುಮಕೂರು ಹೊರವಲಯದ ಸುತ್ತಮುತ್ತ ಕೆಲವು ಸ್ಥಳಕ್ಕೆ ಕ್ಯಾಮರ ಹಿಡಿದು ಹೊರಟೆವು ಹೀಗೆ ಕಾರಿನಲ್ಲಿ ಹೋಗುತ್ತಿದ್ದಾಗ ಫೋಟೋಗ್ರಪಿ ಕುರಿತು ಒಂದಿಷ್ಟು ಮಾಹಿತಿ ಪಡೆಯುವ ಸಲುವಾಗಿ ಅವರೊಂದಿಗೆ ಮಾತುಕತೆಗೆ ನಾನು ಇಳಿದೆ. ಆಗ ಅವರು ಪೋಟೋಗ್ರಫಿ ಕೂಡ ಒಂದು ಕ್ರಿಯೇಟಿವ್ ಆರ್ಟ್ ಎಂದು ವಿವರಿಸುತ್ತಾ ಬಾಲ್ಯದಲ್ಲೆ ಅವರಿಗೆ ಹೇಗೆ ಫೋಟೋಗ್ರಪಿ ಗೀಳು ಹಿಡಿಯಿತು ಎನ್ನುವುದನ್ನು ನನ್ನೊಂದಿಗೆ ಕೆಲ ಕ್ಷಣ ಮೆಲುಕು ಹಾಕಿದ್ದು ಹೀಗೆ. . . . .

ನಾನು ಹೈಸ್ಕೂಲ್ ನಲ್ಲಿ ಇದ್ದಾಗ ನಮ್ಮ ಮನೆಲಿ ಬ್ರವನಿ ಕಂಪನಿಯ ಪ್ಲಾಸ್ಟಿಕ್ಬಾಕ್ಸ್ ಕ್ಯಾಮರ ಇತ್ತು ಅದುನ್ನು ತೆಗೆದುಕೊಂಡು ನನ್ನ ಕಣ್ಣಿಗೆ ಏನೇನೂ ಚನ್ನಾಗಿ ಕಾಣುತ್ತೋ , ಏನೇನು ಇಷ್ಟವಾಗುತ್ತೋ ಅದನ್ನೆಲ್ಲಾ ಕ್ಲೋಸ್ ಆಫ್ ನಲ್ಲಿ ಪೋಟೋ ತೆಗಿತ್ತಾ ಇದ್ದೆ. ಆ ಮೇಲೆ ಆ ಫೋಟೊ ಫಿಲಂ ಅನ್ನ ಹಾಸನದ ಪ್ರಖ್ಯಾತ ಫೋಟೋ ಸ್ಟ್ಟುಡಿಯೋ ಐಡಿಯಲ್ ಫೋಟೊ ಹೌಸ್ಗೆ ಹೋಗಿ ಪ್ರಿಂಟ್ ಹಾಕಿಸುತ್ತಿದ್ದೆ ಹೀಗೆ ಆ ಸ್ಟುಡಿಯೋಗೆ ರೆಗ್ಯುಲರ್ ಆಗಿ ಹೋಗುತ್ತಿದ್ದರಿಂದ ನನಗೆ ಆ ಸ್ಟುಡಿಯೋದವರು ಚನ್ನಾಗಿ ಪರಿಚಯವಾದರು. ಅವರು ನಾನು ತೆಗೆದ ಚಿತ್ರಗಳನ್ನು ಪ್ರಿಂಟ್ ಹಾಕಿದ್ದ ಮೇಲೆ ಅದರ ತಪ್ಪು ಒಪ್ಪ್ಪುಗಳನ್ನ ನನಗೆ ಹೇಳುತ್ತಿದ್ದರು ಹೀಗೆ ನನ್ನ ಅವರ ಸ್ನೇಹ ಗಾಢವಾಯಿತು ತದ ನಂತರ ಅವರು ನನಗೆ ಫೋಟೋ ಡೆವಲಪ್ ಮಾಡೋದು, ಪ್ರಿಂಟ್ ಹಾಕೋದರ ಬಗ್ಗೆಯೆಲ್ಲಾ ನಾನು ಹೋದಾಗಲೆಲ್ಲಾ ಸ್ವಲ್ಪ ಸ್ವಲ್ಪ ಹೇಳುತ್ತಿದ್ದರು ಅವರು ಹೇಳಿದ್ದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತಿದ್ದೆ. ಅದೇ ಸಮಯಕ್ಕೆ ನನ್ನ ಸ್ನೇಹಿತ ಕ್ಯಾಮರ ಆಪರೇಟ್ ಮಾಡೋದು ಮತ್ತು ಪೋಟೋಗ್ರ್ರಫಿ ಬಗ್ಗೆ ಒಂದು ಪುಸ್ತಕ ತಂದ ಅದನ್ನ ಅವನ ಹತ್ತಿರ ತೆಗೆದುಕೊಂಡು ಓದಿ ಸ್ವಲ್ಪ ತಿಳ್ಕಂಡೆ.
ಆ ಮೇಲೆ ನಮ್ಮ ಮನೆಯ ಪ್ಲಾಸ್ಟಿಕ್ಬಾಕ್ಸ್ ಕ್ಯಾಮರದಲ್ಲೇ ಚಿತ್ರ ತೆಗೆಯುತ್ತಾ ಇದ್ದೆ ಹೀಗೆ ಇರುವಾಗ ಆ ಕ್ಯಾಮರವನ್ನ ನನ್ನ ಪ್ರೀತಿಯ ತಂಗಿ ವಿಜಯಲಕ್ಷ್ಮಿ (ವಿಜಿ) ಒಂದು ದಿನ ಫೋಟೋ ತೆಗಿಯೋಕೆ ಹೋಗಿ ಕೆಳಕ್ಕೆ ಬೀಳಿಸಿ ಒಡೆದು ಹಾಕಿದಳು. ಆ ಕ್ಯಾಮರ ಒಡೆದು ಹೋಗಿದ್ದು ನನ್ನ ಮನಸ್ಸಿಗೆ ತುಂಬಾ ಬೇಸರವಾಯಿತು ಒಡೆದು ಹಾಕಿದ್ದಕ್ಕೆ ತಂಗಿಗೆ ಬೈಯುವ ಆಗಿಲ್ಲ ಸುಮ್ಮನಾದೆ. ಅದು ಒಡೆದು ಹೋದ ಮೇಲೆ ನಮ್ಮ ತಂದೆ ಅಮೇರಿಕಾಕ್ಕೆ ಹೋಗಿದ್ದರು . ಆಗ ಅಲ್ಲಿಂದ ವಾಪಸ್ಸ್ ಬರುವಾಗ 35 ಎಂಎಂನ ಒಂದು ಕ್ಯಾಮರ ತಂದಿದ್ದರು. ಹಿಂಗೆ ಒಂದು ದಿನ ಶಾಲೆಗೆ ರಜೆ ಇತ್ತು. ಆ ಕ್ಯಾಮರದಲ್ಲಿ ಫೋಟೋ ತೆಗಿಯೋನಾ ಅಂತಹ ಅಂದ್ಕಂಡು ನಮ್ಮ ಅಮ್ಮನಿಗೆ ಕ್ಯಾಮರ ಕೊಡಮ್ಮ ಅಂದೆ ಅವರು ತಗೊಂಡು ಹೋಗು ಅಂದ್ರು. ಅವರು ಹೇಳಿದ್ದೆ ತಡ ಅದನ್ನು ಬಗಲಿಗೆ ನೇತು ಹಾಕಿಕೊಂಡು ಹಾಸನದ ರೈಲ್ವೆ ಟ್ರಾಕ್ ನಲ್ಲಿ ನಡ್ಕಂಡು ಹೋಗಿ ಅಲ್ಲಿ ಏನೇನು ಕಾಣುತ್ತೋ ಅದುನೆಲ್ಲಾ ಫೋಟೋಗ್ರಾಫ್ ಮಾಡಿದೆ ಆಗ ಆ ರೈಲ್ವೆ ಸ್ಟೇಷನ್ ಹತ್ರ ಒಂದು ದೊಡ್ಡ ಮರ ಇತ್ತು ಅದುನೆಲ್ಲಾ ಫೋಟೋಗ್ರಾಫ್ ಮಾಡಿದೆ. ಹೀಗೆ ಫೋಟೋಗ್ರಫಿ ಮಾಡುತ್ತಾ ಇದ್ದೆ. ಹಾಸನ ದಿಂದ ಬಾಂಬೆಯ ಜೆಜೆೆ ಚಿತ್ರಕಲಾಶಾಲೆಗೆ ಸೇರಿಕೊಂಡ ಮೇಲೆ ಆ ಕ್ಯಾಮರವನ್ನ ನನ್ನ ಜೊತೆಯಲ್ಲೆ ತೆಗೆದುಕೊಂಡು ಹೋದೆ. ಆಗ ನನ್ನ ಹಾಸ್ಟಲ್ಮೆಂಟ್ ಇಬ್ಬರು ಸ್ನೇಹಿತರು ದೆಹಲಿಗೆ ಪ್ರವಾಸಕ್ಕೆಂದು ಹೊರಟರು ನನಗೆ ನಿನ್ನ ಹತ್ರ ಇರೋ ಕ್ಯಾಮರಾ ಕೊಡೋ ವಾಪಸ್ಸ ತಂದು ಕೊಡತ್ತೀವಿ ಎಂದು ಕೇಳಿದರು ನಾನು ಸ್ನೇಹಿತರಲ್ಲವಾ ಪ್ರವಾಸಕ್ಕೆ ಬೇರೆ ಹೊರಟಿದ್ದಾರೆ ವಾಪಸ್ಸ ತಂದು ಕೊಡುತ್ತಾರಲ್ಲವಾ ಎಂದು ಕೊಂಡು ಆ ಕ್ಯಾಮರ ಕೊಟ್ಟೆ. ಅವರು ಅಲ್ಲಿ ಏನ್ ಮಾಡಿದ್ದರೋ ಏನೋ ಕ್ಯಾಮರಾ ಕಳ್ಕಂಡು ಬಂದ್ರು. ನನಗೆ ನಿನ್ನ ಕ್ಯಾಮರ ಕಳದೋಯಿತು ಎಂದು ಅಷ್ಟೇ ಹೇಳಿದ್ದು . . . . . ಸ್ನೇಹಿತರು ಮತ್ತೆ ನನಗೆ ಕ್ಯಾಮರ ಕೊಡಲೇ ಇಲ್ಲ.

ಒಂದು ವರ್ಷ ಆದ ಮೇಲೆ ನಾನು ಹಾಸ್ಟಲ್ ಬಿಟ್ಟು ಪ್ಲಾಟ್ಗೆ ಹೋದೆ. ಆ ಪ್ಲಾಟ್ ನಲ್ಲಿ ಪಟೇಲ್ ಅಂತಹ ಒಬ್ಬ ಸ್ನೇಹಿತ ಆದ ಅವನು ಫೋಟೋಗ್ರಾಫ್ ಮಾಡೋನು . ಅವನಿಗೆ ಫೋಟೋ ಎನ್ಲಾಜರ್್ ಮಾಡೋದು ಗೊತ್ತಿತ್ತು. ಅವನ ಹತ್ರ ಒಂದು ಹಳೇಕ್ಯಾಮರ ಇತ್ತು ಅದುನ್ನ ನನಗೆ ಕೊಟ್ಟಿದ್ದ ನಾನು ಆ ಕ್ಯಾಮರದಲ್ಲಿ ಕೆಲವೊಂದು ಪೋಟೋ ತೆಗೆದೆ ಆ ಮೇಲೆ ಅವನು ನನಗೆ ಎನ್ಲಾರ್ಜ್ ಮಾಡೋದು ಹೇಳಿಕೊಟ್ಟ.  ಅಲ್ಲಿ ಎನ್ಲಾರ್ಜರ್ ಬಗ್ಗೆ ಸ್ಪಲ್ಪ ತಿಳಿದು ಕೊಂಡೆ.
ಆ ಮೇಲೆ ನಾವಿಬ್ಬರು ಸ್ವಲ್ಪ ದಿನ ಬಾಂಬೆಯಲ್ಲಿ ಫೋಟೋಗ್ರಾಫಿ ಕ್ಲಾಸ್ಗೆ ಹೋದೆವು ಅಲ್ಲೂ ಸ್ವಲ್ಪ ಕಲಿತುಕೊಂಡೆ ತದ ನಂತರ ಬಾಂಬೆಯಿಂದ ನಾನು ನನ್ನ ಚಿತ್ರಕಲೆಯ ಪದವಿಯನ್ನು ಪಡೆದು ಹಾಸನಕ್ಕೆ ವಾಪಸ್ಸ ಬಂದ ಮೇಲೆ ನಮ್ಮ ತಾಯಿ ನನಗೆ ಅಮೇರಿಕಾ ದಿಂದ ನಿಕಾನ್ ಎಫ್ 3 ಕ್ಯಾಮರ ತಂದು ಕೊಟ್ಟರು ಅದರಲ್ಲಿ ನಾನು ಸುಮಾರು ಫೋಟೋ ತೆಗೆದೆ. ತೆಗೆದ ಫೋಟೋಗಳನ್ನೆಲ್ಲಾ ನಾನೇ ಡೆವಲಪ್ ಮಾಡಿ ಸ್ಟ್ಟುಡಿಯೋ ದಲ್ಲಿ ಪ್ರಿಂಟ್ ಹಾಕಿಸುತ್ತಿದೆ ಆಗ ನನಗೆ ಗೊತ್ತಾಗಿದ್ದು ಪೋಟೋಗ್ರಫಿ ಕೂಡ ಒಂದು ಕ್ರಿಯೇಟಿವ್ ಆಟರ್್ ಅಂಥ ನಾನು ಬಿಡುವಿನ ವೇಳೆ ಆಗಾಗಾ ಮೂಡುಗೆರೆಗೆ ಪೂರ್ಣಚಂದ್ರ ತೇಜಸ್ವಿ ಮನೆಗೆ ಹೋಗುತ್ತಿದ್ದೆ ಆಗ ಅವರು ಅಲ್ಲಿ ಹಕ್ಕಿಗಳ ಬಗ್ಗೆ ಫೋಟೋಗ್ರಾಪ್ ಮಾಡುತ್ತಿದ್ದರು. ನಾನೂ ಕೂಡ ಅವರ ಜೊತೆ ಹೋಗತ್ತಿದ್ದೆ. ಆಗ ಅವರು ನನಗೆ ಶಿವ ನೀನು ಪೋಟೋಗ್ರಾಫ್ ಮಾಡೋ ನಿನಗೆ ಪೋಟ್ರೆಟ್ ಮಾಡೋಕೆ ಸಹಾಯ ಆಗುತ್ತೆ ಅಂದ್ರು ಯೋಚಿಸಿ ಹೌದು ಅಲ್ಲವಾ ನಾನು ಫೋಟೋಗ್ರಾಫ್ ಮಾಡಿದರೆ ನನ್ನ ಪೇಯಿಟಿಂಗ್ಗೆ ಅನುಕೂಲವಾಗುತ್ತೆ ಅಂದ್ಕಂಡೆ.

ಕೆಲವೊಂದು ಪೇಯಿಟಿಂಗ್ ಮಾಡಬೇಕಾದರೆ ನಮಗೆ ಮಾಡಲ್ ಬೇಕಾಗುತ್ತೆ ಎಲ್ಲಾ ಟೈಮ್ ನಲ್ಲೂ ಅಲ್ಲೇ ಹೋಗಿ ಪೇಯಿಟಿಂಗ್ ಮಾಡೋದಿಕ್ಕೆ ಆಗಲ್ಲ ಸಿಕ್ಕಾದಾಗ ಪೋಟೋ ತಗೊಂಡು ಇಟ್ಟಕೊಂಡಿದ್ದರೆ ನಮ್ಮದೇ ಆದ ರೀತಿಯಲ್ಲಿ ಆ ಚಿತ್ರಗಳನ್ನ ಬಳಸಕೋಬಹುದಲ್ಲಾ ಅಂತಹ ತಿಳ್ಕಂಡು ಫೋಟೋಗ್ರಾಫ್ ಮಾಡೋಕೆ ಶುರುಮಾಡದೆ. ಆಗ ನನ್ನ ಹತ್ರ ಕಾರ್ ಇರಲಿಲ್ಲ ಬಾಡಿಗೆ ಕಾರ್ ಮಾಡ್ಕಂಡು ಮಂಗಳೂರಿನಿಂದ ಗೋವಾದವರೆಗೆ ಎರಡು ಸಾರಿ ಹೋಗಿ ಸಮುದ್ರ, ಪ್ರಕೃತಿ ಸೇರಿದ್ದಂತೆ ಹಲವಾರು ಬಗೆಯ ಫೋಟೋಗ್ರಾಫ್ ಮಾಡ್ಕಂಡು ಬಂದೆ.
ಪೂರ್ಣಚಂದ್ರ ತೇಜಸ್ವಿ ಒಂದು ದಿನ ಮೈಸೂರಿನಲ್ಲಿ ಕುವೆಂಪು ಮನೆಗೆ ಕರ್ಕಂಡು ಹೋದ್ರು ಆಗ ಅವರು ಕುವೆಂಪುಗೆ ಅಣ್ಣ ಕೆ.ಟಿ. ಶಿವಪ್ರಸಾದ್ ಫೋಟೋ ತೆಗಿತ್ತಾನೆ ಮತ್ತೆ ಪೇಯಿಂಟಿಂಗ್ ಮಾಡತ್ತಾನೆ ಕಣಣ್ಣ ಅಂದ್ರು. ಕುವೆಂಪು ನಗತ್ತಾ ಹೌದೆನೋ ಅದೇನೋ ಕೆ.ಟಿ. ಶಿವಪ್ರಸಾದ್ ಯಾವುದೋ ಪೇಯಿಂಟಿಂಗ್ ನೋಡುದರೇ ಚಿತ್ರನೇ ನಮ್ಮ ಕಣ್ಣಿಗೆ ಎದ್ದ್ದ ಬಂದಂಗೆ ಕಾಣುತ್ತಲೋ ಅದು ಏನೋ ಅದುಕ್ಕೆ ಏನ್ ಅಂತರೋ ಹೇಳೋ ಅಂದ್ರು ನಾನು ಮುಜುಗರದಿಂದಲೇ ಅಬ್ಸ್ಟ್ರಾಕ್ಟ್ ಪೇಯಿಟಿಂಗ್ ಅಂದೆ. ಆಗ ಅವರು ಮುಗುಳು ನಕ್ಕು ನನ್ನ ಪೋಟೋ ತೆಗಿತಿಯೇನೋ ತೆಗಿ ಅಂತಹ ನನ್ನ ಕ್ಯಾಮರಕ್ಕೆ ಪೋಸ್ ಕೊಟ್ಟರು ಆಗ ನಾನು ಅಲ್ಲಿ ಅವರದ್ದು ಒಂದು ರೋಲ್ ಫೋಟೋ ತೆಗದೆ.

ನಮ್ಮ ತೋಟದ ಹತ್ರ ತೊಗಲುಬೊಂಬೆ ಆಡಸೋರು ಆ ತೊಗಲು ಗೊಂಬೆಯ ಸುಮಾರು 400-500 ಚಿತ್ರಗಳನ್ನ ಪೋಟೋಗ್ರಾಪ್ ಮಾಡಿದೆ.ೆ ಫ್ರೆಂಚೆ ದೇಶದ ಅಲೆಯೆನ್ ಫಾನ್ಸಿ ಸಂಸ್ಥೆಯ ಗ್ಯಾಲರಿ ಬೆಂಗಳೂರಿನಲ್ಲಿ ಇತ್ತು. ಇಲ್ಲಿ ನನ್ನ ಪೇಯಿಟಿಂಗ್ ಪ್ರದರ್ಶನ ಮಾಡಿದೆ. ಆ ಷೋಗೆ ಪೂರ್ಣಚಂದ್ರತೇಜಸ್ವಿ ಬಂದಿದ್ದರು. ಅಲ್ಲಿ ನನಗೆ ಶಿವ ನಾವಿಬ್ಬರೂ ಯಾಕೆ ಇಲ್ಲಿ ಫೋಟೋಗ್ರಾಫ್ ಪ್ರದರ್ಶನ ಮಾಡಬಾರದು ? ಅಂದ್ರು. ಅವರಿಗೆ ಒಂದು ಸಾರಿ ಕೇಳು ಗ್ಯಾಲರಿ ಕೊಟ್ಟರೆ ಇಲ್ಲಿ ಫೋಟೋಗ್ರಾಫ್ ಪ್ರದರ್ಶನ ಮಾಡೋಣ ಅಂದ್ರು ನಾನು ಹೋಗಿ ಕೇಳದೆ ಆ ಗ್ಯಾಲರಿಯವರು ಒಪ್ಪಕೊಂಡರು. ಆಗ ನಾನು ಮನುಷ್ಯನ ಪೋಟ್ರೆಟ್ ಚಿತ್ರಗಳನ್ನ ಪ್ರದರ್ಶಿಸಿದೆ. ಪೂರ್ಣಚಂದ್ರತೇಜಸ್ವಿ ಹಕ್ಕಿಗಳ ಲ್ಯಾಂಡ್ ಸ್ಕೇಪ್ ಫೋಟೋ ಪ್ರದರ್ಶಿಸಿದರು ಈ ಫೋಟೋ ಪ್ರದರ್ಶನಕ್ಕೆ ಪತ್ರಕರ್ತರು ಹಾಗೂ ಸಾಹಿತಿಗಳಾದ ಲಂಕೇಶ್ ಬಂದಿದ್ದರು. ಅಲ್ಲಿ ನಾನು ಒಂದು ಹುಡುಗಿ ಪೋಟ್ರೆಟ್ ಚಿತ್ರ ಪ್ರದರ್ಶನಕ್ಕೆ ಇಟ್ಟಿದ್ದೆ ಅದುನ್ನ ನೋಡಿ ಶಿವಪ್ರಸಾದ್ ನನಗೆ ಆ ಚಿತ್ರ ಕೊಡರ್ರೀ ಅಂತಹ ಕೆೇಳಿ ಕೊಂಡುಕೊಂಡರು.ಅದುನ್ನ ಅವರ ಮನೆಲೀ ಹಾಕಿಕೊಂಡಿದ್ದರು. ಆ ಮೇಲೆ ಹಾಸನದಲ್ಲಿ ನನ್ನ ಸ್ನೇಹಿತರಾದ ಜಾನಿ, ಪೀಟರ್ , ಮಂಜುನಾಥದತ್ತ ಹಾಗೂ ಇನ್ನೀತರ ಸ್ನೇಹಿತರು ಸೇರಿಕೊಂಡು ನನಗೆ ಇಲ್ಲೂ ಫೋಟೋ ಪ್ರದರ್ಶನ ಮಾಡೋ ಎಂದು ಹೇಳಿದರು ಆಯ್ತು ಅಂತಹ ಹಾಸನದ ಸ್ಲೇಟರ್ಸ್ ಹಾಲ್ ನಲ್ಲಿ ಪ್ರದರ್ಶನ ಮಾಡಿದೆ ಫೋಟೋಗ್ರಾಫಿ ಪ್ರದರ್ಶನ ನೋಡೋಕೆ 2 ರೂ ಟಿಕೆಟ್ ಮಾಡಿದ್ದವಿ ಪ್ರೇಕ್ಷಕರು ದುಡ್ಡುಕೊಟ್ಟು ನೋಡಿದರು ಹೀಗೆ ಹಾಸನದಲ್ಲಿ ಮೂರು ಸಾರಿ ಪೋಟೋ ಪ್ರದರ್ಶನ ಮಾಡಿದೆ.

‍ಲೇಖಕರು G

July 8, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: