ಸಿ ವಿ ಶೇಷಾದ್ರಿಹೊಳವನಹಳ್ಳಿ
ಸರ ಹಾಕ್ಕೊಂಡು ಸರಸರ ಬಂದು ಬೀಗ ತೆಕ್ಕೊಂಡು ಬೇಗ ಬಾ. ಹೊಸ್ಲು ಮೇಲೆ ಬಿಸ್ಲುಕಾಯ್ಸು. ಜಗುಲಿ ಮೇಲೆ ಜೋಗಾಲಿಯಾಡು. ಪಗಡೆಗೆ ಕರೆದಿದೆ ಪಡಸಾಲೆ. ಮೂಲೆಯಲೆ ಇದೆ ಉಯ್ಯಾಲೆ.
ಉಪ್ಪರಿಗೇಲಿ ಉಪ್ಪುಪ್ಕಡ್ಡಿ.
ಅಂಗಳದಲ್ಲಿ ಆಡು ಕಬಡ್ಡಿ.
ಮೆಟ್ಟಿಲಲಾಡು ಮುಟ್ಟಿಸೋ ಆಟ.
ಮಾಳಿಗೆ ಮೇಲಿದೆ ಗಾಳಿಪಟ.
ಅಟ್ಟದ ಮೇಲೆ ಅಟ್ಗುಣಿ ಯಾಡು.
ತಿಟ್ಟದ ಮೇಲೆ ಚಿಣ್ಣಿಯಾಡು.
ಲಗೋರಿಯಾಡು ಲಡ್ಡುತಿಂದು.
ಗುಲ್ಟೋರಿಯಾಡು ಗುಗ್ಗುರಿ ತಿಂದು.
ಕಪ್ಪೆ ಚಿಪ್ಪಲಿ ಕೈಮಸೆವಾಟ.
ಕೈ ಕೈ ಹಿಡಿದು ತಿಪ್ಪಾಳೆಯಾಟ.
ಅಚ್ಚಿನಕಲ್ಲು ಮೆಚ್ಚುತಆಡು.
ಕ್ಯಾಟರಿ ಬಿಲ್ಲು ಹಿಡಿದುಓಡು.
ಹಣ್ಣಿನ ಮರದಡಿಕಣ್ಣಾ ಮುಚ್ಚಾಲೆ.
ಕಟ್ಟೆಯ ಆಚೆ ಕುಂಟೋ ಬಿಲ್ಲೆ.
ದೂರ ಹೋಗಿ ಜೋರು ಮಾಡು.
ಪಕ್ಕ ಕೂತು ಚಕ್ಕ ಹಾಕು.
]]>






0 Comments