ಚನ್ನಪ್ಪ ಅಂಗಡಿ
೧
ತಿಕ್ಕಿತಿಕ್ಕಿ ತೊಳೆಯಬೇಕು
ಲಕಲಕ ಹೊಳೆಯಬೇಕು
ಕೋರೈಸುವ ಮಿಂಚಿAಚಾಗಿ
ತನ್ನತ್ತ ಸೆಳೆಯಬೇಕು
ತೊಗಲುಬಣ್ಣ ಅಗಳಿಸಿಕ್ಕ ತೀಟೆಯಾಗಿ
ಮುಗಿಲಗಲ ಮಿಗೆಯಗಲ ಚರ್ಮವ್ಯಾಧಿ
ಪರಾಧೀನ ಪ್ರಸಾಧನ ಕನ್ನಡಿ ಪರವಶ
ತಥಾಗತ ಜನ್ಮಜಾತ ನಿಸರ್ಗದತ್ತ
ಬೇಡಿದ್ದು ಬಾಚಿದ್ದು ದೋಚಿದ್ದು
ಸತ್ಯ ಶಿವ ಸೌಂದರ್ಯ – ರೂಪರೇಖೆಯದ್ದು
೨
ಕುಡಿಮೀಸೆ ಕೂಡುಹುಬ್ಬು
ಕಿಡಿನೋಟ ಹೊಡೆಗಣ್ಣು
ಗಿರಿಶಿಖರಗಳ ಬಿರಿವೆದೆ
ಸೀಳುಹನಿ ಝರಿಯಾಗಿ ತೊರೆಯಾಗಿ
ತಳಕು ಬಳಕು ನಿರ್ದೇಶಿತ ಮೈಮಾಟ
ಅದರುದುಟಿ ಕೆದರುಗೂದಲಲಿ ಬೆರಳಾಟ
ಸಂದುಸAದಿಯಲಿ ಕರಗುವ ಬೆಣ್ಣೆ
ರೂಕ್ಷದಂಗದಲಿ ರಕ್ಕಸ ರಸ ಚಿಮ್ಮಿ
ಕಳಚುತಾ ಪೊರೆಯ ಗರಬಡಿದ ಹರೆಯ
೩
ದೇಶ – ಆದೇಶ ಭಾರ(ತ)ದ ಪದಪುಂಜ
ಖುರ್ಚಿ ಖಯಾಲಿ ಮೂರೊತ್ತು ಸರಿಹೊತ್ತು
ಉಡದ ಹಿಡಿತ ತಲೆಯೇರಿದ ಕಿರೀಟ
ಸಾಲುತಲೆ ಮೇಲೆ ಕೈಯಿಟ್ಟು ಕಾಲಿಟ್ಟು
ಅಪ್ಪಣೆ ಕೊಡಿಸಿ ಫತ್ವಾ ಹೊರಡಿಸಿ
ದರಕಾರವುಂಟೆ ಸರಕಾರದ ಕಡತಕ್ಕೆ
ಕಡಿದಷ್ಟು ತುರುಸಿ ಮಿಡಿಯುವುದನು ಮರೆತು
ನೀರಮೊಸಳೆ ಹುಲ್ಲುಗಚ್ಚದ ಹುಲ್ಲೆ ಸ್ಥಾನ ಬಲ-
ವೊಂದಿರೆ ವಂದಿಮಾಗಧರು ಸುಳಿದೆಗೆದು
ಅತಿಕ್ರಮಣ ಅರಿದಮನ ಗಡಿಹಿಗ್ಗಿ ಸುಗ್ಗಿ
ದೈವತ್ವಕ್ಕೇರಿದರು ಬೇಡೆಂದವರು ಅಧಿಕಾರ

೪
ಹುಲುಸಾಗಲೆನ್ನುವುದು ಗೆಲುಮನದಾಸೆ
ತಿನ್ನುವೆರೆಡು ರೊಟ್ಟಿ ಅರಗದ ಹಾಗೆ
ಸಿರಿಯ ಗರಬಡಿದು ಎರಗುವುದು ಹೀಗೆ
ಒಂದಕ್ಕೆರೆಡು ಕೊಂಡು ಕಂಡರಿದ ಕಣಜ
ಪುಕ್ಕಟೆ ಸಿಕ್ಕರೆ ನನಗೂ ಮತ್ತು….
ಚರಸ್ಥಿರ, ಗರಿಗರಿ, ಝಣಝಣ ಗಳಿಕೆಯೆಣಿಕೆ
ದುಂದುಗಾರಿಕೆ ದಂದುಗದಲಿ ತಣಿಯದ ಬಾಯಾರಿಕೆ
ಬಾಚಿ ಹೆಕ್ಕಿ ಸೀಟಿ ನೆಕ್ಕಿ ಗತ್ತು – ಗಮ್ಮತ್ತು
ಒಳಹೊರಗಣ ಹೂರಣ ಆಸೆಯಾಗಿ ಸಂಪತ್ತು
೫
ಕೀರ್ತಿಶನಿ ಅವಡುಗಚ್ಚಿ ಸಿದ್ಧಿಪ್ರಸಿದ್ಧಿ ಕಿವಿಕಚ್ಚಿ
ಹೆಸರು ಮಾಡುವ ತವಕದಲಿ ಕೆಸರಲಿ ಹೂತು
ಇಂದ್ರಚAದ್ರ ಉಪಾಧಿಗೆ ಮತ್ತೆಮತ್ತೆ ಸೋತು
ಶ್ರೇಷ್ಠತೆಯ ವ್ಯವಸನದಲಿ ಭ್ರಷ್ಟಗೊಂಡ ಬುದ್ಧಿಯಲಿ
ದೂರವಾದಂತೆಲ್ಲ ಬೆಳಕು ಲಂಬಿಸುವುದು ಕರಿನೆರಳು
ಕೀರ್ತೀಯ ಕೀಲಿಯಲಿ ನಜರಬಂಧಿ ಖೈದಿಯಾಗಿ
ನಾಮೆಯ ನಾಡಿಯಲಿ ನಾಮಾವಶೇಷ ಕೀರ್ತಿಶೇಷ.
2. ಮೆದುಬೆರಳಿನ ಸಾರುವಯ್ಯ…
ನಡುಮನೆಯಲ್ಲಿ ಹರಿದಾಡುತ್ತ ಆಡುತ್ತ
ಹಜಾರದ ಕಡೆಗೆ ಬರಬರುತ್ತ
ಬಾಗಿಲ ಕಡೆಗೆ ನೋಡುನೋಡುತ್ತ
ಅದೊಂದು ವಿಶೇಷ ದಿನವಾಗುತ್ತ
ತಲೆಬಾಗಿಲ ಚಟ್ಟು ಹಾಕುವುದನು
ಮರೆತಿರಬಹುದು ತಾಯಿ
ಒಳಗೆ ಅಳಿದುಳಿದ ಕಸ ತೆಗೆಯುತ್ತಲೋ
ಪಾತ್ರೆಪಗಡ ತಿಕ್ಕುತ್ತಲೋ… ಮನೆಯವರೆಲ್ಲ
ತಿಂದುಳಿದ ಅಗಳುಗಳನ್ನು ಮುಕ್ಕುತ್ತಲೋ
ತಿಂಗಳದ ತಂಗಳರಿವೆಯನು ಬದಲಿಸುತ್ತಲೋ….
ಬೆಳಕು ಕಂಡ ಬಳ್ಳಿಯಾಗಿ ಚಿಗುರಿತು ಮಗು
ಬಾಗಿಲ ಹೊರಗೆ ಕುಡಿಚಾಚಿ
ಹೊಸ್ತಿಲು ದಾಟಿದ್ದು, ಆನೆ ನಡೆದದ್ದೇ ದಾರಿ
ತೆವಳುತ್ತ ಬಂದು ಸಿಕ್ಕ ಮರಳುಗುಡ್ಡೆ
ಹೊತ್ತಿಗೆ ಮುಂಚೆ ದಕ್ಕಿದ ಹೊನ್ನರಾಶಿ
ಪುಟ್ಟ ಮೆದುಬೆರಳಲಿ ಗೀಚಲಿ-
ಟ್ಟುಕೊಂಡಿತು ಕೂಸು ವಕ್ರವಕ್ರವಾಗಿ.
ಇದುವರೆಗೂ ಶೋಧಿಸದ ಹೊಸ ಭಾಷೆ
ಪಂಡಿತ ಪರಕೀಯರು ಬರೆಯದ ಲಿಪಿ
ಅಳಿಸಬಹುದಾದ ಹಣೆಬರಹದ ಲಿಪಿ
ಲೋಕಭವಿಷ್ಯವನು ಸಾರಿದ ಸಾರುವಯ್ಯ
ಸೂರ್ಯಲಾಂದ್ರವ ಹಿಡಿದು ಮುನ್ನಡೆದ

ಆಕಾಶ ಕೊಡೆಯಡಿ ತಂಪು ನೆರಳಲಿ ಕೂತು
ಗ್ರಹಗತಿಗಳು ತಮ್ಮ ಪ್ರಸವ ಕಾಲದಲಿ
ಆಂ… ಊಂ… ನರಳಿಕೆಯನು ಓಂಕಾರ ನಾದವಾಡಿ
ತನ್ನದೇ ನುಡಿಯಲಿ ಹಾಡಿದನು ಕಂದ
ಕAಡಕAಡಲ್ಲೆಲ್ಲ ಕಣ್ಣು ಹಾಯಿಸುತ
ಕಾರಣವಿಲ್ಲದೇ ತಂತಾನೇ ನಗುತ
ತೆರೆದ ಬಾಯನು ಮುಚ್ಚಲು ಮರೆತು
ಬಟ್ಟಬಯಲಲಿ ಹೂಂಕರಿಸುವ ಮಂತ್ರಘೋಷ
ನಿಯತಿಯಿಲ್ಲದೆ ಜಾರುವ ಜೊಲ್ಲು
ಬಂಡೆಯ ಮುಷ್ಟಿಯಂದಿಳಿದ ಜಲಪಾತ
ಚರ್ಮಕಂಟಿದ ಮಣ್ಣುಮಸಿ ನುಣುಪಿಗೆ ಜಾರಿ ಬೀಳುತ
ಮುತ್ತಿಕೊಳ್ಳುವ ನೊರಜು ನೊಣಗಳು
ಲೆಕ್ಕಹತ್ತದೆ ದಿಕ್ಕುತಪ್ಪಿ ಕೊಕ್ಕುಮಸೆದ ಕಾಗೆ
ಕಕ್ಕಬೇಕೆಲ್ಲೆಂದು ತಿಳಿಯದೇ
ಕಾಲುಗುರಿಗೆ ಉಜ್ಜಿ ಕರಕರ ಕಿರುಗುಟ್ಟಿ
ಹೆಜ್ಜೆಹೆಜ್ಜೆಗೂ ನಡೆವ ಆಗುಹೋಗಿಗೆ
ಕಳ್ಳಾಟ, ಕಣ್ಣೋಟಗಳಲ್ಲೇ ಉತ್ತರ ತಣ್ಣಗೆ
ಕಾಲನೂರಲು ಹವಣಿಸಿ ಮಂಡಿ ನೆಲತಾಗಿ
ಒಮ್ಮೊಮ್ಮೆ ತೆವಳಿ ಮತ್ತೊಮ್ಮೆ ಅಂಬೆಗಾಲಿಕ್ಕಿ
ಎತ್ತಲೋ ಹೊರಟ ಮಹಾನಡಿಗೆ
ಪುಣ್ಯವಂತರ ಪ್ರಭಾತಫೇರಿ, ಪಾದಯಾತ್ರೆ.
ಮರಳರಾಶಿಯ ಮೇಲೆ ಹೊಯ್ದು ಉಚ್ಚೆಯು
ಗೀಚಿದ ಭವಿಷ್ಯದ ಸಾಲುಗಳನಳಿಸಿ
ಜಗದ ನಾಳೆಯು ಹೇಗೋ ಏನೋ
ತಿಳಿಯದಂತಾಗಿದೆ ಇಂದಿಗೆ;
ಎಂದೆAದಿಗೂ….!






0 Comments