ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚದುರಂಗ ಆಡಲು ಕುಳಿತೆವು ಇಬ್ಬರೂ ಬೆಳೆಯುತ್ತಿದ್ದೇವೆ..

m s krishnamurthy geetha

ಕೃಷ್ಣಮೂರ್ತಿ ಗೀತಾ 

ಸೂಜಿ ಕಳೆದು ಹೋಗಬಾರದೆಂದು
ದಾರ ಪೋಣಿಸಿಟ್ಟಿದ್ದಳು ಅಮ್ಮ
ನಾನು ಕೇಳಿದೆ
ಈ ಗುಡಿಸಲು ಹೊಲೆಯಬಹುದೇ ಅಮ್ಮ ಇದರಲ್ಲಿ
ಅಮ್ಮ ನಕ್ಕು ಹೇಳಿದಳು
ದಾರ ಸಾಕಷ್ಟಿದ್ದರೆ ಸಮಾಜವನ್ನೆ
ಹೊಲೆಯುತ್ತೇನೆ…….
ಹಸಿವು ಹೊಲೆಯುವ ಅಮ್ಮ
ಹಸಿದ ಕರುಳು ಹೊಲೆದುಕೊಳ್ಳಲಾರಳೆ

needle and thread

ಅವ್ವ
ಕವಿತೆ ಬರಿ ಮಗಾ ಎಂದಳು
ಹಸಿವಿನ ಕವಿತೆ ಬರೆದೆ
ಅವ್ವ ನನ್ನ ರೊಟ್ಟಿಯ ಜೊತೆಗೆ
ತನ್ನ ಪಾಲಿನ ರೊಟ್ಟಿ ಕೊಟ್ಟು
ಕವಿತೆ ತೆಗೆದುಕೊಂಡಳು
ಹಸಿವಿನ ಕವಿತೆ ಬರೆಯುವುದೆಂದರೆ..

needle and thread

ಅಮ್ಮ ಆಡಾಡುತ್ತಾ ಚಿಕ್ಕವಳಾಗುತ್ತಿದ್ದಳು
ನಾನು ಆಡಾಡುತ್ತ ದೊಡ್ಡವನಾಗುತ್ತಿದ್ದೆ
ವಯಸ್ಸಿನ ಒಂದು ಬಿಂದುವಿನಲ್ಲಿ ಸಮಾನಂತರವಾಗಿ ಬೇಟಿಯಾದೆವು
ಖುಶಿಯಾಗಿ
ಸಂತೋಷವಾಗಿ

ಚಿತ್ರ: ಬಿರ್ಡಿರಾಜ್ / ಫೈನ್ ಆರ್ಟ್  A

‍ಲೇಖಕರು Admin

4 February, 2016

3 Comments

  1. venkatesha G

    Simply Beautiful

  2. padma bhat

    channagide 🙂

  3. Sindhu

    Superb

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading