ಹನಿ ಹನಿ
ಮೋಹನ್.ವಿ.ಕೊಳ್ಳೇಗಾಲ

ಕಾಗೆಗೂಡಲ್ಲಿ ಕೋಗಿಲೆ ಮೊಟ್ಟೆ ಸೇರಿತು
ನೋವಿನಿಂದ ಕೂಗಿದ ಕೋಗಿಲೆಯ ಒಂಟಿ ದನಿ
ಜಗಕೆ ಕರ್ಣಾನಂದವಾಯಿತು
*
ಪುಣ್ಯಕೋಟಿಯ ಕಥೆಯ ಕೇಳಿದ ಪ್ರಾಣಿಯ
ಸುತ್ತ ಬರಿ ಹುಲ್ಲು
ಹಸಿವ ತಾಳದ ವ್ಯಾಗ್ರ ಜಾರಿ ಬಿದ್ದಿತು
*
ನಿನ್ನೆ ಕನಸ್ಸಿನಲ್ಲಿ ಬಂದಿದ್ದ ನ್ಯೂಟನ್
ಗುರುತ್ವಾಕರ್ಷಣಕ್ಕೆ ತಳ ತಿರುಗಿಸಿದಿರುವೆ
ಎಷ್ಟು ದೂಡ್ಡದಿದೆ ಎಂದಿದ್ದ
*
ಚಂದ್ರನ ಬಗ್ಗೆ ನೂರು ಕವಿತೆ ಕಟ್ಟಿದ ಕವಿಗಳಿಗೆ
ಅವನಿಗೂಂದು
ಜೋಡಿ ಹುಡುಕಲಾಗಲಿಲ್ಲ
*
ಒಲೆಯ ಬೆಂಕಿಯಿಂದ ಬೆಳಕಾಗುತ್ತದೆ
ಒಳಗೆ ಕೆಂಡ ಮಿನು ಮಿನುಗಿ
ಒಲೆಯನ್ನೇ ಸುಡುತ್ತಿರುತ್ತದೆ
*
ಹೂ ಬಿರಿಯುತ್ತಿದೆ ಗಿಡದ ಮೇಲೆ
ದೇವರ ಕೊರಳಿನಲ್ಲಿ
ಬಾಡುವ ಅವಸರದಲ್ಲಿ
*
ನಾ ಕೊಂಡ ಚಿನ್ನದುಂಗುರದ ನಡುವೆ
ನನ್ನ ಬೆರಳು
ಬಂಧಿಯಾಗಿದೆ
*
ದೇವರ ಫೋಟೋ ಸಿಕ್ಕಿಸಿಕೊಂಡ
ಮೊಳೆಗೆ
ಇನ್ನಿಲ್ಲದ ಭಾರ
*
ಧೂಮಪಾನ ಹಾನಿಕಾರಕ
ಗಣೇಶ ಬೀಡಿ ಮೇಲೆ
ಗಣಪತಿ ಚಿತ್ರ
*
ಅಮ್ಮನೆದೆ ಕಚ್ಚಿದ, ಆಗಷ್ಟೇ ಹುಟ್ಟಿದ
ನಾಯಿ ಮರಿಗಳಿಗೆ
ಅಪ್ಪನ ಚಿಂತೆಯೇ ಇಲ್ಲ!
*
ಊರನ್ನೇ ಸುತ್ತುವ ಚಪ್ಪಲಿಗೆ
ಮನೆಯೊಳಗೆ ಪ್ರವೇಶವಿಲ್ಲ
*
ಹರಿಯುವ ನದಿ ಸೇರುವುದು ಕಡಲಿಗೆ
ಅಲ್ಲಲ್ಲಿ ರೈತರು ಬೆಳೆದ ಪೈರಿಗೆ
ಸಂಭ್ರಮದ ಓಲಾಟ
ಮಳೆಗಾಲ, ಕಪ್ಪೆ ವಟಗುಟ್ಟುತ್ತಿದೆ ಮಿಲನಕ್ಕೆ
ಅಲ್ಲೇ ಕದ್ದು ಮುಚ್ಚಿ ಸೇರಿದ್ದ
ಜೋಡಿಗಳಿಗೆ ಇನ್ನಿಲ್ಲದ ತೊಂದರೆ
*
ಸೊಪ್ಪಿನ ಸಾರಿಗೆ ಸೇರಿದ ಮೊಸರ ಕಂಡು
ಅಳುತ್ತಿದೆ ಕರು
ಗದ್ದೆಯಲ್ಲಿ ಸೊಪ್ಪಿನ ಕೊರಳಳು ಜೋರು
*
ಬೆಂಗಳೂರಿನ ಜನಸಂದಣಿಯ ನಡುವೆ
ನೆಗೆಯುವ ನೂರಾರು ವಾಹನಗಳು
ಮೇಲೆ ಒಂಟಿ ಜೀವಗಳು
*
ಆ ಕೆರೆಗೆ ನೆಗೆದು ಪ್ರಾಣ ಕಳೆದುಕೊಂಡ ದೇಹ
ಹಿಂದೊಮ್ಮೆ ಕೋಟಿ ವೀರ್ಯಾಣುಗಳನ್ನು
ಹಿಂದಿಕ್ಕಿ ಮೆರೆದಿತ್ತು
*
ಒಂಟಿತನ ಹೆಚ್ಚಾಗಿ ಕೂಗಿಕೊಂಡೆ ಮರದ ಕೆಳಗೆ
ಅಲ್ಲೇ ಒಂಟಿಯಾಗಿ ಹಾರಾಡಿದ
ಹಕ್ಕಿಯೊಂದು ಬಣ್ಣದ ಪುಕ್ಕ ಎಸೆದಿತ್ತು
*
ನೀರಿನಲ್ಲಿ ಈಜುವ ಮೀನು
ಪ್ರಪಂಚ ಕಂಡೊಡನೆ
ವಿಲವಿಲನೆ ಒದ್ದಾಡುತ್ತದೆ
*
ಸಿಪ್ಪೆ ಬಿಚ್ಚಿಸಿಕೊಂಡು ಸಿಹಿಹಂಚಿದ
ಬಾಳೆಹಣ್ಣು
ಖುಷಿಯಿಂದ ಜಾರಿತು ಅನ್ನನಾಳದಲ್ಲಿ









I just loved the deep thought I nside the poems. Nice
Thaja thaja haikugalu manassige kachuguli ettavu.
jeevantikeyinda koodida hykugaLu..!
ಓದಿಸಿದ ಅವಧಿಗೆ, ಓದಿದ ಎಲ್ಲರಿಗೂ ವಂದನೆಗಳು
ಆ ಕೆರೆಗೆ ನೆಗೆದು ಪ್ರಾಣ ಕಳೆದುಕೊಂಡ…. 🙂