ಚಂದನ ವಾಹಿನಿಯಲ್ಲಿ ಇತ್ತೀಚೆಗೆ ಒಂದು ಸುಂದರ ಕಾರ್ಯಕ್ರಮ ಪ್ರಸಾರ ಆಯ್ತು. ರಂಗಕರ್ಮಿ ಎಸ್. ಕೆ .ಮಾಧವ ರಾವ್ ಅವರನ್ನು ಪ್ರಸಿದ್ಧ ಸಾಹಿತಿ ಗುಂಡೂ ರಾವ್ ಅವರು ಸಂದರ್ಶನ ಮಾಡಿದರು. ಎಸ್.ಕೆ .ಮಾಧವ ರಾವ್ ಕೈಲಾಸಂ ನಾಟಕಗಳಲ್ಲಿ ಅತಿ ಹೆಚ್ಚು ವಿತಂತು (ವಿಧವೆ ) ಪಾತ್ರ ಮಾಡಿರುವ ಕಲಾವಿದ. ಈ ಪಾತ್ರ ಹಾಗೆನ್ನುವುದಕ್ಕಿಂತ ವಿಧವೆ ಎನ್ನುವ ಪಟ್ಟ ಹೆಣ್ಣುಮಕ್ಕಳಿಗೆ ಅತ್ಯಂತ ಖೇದಕರ ಪರಿಸ್ಥಿತಿ .
ಅದರಲ್ಲೂ ಕೆಲವು ಜಾತಿಗಳಲ್ಲಿನ ಹೆಣ್ಣುಮಕ್ಕಳಿಗೆ ಈ ಪರಿಸ್ಥಿತಿಯ ಘೋರ ಪ್ರಪಂಚದ ಅರಿವು ಇದ್ದೇ ಇದೆ. ಎಸ್ಕೆಎಂ ಎಂದು ಕರೆಯುವ ಮಾಧವರಾಯರನ್ನು ನಾಟಕ-ಮಕ್ಕಳ-ಮಹಿಳೆಯರ ಮಾಧವ ರಾವ್ ಎಂದೇ ಪ್ರಖ್ಯಾತಿ ಹೊಂದಿದ್ದಾರೆ.
ಯಾಕೆ ಕೈಲಾಸಂ ನಾಟಕಗಳಲ್ಲಿ ವಿತಂತು ಪಾತ್ರಗಳು ಸದಾ ಕೋಪ-ಸಿಡಿಮಿಡಿಯನ್ನು ತೋರುತ್ತಿದ್ದವು ಎನ್ನುವುದಕ್ಕೆ , ಕಾರಣ ಆ ಪಾಪದ ಹೆಣ್ಣುಮಗಳು ತನಗೆ ಬದುಕಲ್ಲಿ ಸಿಗದೇ ಇರುವ ಸುಖ-ಸಂತೋಷ ಬೇರೆಯವರಿಗೆ ಸಿಕ್ಕಾಗ ಆ ನೋವು ಸಹಜ.
ಪೂರ್ಣ ಓದಿಗೆ –ಮೀಡಿಯಾ ಮೈಂಡ್]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



0 Comments