ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೊತ್ತಿಲ್ಲ… ಕಡಲಿಗೂ, ಅವರಿಗೂ..

ಜಂಟಿ ಹೂಗಳ ಜಾತ್ರೆ

– ಚೈತ್ರಿಕಾ ಶ್ರೀಧರ್ ಹೆಗಡೆ


ಉದುರಿದ ಪಕಳೆಗಳನೆಲ್ಲ
ಹಸಿರು ದೇಟಿಗೆ ಅಂಟಿಸಿಕೊಂಡವು..
ಅವುಗಳ ನೀಲಿ ಮೆಲ್ಲಗೆ
ಮುಗಿಲ ಬರೆಯಿತು..
ನಡುವೆ ತಿಳಿಗೆಂಪಿನೆಸಳ
ಸಿಕ್ಕಿಸಿದಾಗ, ಎಲ್ಲೆಡೆಯೂ
ಮಣ್ಣು ಹರಡಿತು..
*
ನದಿಯ ಕಿಲಕಿಲವ,
ಹಕ್ಕಿ ಕಲರವವ ಹೆಕ್ಕಿ ಹೆಕ್ಕಿ,
ಜೊತೆಗೇ ಹೊಲಿದುಕೊಂಡವು..
ಒಂದಷ್ಟು ತೆಗೆದು ಎಲ್ಲರ
ತುಟಿಗಂಟಿಸಿದವು..
ದಳದ ತುದಿಯ ಕಂಬನಿ,
ಪ್ರತಿ ಬೆಳಗಿಗೂ ಜಾರಿ..,
ಜಗವ ನಗಿಸುವ ಜರೂರಿ.
 
ಪಕಳೆ ಬಿಚ್ಚಿ ಪಕಪಕನೆ
ನಕ್ಕಂತೆ, ಕಡಲು ಶಾಯಿ
ಸುರಿದು ಪತ್ರ
ಬರೆಯುತಿದೆ ನಮಗೆ!
 
ಈ ದಳಗಳೊಳಗೇ
ನಾವಿರುವುದು ಗೊತ್ತಿಲ್ಲ,
ಕಡಲಿಗೂ…ಅವರಿಗೂ..
*
ಗಂಧ ಹರಡಿದರೆ
ಗುರುತಿಸಬಹುದೆ ಅವರು?
ಕಸಿವಿಸಿಯಾಗಬಹುದೆ
ಕಡಲು, ನಾವದನು
ಮರೆತಿದ್ದಕ್ಕೆ?
 
ಬಿಡಿ ಬಿಡಿಯಾಗಿ ಬಿದ್ದುಕೊಂಡ
ನಮ್ಮ, ಜಂಟಿಯಾಗಿ ನೇಯ್ದ
ಹೂಗಳಿಂದ ಜಾರೋದು
ಹೇಗೆ ಹೇಳು?
*
ಇದ್ದು ಬಿಡೋಣ ಕದ್ದು ಮುಚ್ಚಿ,
ಈ ಹೂವ ಮೇಲೆ ಇರುಳು
ತೇರನೆಳೆವಾಗ..
 
ಅವರು ಹುಡುಕಿದಷ್ಟೂ,
ನಮ್ಮೊಳಗೆ ನಾವು ಕಳೆಯುತ್ತ..
*
 
 

‍ಲೇಖಕರು G

16 July, 2015

4 Comments

  1. noorullathyamagondlu

    ಚೆನ್ನಾಗಿದೆ.

  2. ನಾಗರಾಜ ವೈದ್ಯ

    ಚೆನ್ನಾಗಿದೆ ಕವಿತೆ

  3. Vijaya lakshmi S.P.

    ನೇಯ್ಗೆ ಸುಂದರವಾಗಿದೆ

  4. savitri hiremath

    nimma kaviteya holige elekeeladantide.its nise.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading