ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೊಟಗೋಡಿಯಲ್ಲಿ ಕನಕ-ಶರೀಫ ಪುರಸ್ಕಾರ ಪ್ರದಾನ ಸಮಾರಂಭ

ಪ್ರಶಸ್ತಿಗಳನ್ನು ಖ್ಯಾತ ಗೀತರಚನೆಕಾರ ಹೃದಯಶಿವ ಹಾಗೂ ಸಾಹಿತಿ ಬಿ. ಪೀರಭಾಷ ಪ್ರದಾನ ಮಾಡಲಿದ್ದಾರೆ.

2022ನೇ ಸಾಲಿನ ಪ್ರಶಸ್ತಿಗೆ ಚನ್ನಪ್ಪ ಅಂಗಡಿ, 2023ನೇ ಸಾಲಿಗೆ ಜಾಜಿ ದೇವೇಂದ್ರಪ್ಪ, 2024ನೇ ಸಾಲಿಗೆ ಎ. ಎಸ್. ಮಕಾನದಾರ ಹಾಗೂ 2025ನೇ ಸಾಲಿಗೆ ಮಂಜುಳಾ ಕಿರುಗಾವಲು ಆಯ್ಕೆಯಾಗಿದ್ದು, ಇದೇ ಸಮಾರಂಭದಲ್ಲಿ ಅವರನ್ನು ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಕಾರ್ಯಕ್ರಮದಲ್ಲಿ ಉತ್ಸವ ರಾಕ್ ಗಾರ್ಡನ್ ಕ್ಯುರೇಟರ್ ವೇದಾರಾಣಿ ದಾಸನೂರ,ಕವಿ ಲೇಖಕಿ ಮಮತ ಸಾಗರ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಮಲ್ಲಿಕಾರ್ಜುನ ಮಾನ್ಪಡೆ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಜಯದೇವಿ ಗಾಯಕವಾಡ, ಅನುವಾದಕರು ಪತ್ರಕರ್ತರಾದ ಮಂಜುನಾಥ್ ಚಾಂದ್, ಡಾ ಟಿ.ಎಮ್. ಜಾನಪದ ವಿ.ವಿ ಕುಲಪತಿಗಳಾದ ಡಾ ಟಿ.ಎಮ್.ಭಾಸ್ಕರ್, ನಾಟಕ ಅಕಾಡೆಮಿ ಸದಸ್ಯರಾದ ಮಮತಾ ಅರಸಿಕೆರೆ ಉಪಸ್ಥಿತರಿರುತ್ತಾರೆ.

ಲಲಿತಕಲಾ ಅಕಾಡೆಮಿ ಸದಸ್ಯರಾದ ಕರಿಯಪ್ಪ ಹಂಚಿನಮನಿ, ಶಿಲ್ಪಕಲಾ ಅಕಾಡೆಮಿ ಸದಸ್ಯರಾದ ಹರೀಶ್ ಮಾಳಪ್ಪನವರ, ಡಾ ಪ್ರಕಾಶ್ ಭಟ್ ಗ್ರಾಮಾಭಿವೃದ್ಧಿ ವಿಜ್ಞಾನಿ -ಚಿಂತಕ ಹಾಗೂ ಉಮಾಪತಿ ಗಜಾನನ ಭಟ್ ಪರಿಸರ ತಜ್ಞ ಇವರನ್ನು ಇದೇ ವೇಳೆ ರಾಕ್ ಗಾರ್ಡನ್ ಸಮಿತಿ ಸನ್ಮಾನಿಸಲಿದೆ.

ದಿನಾಂಕ ೧೧ ಜುಲೈ ಸಂಜೆ ಹಾಗೂ ದಿನಾಂಕ ೧೨ ಜುಲೈ ಮುಂಜಾನೆ ಕಾವ್ಯ ಹಾಗೂ ಗಜಲ್ ಗೋಷ್ಠಿಗಳಿದ್ದು ರಾಜ್ಯದ ವಿವಿಧ ಭಾಗದ ಕವಿಗಳು ಗಜಲ್ಕಾರರು ಈ ಗೋಷ್ಠಿಗಳಲ್ಲಿ ಕವಿತೆ ವ ಗಜಲ್ ವಾಚನ ಮಾಡಲಿದ್ದಾರೆ.

ಹಿರಿಯರಾದ ಅಬ್ದುಲ್ ಹೈ ತೋರಣಗಲ್, ಶಿಶು ತಜ್ಞರಾದ ಡಾ ಶ್ರೀಶೈಲ ಮಾದಣ್ಣವರ, ಅರುಣಾ ನರೇಂದ್ರ ಇವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮದ ಸಂಯೋಜನೆಯನ್ನು ಹೆಬಸೂರ ರಂಜಾನ್ ಹಾಗೂ ದೀಪಾ ಗೋನಾಳ ವಹಿಸಿದ್ದಾರೆ.

‍ಲೇಖಕರು Admin

6 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading