ಶಿವಯೋಗಿ ಕಳ್ಳಿಮಠ
ಮಣ್ಣ ವಿಸ್ತಾರಕ್ಕೆ ಹರಡಿ
ಹಸಿರ ಬಿತ್ತಿ
ಬಾಂಧವ್ಯ ಬೆಳೆವವ
ಎಲ್ಲ ಋತುಗಳಲ್ಲೂ
ನಗು ಹೂ ಗೊಂಚಲು, ತಂಪನೀವ ನೆಳಲು
ಅಕ್ಕರೆಯ ಆಲ,
ಬಿಳುಲುಗಳ ನೆಟ್ಟು ಗೆಳತನವ
ಹೆಣೆವ
ಸಿಟ್ಟು, ಬೇಸರ ಕೊಲ್ಮಿಂಚು..
ಸದ್ಯದ ಕಾಳಜಿಯ ಮಳೆಗೆ ಪೂರಕ ಅಷ್ಟೆ
ಕಾರ್ಯಕ್ಕೆ ಛಲ, ಬಿರುಸು
ತಕ್ಕ ಫಲವ ದೊರಕಿಸುವ ಜಾಣ್ಮೆ
ಮೀನಿನ ನೀರಾಟದ
ಸರಾಗ.

ಎಲ್ಲರ ಒಳಗೊಳ್ಳುವ
ಈ ಮಾನವೀಯ ಕಸುಬು ಆಕಾಶದಗಲಕ್ಕು ..
ಸಜ್ಜನಿಕೆಯ ನದಿ
ಹರಿದೆಡೆ ಒಳ್ಳೆತನದ ಚಿಗುರು
ತಾರುಣ್ಯದ ಹೊಳೆವ ಜೀವಂತಿಕೆಯ
ಕಣ್ಣು.
ಈತನ ಸ್ಪಷ್ಟತೆ, ಗಣಿತ
ನನ್ನಗೆ ಬೆರಗು.






0 Comments