—————————————–
(ಕಬೀರ ದಾಸರ ಮೂಲ ಹಿಂದಿ ಗೀತೆ :
‘ಸಖಿಯಾ, ವಹ ಘರ ಸಬಸೇ ನ್ಯಾರಾ…’ )
—————————————–
ಅನುವಾದ : ಗೋಪಾಲ ವಾಜಪೇಯಿ

ಗೆಳತಿ, ಮನಿ ಅಂದರ ಖರೆ ‘ಆ’ ಮನಿ…
ಅಲ್ಲೆ ಇರತಾನ ಪೂರ್ಣಪುರುಷ ನಮ್ಮ ಧಣಿ…
ಅಲ್ಲಿಲ್ಲ ಗೆಳತಿ ಸುಖ-ದುಃಖ, ಇಲ್ಲ ಖರೆ-ಸುಳ್ಳುಗಳ ಲೆಖ್ಖ
ಪಾಪ-ಗೀಪಗಳಿಲ್ಲ ಪುಣ್ಯ-ಗಿಣ್ಯಗಳಿಲ್ಲ
ದಿನ-ರಾತ್ರಿ, ಸೂರ್ಯ-ಚಂದ್ರರ ಗೊಡವಿ ಇಲ್ಲ
ದೀಪ ಇಲ್ಲದ ಬೆಳಕು ಬೆಳಗುತದೆಯಲ್ಲ…
ಗೆಳತಿ, ಮನಿ ಅಂದರ…

ಧ್ಯಾನ-ಗೀನ ಏನೂ ಬ್ಯಾಡ ಅಲ್ಲೆ
ಜಪ-ತಪಗಳ ಉಸಾಬರಿ ಇಲ್ಲ ನೋಡ…
ವೇದ-ಶಾಸ್ತ್ರ ಇಲ್ಲ, ಮಂತ್ರ-ಗಿಂತ್ರ ಇಲ್ಲ
ಕರ್ಮಾಕರ್ಮ ಅನುಷ್ಥಾನವಿಲ್ಲ…
ಗೆಳತಿ, ಮನಿ ಅಂದರ…
ಆಶ್ರಯವಿಲ್ಲ ನಿರಾಶ್ರಯವಿಲ್ಲ, ಅಲ್ಲಿಲ್ಲ ಒಳಗು ಹೊರಗು
ಅಂಡ-ಪಿಂಡ ಬ್ರಹ್ಮಾಂಡಗಳು ಗೊತ್ತಿಲ್ಲ
ಪಂಚತತ್ವ ಗುಣ ತ್ರಿಕಾಲಗಳು ಅಲ್ಲಿಲ್ಲ
ಶಬ್ದವೇ ಕೇಳದು ಗೆಳತಿ
ಗೆಳತಿ, ಮನಿ ಅಂದರ…
ಬೇರು ಇಲ್ಲ, ಮ್ಯಾಲೆ ಹೂವು ಇಲ್ಲ, ರೆಂಬಿ ಕೊಂಬಿ ಬೀಜ ಇಲ್ಲ
ವೃಕ್ಷವಿಲ್ಲದೆ ಅಲ್ಲಿ ತುಂಬು ಫಲವೆಲ್ಲ…
‘ಓಂ’ ಸ್ವರ ಅಲ್ಲಿಲ್ಲ, ‘ಸೋಂ’ ಕೇಳಿ ಗೊತ್ತಿಲ್ಲ
ಶ್ವಾಸ ಉಛ್ವಾಸ ಅಲ್ಲಿಲ್ಲ
ಗೆಳತಿ, ಮನಿ ಅಂದರ…
ನನ್ನಯ್ಯ ಪುರುಷ ಇರುವಲ್ಲಿ ಬ್ಯಾರಿಲ್ಲ
ಅಂತಾನೆ ಕಬೀರ, ಅರಿತೆನು ನಾನದನು
‘ನಾನು’ ಅರಿತುದನ್ನು ‘ಕಾಣು’ವಂಥವನು
ಮುಕುತಿಯನು ತಾನೇ ಪಡೆಯುವನು ಗೆಳತಿ
ಗೆಳತಿ, ಮನಿ ಅಂದರ…
ಗೆಳತಿ, ಮನಿ ಅಂದರ…
ನಿಮಗೆ ಇವೂ ಇಷ್ಟವಾಗಬಹುದು…





ಚೆನ್ನಾಗಿದೆ ಸರ್….
ನಿಮ್ಮ ಕಾವ್ಯ ಶೈಲಿಯ ಛಾಯೆ ದಟ್ಟವಾಗಿ ಸುಂದರವಾಗಿದೆ….. ತುಂಬಾ ಇಷ್ಟವಾಯ್ತು
tumba chennagide kavana
ತುಂಬಾ ಸೊಗಸಾಗಿದೆ… ಗಾಢವಾಗಿದೆ… ಇಷ್ಟವಾಯಿತು.
idu original kabir. omme odi nodi….i personally think none other than Gopal sir cn bring so much life to kabir in Kannada…SIR, HATS OFF…..
Sakhiya Wah Ghar Sabse Nyara- KABIR
Abode of the Beloved
Sakhiya Wah Ghar Sabse Nyara,
Jaha Puran Purush Humara
Jaha Nahi Sukh Dukh
Sanch Jhuth Nahi
Pap Na Pun Pasara
Nahin Din Reyn Chand Nahi Suraj,
Bina Jyoti Ujyara
Nahin Tahan Gyan Dhyan
Nahin Jap Tap
Ved Kiteb Na Bani
Karni Dharni Rehni Gehni,
Yeh Sub Jahan Hirani
Ghar Nahin Aghar Na Bahar Bhitar,
Pind Brahmand Kachu Nahin
Panch Tatva Gun Tin Nahin Tahan,
Sakhi Shabd Na Tahin
Mul Na Phul Beli Nahin Bija,
Bina Braksh Phal Sohe,
Oham Soham Ardh Urdh Nahin,
Swasa Lekhan Kou Hai
Jahan Purush Tahwan Kachu Nahin,
Kahe Kabir Hum Jana
Humri Sain Lakhe Jo Koi,
Pawe Pad Nirvana
ನಿರೂಪಣಾ ತಂತ್ರ ಬಲಿಷ್ಠವಾಗಿದೆ ಕವಿತೆಯಲ್ಲಿ .
ಕಬೀರ ಎನ್ನುವ ಸಂತ , ಗೆಳತಿ, ಮನೆ. ಇವೆಲ್ಲವನ್ನೂ ಮಡಿಲಲ್ಲಿ ಹರವಿ ಒಂದೊಂದನ್ನೇ ಹೆಕ್ಕಿ ಪದಗಳಲ್ಲಿ ತೂಗು ಹಾಕಿ ಕಾವ್ಯ ಸಂತೆಯಲ್ಲಿ ಮಾರಾಟಕ್ಕೆ ಕುಳಿತ ಕವಿ ಪ್ರಾಪಂಚಿಕ ನಡೆಗಳಲ್ಲಿ ಖರೀದಿದಾರರನ್ನು ಮಂತ್ರಮುಗ್ದಗೊಳಿಸಿದೆ.
“ಮನೆಯೆಂಬೋ ಬದುಕಿನಲ್ಲಿ ಮನವೆಂಬೋ ಮಾಯದ ಚಿಲಕ ತೆರೆದು ಒಳಗೆ ಕರೆದನೋ ಕಬೀರ”
ನಿಮ್ಮ ಭಾಷೆಯ ಸೊಗಡು, ಸೊಬಗು ಸವಿಯುವುದೇ ಸಂಭ್ರಮ.
ನಿಮ್ಮ ಭಾವಾನುವಾದ ತುಂಬ ಮನ ತಟ್ಟುವಂತಿದೆ… ಕುಮಾರ ಗಂಧರ್ವರ ಧ್ವನಿಯಲ್ಲಿ ಕೇಳಬಹುದು
paapavanthe ,punyavanthe ondu ariye naa ghanta saala avra haadu nenapaaytu,nimma anuvaadadalli anubhaavi horage bartidini aadre innu poorna prakatavagilla. Chennagide.bari kabirara dhyaanadalle muluga bedi sir namma madhura chennarannu swalpa ee avadhige parichaya maadsi.
Dhanyavaada modalu Avadhige nantara nimage.
ಆಹಾ ಸುಂದರ ಕವನ. ಒಳ್ಳೆ ಅನುವಾದ ಗೋವಾ ಸರ್.
ಅಣ್ಣಾ..
ಅರ್ಥ…
ಭಾವಾರ್ಥ ತುಂಬಾ ಸೊಗಸಾಗಿದೆ..
ಇದು ನೀವೇ ಬರೆದದ್ದು ಅನ್ನುವ ಹಾಗಿದೆ…
Wonderful work sir..This is where you stand different from other translators!!