ಒಂದಷ್ಟು ಹಾಯ್ಕುಗಳು…
ಮೋಹನ್ ವಿ ಕೊಳ್ಳೇಗಾಲ
1.
ನನ್ನವಳು ಹುತ್ತಕ್ಕೆ ಹಾಲೆರೆಯುವಾಗ
ಹಸಿದ ಮಗುವನ್ನು ಹಿಡಿದುಕೊಂಡ
ನಾನು ಮನೆಯಲ್ಲಿ ಜಿರಲೆ ಸಾಯಿಸುತ್ತಿದ್ದೆ!
2.
ಒಳಗೆ ಆತ ದೇವರಿಗೆ ಕಾದು ಕಾದು
ಸುಸ್ತಾಗಿ ಕೈ ಮುಗಿದು ನಿಂತಿದ್ದಾನೆ
ಹೊರಗೆ ಮಕ್ಕಳು ಅವನ ಚಪ್ಪಲಿ ಕಾಯುತ್ತಿವೆ
3.
ಆ ಹುಣಸೇಮರದಲ್ಲಿ ಹಣ್ಣಿಗೊಂದರಂತೆ ಹೆಣ ತೂಗುತ್ತಿವೆ
ಈ ಬಾರಿ ಇಳುವರಿ ಕಡಿಮೆಯಾಯಿತೆಂದು
ಬೀದಿಯಲ್ಲಿ ಎಂದಿನಂತೆ ಜಗಳ ನಡೆಯುತ್ತಿದೆ
4.
ಬೀಸಾಡಿದ್ದ ಬಿರ್ಯಾನಿ ಪೊಟ್ಟಣದಲ್ಲಿ
ಅಳುತ್ತಿವೆ ಎರಡು ಕೋಳಿ ಕಾಲು
ಪ್ರತಿಭಟನೆಗೆ ಜೊತೆಯಾಗಿವೆ ನೂರು ಅಕ್ಕಿ ಕಾಳು
5.
ದೇವರ ಕ್ಯಾಲೆಂಡರ್ ಗೆ ಕೈ ಮುಗಿದಪ್ಪ
ಗಣೇಶ ಬೀಡಿ ಕಟ್ಟನ್ನು
ಕೊಳಕು ಚಡ್ಡಿಯೊಳಗಿಟ್ಟುಕೊಂಡ
6.
ದೇವರ ಫೋಟೋ ಸಿಕ್ಕಿಸಲು
ತಲೆ ಬಡಿಸಿಕೊಂಡ ಮೊಳೆ
ಶಿವ ಶಿವ ಎನ್ನುತ್ತಿದೆ ನಿನ್ನೆಯಿಂದಲೂ!
7.
ಗೆಳತಿ, ನಿನ್ನನ್ನು ಪ್ರೀತಿಸುವುದೆಂದರೆ
ಅರ್ಧಕೆರೆ ಈಜಿ ಕೈಸೋತು ನಿಲ್ಲುವುದು
ಯಾವ ಕಡೆ ಹೋದರೂ ಅಷ್ಟೇ ದೂರ
8.
ಬೇಸರದಲ್ಲಿ ಮಲಗಿದ್ದಾಗ, ಅಪರೂಪವೆಂಬಂತೆ
ಬಾಗಿಲ ಬಳಿ ನಿಂತಳು ಅವಳು
ಮೈ ಗಿಂಡಿಕೊಂಡೆ, ನೋವಾಗಲಿಲ್ಲ!
9.
ಮೇಲೆ ಹೊದಿಸಿದ ರಗ್ಗಿನಲ್ಲಿ
ಬಣ್ಣದ ಚಿಟ್ಟೆಗಳಿದ್ದರೂ
ಒಳಗೆ ಸುಕ್ಕು ಹಾಸಿಗೆಯಿದೆ
10.
ಉಡುಗೊರೆಯಾಗಿ ನೀ ಕೊಟ್ಟಿದ್ದ
ಕಲರ್ ಟೀವಿ ಹಚ್ಚಿದಾಗ
ಬ್ಲಾಕ್ ಅಂಡ್ ವೈಟ್ ಸಿನಿಮಾ





ಎಲ್ಲಾ ಹಾಯ್ಕುಗಳು ಮನ ಮುಟ್ಟುವಂತಿವೆ ಗೆಳೆಯ.
ಮುಖ್ಯವಾಗಿ ೮ನೇ ಹಾಯ್ಕು ನಮ್ಮ ಎಲ್ಲರ ಕನಸ್ಸು!!!!
oh! Adhbhutha saalugalu. Bahu Arthagarbhithavaagive..
thumba chennagive
Mohan,
Your haikus are amazing! You have captured the irony of day-to-day life with such simplicity and keen observation. Kudos!!!
ಅತ್ಯುತ್ತಮ ! ಎಲ್ಲ ನಮ್ಮ ಬದುಕಿಗೆ ಹತ್ತಿರವಾಗಿರುವಂಥವು.. ಹೀಗೆಯೇ ನಡೆಯಲಿ ನಿಮ್ಮ ಸಾಹಿತ್ಯ ಜಾತ್ರೆ 🙂
Superb lines!
ಚೆನ್ನಾಗಿದೆ, ಒಂದಷ್ಟು ವಾಸ್ತವಗಳು ಹಾಯ್ಕುಗಳಾಗಿ ಸೊಗಸಾಗಿದೆ ಎನಿಸುತ್ತಲೆ ವಾಸ್ತವದ ಅರಿವನ್ನೂ ನೀಡಿ ಕಾಡುತ್ತವೆ.
ಹಾಯ್ಕುಗಳು ಮನದಲಿ ಹಾಯ್ದು, ತಮ್ಮ ನೆಲೆಯೂರಿ ಬಿಟ್ಟವು!
tumba chennagive
nice…all are fantastic..!!
ಅವಧಿ ತಂಡ ಮತ್ತು ಮೆಚ್ಚಿಕೊಂಡ ಎಲ್ಲರಿಗೂ ತುಂಬು ಹೃದಯದ ವಂದನೆಗಳು… 🙂
nimma haikugalalli vastavada chitrana,adorottige namma acharabe,badukina vichitra anukaranegalu …ivelavugala novu,sittu vyangya ….manamuttuva haage barediddiri….
ಧನ್ಯವಾದ ರವಿವರ್ಮಣ್ಣ…. 🙂