ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗೃಹ ಪ್ರವೇಶಕ್ಕೆ ಪುಸ್ತಕ ತಾಂಬೂಲ

ಅಕ್ಕ ಮಲ್ಲಿಕಾ ಮತ್ತು ಭಾವ ಡಾ. ಬಸವರಾಜು ತಮ್ಮ ಹೊಸಮನೆ ‘ಧರ್ಮ ಮೇಘ’ದ ಗೃಹ ಪ್ರವೇಶದ ಸಂದರ್ಭದಲ್ಲಿ’ಪುಸ್ತಕ ತಾಂಬೂಲ’ವಾಗಿ, ಮೌಖಿಕ ಪರಂಪರೆಯ ಗುರುಗಳೂ, ಸಿನಿಮಾ ನಿರ್ದೇಶಕರೂ, ಬೌದ್ಧ ವಿದ್ವಾಂಸರೂ ಆಗಿದ್ದ ಕೆ.ಎಂ.ಶಂಕರಪ್ಪನವರ ‘ ಬುದ್ದ ಬರಲಿ ನಮ್ಮೂರಿಗೆ’ ಪುಸ್ತಕ ನೀಡಿದರು; ಜಾಲಾರ ಪ್ರಕಾಶನ ಹುಟ್ಟು ಹಾಕಿದರು.

ನಮ್ಮ ಹಳ್ಳಿತೋಟದ ತೋತಾಪುರಿ ಮಾವು, ಪುಸ್ತಕದ ಜೊತೆಗೂಡಿ ತಾಂಬೂಲದ ಸೊಬಗನ್ನು ಇನ್ನಷ್ಟು ಹೆಚ್ಚಿಸಿತು.

ಗೃಹ ಪ್ರವೇಶ, ನಾಮಕರಣ, ಮದುವೆ ಮೊದಲಾದ ಸಂಭ್ರಮದ ಕ್ಷಣಗಳಿಗೆ ಇಂಥ ಅರ್ಥಪೂರ್ಣ ಉಡುಗೊರೆ ಜೊತೆಗಿರಲಿ. ಪ್ಲಾಸ್ಟಿಕ್ ಡಬ್ಬಿ, ಸ್ಟೀಲ್ ಪಾತ್ರೆ , ಕೆಜಿ ಲೆಕ್ಕದಲ್ಲಿ ತೂಗಿತರುವ ರವಿಕೆ ಕಣ ಮೂಲೆ ಸೇರಲಿ.

ಹೋಮ ಹವನಗಳಿಲ್ಲದೆ, ಹಳ್ಳಿಕಾರ್ ಹಸು ಮನೆ ತುಂಬಿ, ಬಂಧು ಮಿತ್ರರು ಹಾಡಿ, ಕುಣಿದು, ಹೋಳಿಗೆ ಊಟ ಚಪ್ಪರಿಸಿದ ಕ್ಷಣಗಳು ಗೃಹ ಪ್ರವೇಶದ ಸಂಭ್ರಮವನ್ನು ಹೆಚ್ಚಿಸಿದವು.

-ಜಿ ಕೃಷ್ಣಪ್ರಸಾದ್

‍ಲೇಖಕರು avadhi

22 May, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading