ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗುಳಿಗೆ ನುಂಗಿದರೂ ನಿದ್ದೆ ಬರದ ಈ ದಿನಗಳಲ್ಲಿ…

ಚಿಲ್ಲರೆ ಕಾಸಿನ ಕನಸು

ಪ್ರಸನ್ನ ಚಲಂ

ದಿನವಿಡೀ ಕನಸಿ
ಬಾಲ್ಯದ ಕೊನೆಗಾಲದಲ್ಲೂ
ಸಿಗದ ಸೈಕಲ್ಲಿನ ಹಳೇ ಟೈಯರ್ರು
ಗೇರು ಬದಲಿಸುವ ಸೈಕಲ್
ಕೊಳ್ಳುವ ದಿನ ನೆನಪಾಗುತ್ತದೆ.
ಕಾರ್ಡ್ ಉಜ್ಜಿ ಅಂಗಡಿಯಿಂದ
ಹೊರ ಬೀಳುವ ಧಿಮಾಕು
ನೋಡುವ ಮುನ್ನ
ಕರೆಯಾದರು ಬಿಡದೇ
ಕಿಸೆ ತುಂಬಾ ನೇರಳೇಹಣ್ಣನ್ನು
ತುಂಬುವ ಸಂಭ್ರಮವನ್ನು
ನೀನು ನೋಡಬೇಕಿತ್ತು.
ಬೇಸಿಗೆಯ ಬಿಸಿಲಿನ ದಿಗ್ದರ್ಶನಕ್ಕೆ
ಎ.ಸಿ ರಿಮೋಟಿನ ಬಟನ್ನು ಒತ್ತುವಾಗ
ಮದ್ಯಾಹ್ನದೂಟದ ಪರಿವೆಯೇ ಇಲ್ಲದೇ
ಗಲ್ಲಿ ಗಲ್ಲಿಯಲಿ ಗೋಲಿಯನು
ಗೆದ್ದು ಬೀಗುವ ತೃಪ್ತಿಯಿಲ್ಲ
ನೆರಳಿನೊಟ್ಟಿಗೆ ಓಡುತ್ತಾ ಓಡುತ್ತಾ
ಸದಾ ಸಂವಹಿಸುತ್ತಾ
ನನ್ನೊಳಗಿನ ಬೆರಳನ್ನು
ಕೆದಕುವ ಅದರ ಕೈಗಳು
ಆಗ ಕಪ್ಪಗಿರಲಿಲ್ಲ
ಗುಳಿಗೆ ನುಂಗಿದರೂ
ನಿದ್ದೆ ಬರದ ಈ
ದಿನಗಳಲ್ಲಿ ಹರಿಕತೆ
ಕೇಳುತ್ತಾ ಹಾಗೆ ನಿದ್ದೆ
ಹೋದ ಆ ದಿನಗಳು
ಈಗ ನನ್ನವುಗಳಲ್ಲ.
ಜಾತ್ರೆಯಲ್ಲಿ ಮಕ್ಕಳಿಗೆ
ದುಡ್ಡುಕೊಡುವ ಅರ್ಹತೆ ಪಡೆದವನ
ಎದೆಯಲ್ಲಿ ಅಜ್ಜನ ಚಿಲ್ಲರೆ ಕಾಸಿನ
ಕನಸು ಕರಗವುದೇ ಇಲ್ಲ.
 

‍ಲೇಖಕರು avadhi

25 May, 2013

3 Comments

  1. Naveena

    waaw…

  2. mmshaik

    nice poem..

  3. Anonymous

    ಪದ್ಯ ತುಂಬಾ ಆಪ್ತವಾಗಿದೆ. ಬದುಕಿನ ಸಣ್ಣ ಸಣ್ಣ ಆಸೆಗಳು, ಕನಸುಗಳು ನೆನೆದಾಗ ಎಷ್ಟು ಚೇತೋಹಾರಿಯಾಗಿರುತ್ತವಲ್ಲ .

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading