ಗುಲ್ಜಾರರ ’mera kuch saamaan tumhaare paas padaa hai’
ಕನ್ನಡದಲ್ಲಿ ಹೇಗೆ ಕಾಣಬಹುದೆ೦ಬ ನಮ್ಮ ಪ್ರಶ್ನೆಗೆ
ಸ್ವರ್ಣ ಸ್ಪ೦ದಿಸಿದ್ದು ಹೀಗೆ..
ನನ್ನದೊಂದು ಕನಸು ನಿನ್ನ ಬಳಿಯೇ ಉಳಿದುಬಿಟ್ಟಿದೆ
ಅದ ಬಿಡಿಸಿದ ಬಿಳಿಯ ಹಾಳೆ,ಮತ್ತೊಂದಿಷ್ಟು ರಂಗು
ಎಲ್ಲ ಸೇರಿಸಿ ಇಲ್ಲೇ ಇಟ್ಟಿದ್ದೆ
ಆ ರಾತ್ರಿಯ ಮರೆತು, ನನ್ನದೆಲ್ಲವ ಮತ್ತೆ ಕೊಟ್ಟು ಬಿಡು
‘ನಾನೆಂಬ’ ನನ್ನ ಕನಸ ಇತ್ತು ಬಿಡು
ಶಿಶಿರದಲ್ಲಿ ಹೊಯ್ದಾಡುವ ಎಲೆಗಳು
ಹೊಮ್ಮಿಸುವ ಮಾರ್ದವ ಸಂಗೀತ,
ಇಂದೂ ಕೇಳಬಲ್ಲೆ ನಾ .
ಕಂಪಿಸುತ್ತಿದೆ ಈಗಲೂ ಆ ರೆಂಬೆ,
ಕಡಿದು ಬಿಡು ಆ ಬಂಧವ, ‘ನಾನೆಂಬ’ ನನ್ನ ಕನಸ ಇತ್ತು ಬಿಡು
ಒಂದೇ ನೆರಳಿನಡಿ ಇಬ್ಬರೂ ನಡೆದಿದ್ದೇವೆ
ಅರ್ಧ ತೋಯ್ದು , ಅರ್ಧ ಒಣಗಿ, ಒಣಗಿದ್ದನೆಲ್ಲ ನಾ ತಂದಿದ್ದೇನೆ
ತೊಯ್ದ ಮನವಿನ್ನೂ ನಿನ್ನ ದಿಂಬಿನಡಿ ಇರಬಹುದು
ಅದ ಕಳಿಸಿಬಿಡು , ‘ನಾನೆಂಬ’ ನನ್ನ ಕನಸ ಇತ್ತು ಬಿಡು
ಒಂದು ಬೆಳದಿಂಗಳ ರಾತ್ರಿ….., ನಿನ್ನ ಭುಜದ ಆ ಕರಿ ಚುಕ್ಕೆ
ಹಸಿ ಹಸಿ ಮೆಹೆಂದಿಯ ಘಮ, ಕೊಂಚ ಹುಸಿ ಮುನಿಸು
ನೆನಪಿಸು ಸುಳ್ಳಿನೆಲ್ಲ ವಚನಗಳ
ಎಲ್ಲ ಕಳಿಸಿಬಿಡು, ‘ನಾನೆಂಬ’ ನನ್ನ ಕನಸ ಇತ್ತು ಬಿಡು
ನನಗಿದೊಂದು ಅನುಮತಿ ಕೊಡು
ಇವನೆಲ್ಲಾ ನೀನೆಲ್ಲಿ ಹುಗಿಯುತ್ತಿಯೋ, ಅಲ್ಲಿ ನಾ ಮಲಗಲು ಜಾಗ ಕೊಡು
ಸ್ವರ್ಣಾ
ಅವಧಿಯಲ್ಲಿ ಮೂಡಿಬ೦ದ ಗುಲ್ಜಾರ್ ಬಗೆಗಿನ ಲೇಖನ ಇಲ್ಲಿದೆ
]]>
ಗುಲ್ಜಾರ್: ‘ನಾನೆಂಬ’ ನನ್ನ ಕನಸ ಇತ್ತು ಬಿಡು
ನಿಮಗೆ ಇವೂ ಇಷ್ಟವಾಗಬಹುದು…





i salute you dear Swarna!!!Wow!!
malathi S
Very long back I ad read a poem titled ” Helen” I think by Louis Macniese, in which he had written “Come Helen, give me my soul again”. I just recalled the lines on goi8ng through your poem Swarna. The poem is very good with its Unique presentation and images. Thank you very much for giving a good poem.
Ramesh Megaravalli (Megaravalli Ramesh)
Excellent interpretation by Ms Swarna….This song is one of my favourite one….modala baarige ee haadu kelida nenapu innoo dattavaagide.
i dont have any words to say on this,it is simply superb, and heart touching,i know we are living in the heart less world, but this will remain in the hearts of millions till their last breath.
d,ravi varma hospet