ಗುರು ಪ್ರೀತಿಗೆ ಮಾದರಿ ಸಾಹಿತಿ ಚಂಪಾ

 ಸತೀಶ್ ಕುಲಕರ್ಣಿ

ಚಂಪಾ ಹೆಸರು ಕೇಳದವರಾರು ? ನೇರ, ಖಡಕ್ ಚಾಟಿ ಮಾತಿಗೆ ಹೆಸರಾದ ಚಂಪಾ ಯಾರೇ ತಪ್ಪು ಮಾಡಿದರೂ ಟೀಕಿಸದೇ ಬಿಟ್ಟವರಲ್ಲ. ಆದರೆ ಇದೇ ಚಂಪಾ ಹಾವೇರಿಗೆ ಬಂದರೆ ತಮ್ಮ ಹೃದಯ ಬಿಚ್ಚಿ ನೆನಪಿಸಿಕೊಳ್ಳುವುದು ಹೈಸ್ಕೂಲ್ ದಿನಗಳಲ್ಲಿ ಇಂಗ್ಲೀಷ್ ಕಲಿಸಿದ ಶತಾಯುಷಿ ಗುರು ಎಂ. ಬಿ. ಹಿರೇಮಠ ಮತ್ತು ಕಾಲೇಜು ದಿನಗಳಲ್ಲಿ ಗುರುಗಳಾಗಿದ್ದ ಡಾ. ವಿ.ಕೃ ಗೋಕಾಕ್ ಅವರುಗಳನ್ನು.

ಗುರು ಪ್ರೀತಿಗೆ ಹೆಸರಾದ ಚಂಪಾ ಅವರಿಗೆ ಈಗ ೮೦ ವಯಸ್ಸು. ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ೪ ದಶಕಗಳ ಕಾಲ, ಹೆಚ್ಚು ಪ್ರಾಧ್ಯಾಪಕ ವೃತ್ತಿ ಮಾಡಿದವರು. ತಾವು ಎಷ್ಟೇ ಎತ್ತರ ಬೆಳೆದರೂ, ಗುರು ಪ್ರೀತಿಯನ್ನು ಮರೆಯದವರು. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಚಂಪಾ ಒಂದು ಮಾದರಿ.

ನಮ್ಮ ಜಿಲ್ಲೆಯವರೇ ಆದ ಡಾ. ವಿ.ಕೃ ಗೋಕಾಕೆ ಮತ್ತು ಚಂದ್ರಶೇಖರ ಪಾಟೀಲ ಇಬ್ಬರೂ ಸವಣೂರು ತಾಲ್ಲೂಕಿನವರು. ಗೋಕಾಕರು ನನ್ನ ಅಂತರಂಗದ ಗುರು ಎಂದು ಮೈಸೂರಿನಲ್ಲಿ ಜರುಗಿದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದಲೂ ನುಡಿದವರು. ನನ್ನ ಗುರು ಗೋಕಾಕ್ ರು ಎಂಬ ಪುಸ್ತಕವನ್ನು ಬರೆದಿದ್ದಾರೆ.

ಕಳೆದ ವರ್ಷ ಇಂಗ್ಲೀಷ್ ಕಲಿಸಿದ ಗುರುಗಳಾದ ಎಂ. ಬಿ. ಹಿರೇಮಠರಿಗೆ ನೂರು ವರ್ಷ ತುಂಬಿದಾಗ ಖುದ್ದು ಹಾವೇರಿಗೆ ಬಂದು ತಾವು ಕಲಿತ ಮುನ್ಸಿಪಲ್ ಹೈಸ್ಕೂಲಿನಲ್ಲಿಯೇ ಗುರುಗಳನ್ನು ಸನ್ಮಾನಿಸಿದ್ದರು. ಅಲ್ಲದೆ ತಾವು ಕಲಿತ ಶಾಲೆಗೆ ಸಾವಿರಾರು ರೂಪಾಯಿ ಮೌಲ್ಯದ ನೂರಾರು ಪುಸ್ತಕಗಳನ್ನು ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶೋಭಾ ಜಾಗಟಗೇರಿಯವರಿಗೆ ನೀಡಿದ್ದರು.

ವಿ.ಕೃ. ಗೋಕಾಕ್ , ಎಂ.ಬಿ. ಹಿರಾಮಠ, ರಾಕು, ಎನ್.ಬಿ. ಜೋಶಿ, ಹುಚ್ಚಪ್ಪ ಬೆಂಗೇರಿ, ಸವದತ್ತಿ ಮಾಸ್ತರ ಅವರಗಳನ್ನು ಸದಾ ನೆನೆಯುವ ಚಂದ್ರಶೇಖರ ಪಾಟೀಲರು ಸೆಪ್ಟೆಂಬರ್ ೦೫ ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಗುರು ಶಿಷ್ಯ ಮತ್ತು ಕಲಿತ ಶಾಲೆಯ ಬಗ್ಗೆ ಇರುವ ಪ್ರೀತಿಗೆ ಒಂದು ಮಾದರಿಯ ದೃಷ್ಟಾಂತ.

‍ಲೇಖಕರು avadhi

September 12, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. BVKulkarni

    I donot agree these views. Hhad misbehaved with Prof Gokak during Gokak agitation, though Gokak was in favour of primacy to Kanada in Education. On many occasions he was criticising Mr Gokak. It was nature of Mr Chanmpa. Champa is not an ideal teacher, researcher. He was sent to Central Institute of English, inspite of leave and Scholarship he came back without research and PhD. By blackmailing University, he became Professor in Karnataka University. He did this using his caste lobby. Champa is not role model for anybody.

    ಪ್ರತಿಕ್ರಿಯೆ
  2. Sameer Malipatil

    ಪ್ರೀತಿಯಿಲ್ಲದೆ ನಾನು ಏನನ್ನೂ ಮಾಡುವುದಿಲ್ಲ .. ದ್ವೇಷವನ್ನು ಕೂಡ – ಚಂಪಾ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: