
ಪ್ರಶಾಂತ್ ಎಮ್ ಸಿ
ಬಂಧ ಉಬ್ಬಿ
ಬಂದ ಗುಬ್ಬಿ
ಸಾಲು ಕೂತು
ಸಾರಿ ಹೇಳಿತು
ನನ್ನ ಉಳಿಸಿ
ನನ್ನ ಉಳಿಸಿ
ರಂಗ ತರಂಗ
ನನ್ನಂತರಂಗ
ಕೆಣಕಿ ಕೆದಕಿ
ಸಂತತಿ ದುರ್ಗತಿ
ಕಂಡಿದೆ ಕಂಡಿರಾ ?
ಸಾಲು ಗುಬ್ಬಿಯಾ
ಮತ್ತೆ ನೀವ್ ಕಂಡಿರಾ?

ನನ್ನ ಮೇಲೆ
ಬ್ರಹ್ಮಾಸ್ತ್ರ ಏಕೆ ?
2ಜಿ 3ಜಿ 4ಜಿ 5ಜಿ
ತೂಗಲಾರೆ ನಾ ಜಿ..
ಮುಳ್ಳ ಮೇಲೆ ನಾ
ಗುಬ್ಬಚ್ಚಿ ಪಾಪಚ್ಚಿ
ಬದುಕಲು ಬಿಡಿ
ಬದುಕಿ ನೀ ನಡಿ
ಪರಿಸರವೆ ಪಾಠಶಾಲೆ
ನಮ್ಮ ಪರಿ ನಮ್ಮ ನಾಳೆ
ಬದುಕಿ ಬಾಳೆ ಬಿಳಿ ಹಾಳೆ
ಕೆದಕಿ ಬೀಳೆ ಎಲ್ಲಾ ಹಾಳೇ….






0 Comments