ಹೀಗಿಷ್ಟು ಸಾಲುಗಳು.
ಶೀಲಾ ಭಂಡಾರ್ಕರ್
ಇರುವಿಕೆಯ
ಗಮನಿಸಬಹುದು
ಆದರೆ ಮುಟ್ಟಲಾಗದು
ಇರುವುದುಂಟು ಕೆಲವರು
ಹೂ-ಪರಿಮಳದವರು!
ನಿಂತಿದ್ದರೆ ನೀನಾ
ಬದುಕಿನಾ ತಿರುವಿನಲ್ಲಿ
ಮುಂದೆ ಸಾಗಬಹುದಿತ್ತು
ಜೊತೆಯಾಗಿ!

ನೀನಿರದೆಯೇ
ಕಳೆಯಬೇಕಾದ
ಒಂಟಿತನ
ನೀನಿರದ ಕಳೆದು ಹೋದ
ಕಡೆಯ ಕ್ಷಣ!
ಇಬ್ಬನಿ ಮುಸುಕಿದ ನನ್ನೂರು
ಗುಟುಕಿಸುವ ಚಹಾದೊಳಗೂ
ನಿನ್ನ ನೆನಪು!






ನಿಂತಿದ್ದರೆ ನೀನಾ
ಬದುಕಿನಾ ತಿರುವಿನಲ್ಲಿ
ಮುಂದೆ ಸಾಗಬಹುದಿತ್ತು
ಜೊತೆಯಾಗಿ!
ಬದುಕಿನಲ್ಲಿ
ಪ್ರತಿಯೊಬ್ಬರಿಗೂ
ದಾಟಿ ಹೋಗುವ
ನಿರೀಕ್ಷೆಯ ಆ ಕ್ಷಣ…