ಗುಂಡುರಾವ್ ದೇಸಾಯಿ ಮಕ್ಕಳ ಕಾದಂಬರಿ – ಬೆಳಿಗ್ಗೆ ಎದ್ದಾಗ ಎಂಟಾಗಿತ್ತು…

ಕವಿ ಗುಂಡುರಾವ್ ದೇಸಾಯಿ ಮೂಲತಃ ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದವರು. ಎಂ.ಎ, ಬಿ.ಇಡಿ ಪದವೀಧರರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರು.

ವೃತ್ತಿಯಲ್ಲಿ ಪ್ರೌಢ ಶಾಲೆಯ ಕನ್ನಡ ಭಾಷಾ ಶಿಕ್ಷಕನಾನೆ ಸತ್ತಾಗ, ಸರ್ಜರಿಯ ಆ ಸುಖ, ಸಿಟಿಯೊಳಗೊಂದು ಮನೆಯ ಮಾಡಿ ಪ್ರಕಟಿತ ಲಲಿತ ಪ್ರಬಂಧಗಳು, ಡಯಟಿಂಗ ಪುರಾಣ ಹಾಸ್ಯ ಲೇಖನ ಸಂಕಲನ… ಮಕ್ಕಳಿಗಾಗಿ ಅಜ್ಜನ ಹಲ್ಲುಸೆಟ್ಟು (ಮಕ್ಕಳ‌ ಕವಿತೆಗಳ ಸಂಕಲನ) ಮಾಸಂಗಿ (ಮಕ್ಕಳು ಬರೆದ ಕತೆಗಳ ಸಂಪಾದನೆ) ಮಕ್ಕಳೇನು ಸಣ್ಣವರಲ್ಲ (ಮಕ್ಕಳ ಕತಾ ಸಂಕಲನ) ಕೃತಿಗಳು…

ಬಹತೇಕ ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಲಲಿತ ಪ್ರಬಂಧ, ಹಾಸ್ಯ ಲೇಖನ, ಮಕ್ಕಳ‌ ಕತೆ, ಕವಿತೆ, ನಾಟಕಗಳು ಪ್ರಕಟವಾಗಿವೆ. ಅಕ್ಷರ ಸಾಹಿತ್ಯ ವೇದಿಕೆ ಸಂಚಾಲಕರಾಗಿ ಹಲವಾರು ಮಕ್ಕಳ‌ ಕಮ್ಮಟ, ರಂಗಶಿಬಿರ, ಸಾಹಿತ್ಯಿಕ‌ ಚಟುವಟಿಕೆಗಳನ್ನು ಸಂಘಟಿಸಿದ್ದಾರೆ….

4

ಅದೇನೊ ಹೋಯಿತು…ಮಾತಾಡುವ ಸೊಳ್ಳೆ ನನಗೆ ಒಂದು ಕುತೂಹಲದ ವಿಷಯವಾಯಿತು..ನಾನು ಇದುವರೆಗೂ ಅದರೊಂದಿಗೆ ಮತಾಡಿದೇನಾ…? ಅದೇನೊ ಹೇಳುತ್ತಿತ್ತು ಅದೆ ‘ಮನುಷ್ಯರು ಕೆಟ್ಟವರು ಹಾಗೆ ಹೀಗೆ’ ಅಂತ. ನಿಜ, ಅದೂ ಹೇಳೊದ್ರಲ್ಲಿ ತಪ್ಪಿಲ್ಲ. ನಾವು ಕೆಟ್ಟವರು… ಹೌದು! ಅದು ಮಾತಾಡಿತಾ? ಅಥವಾ ನನ್ನ ಸುಪ್ತ ಮನಸ್ಸು ಮಾತಾಡಿತಾ…? ಮತ್ತೆ ಮತ್ತೆ ಚಿವುಟಿಕೊಂಡು ಮತ್ತೆ ಖಾತ್ರಿ ಮಾಡಿಕೊಂಡೆ. ಹೌದು ಖರೆ ಅನಿಸ್ತು. ಎಷ್ಟು ಚಂದ ಅಲ್ಲ ಸೊಳ್ಳೆಗಳೊಂದಿಗೆ ಮಾತಾಡೋದು. ಹೀಗೆ ನಾಯಿಯೊಂದಿಗೆ ಬೆಕ್ಕಿನೊಂದಿಗೆ ಪಾರಿವಾಳದೊಂದಿಗೆ ಮಾತಾಡುವಂತೆ ಇದ್ರೆ…..ಎಷ್ಟು ಖುಷಿ ಖುಷಿಯಾಗಿರಬಹುದಿತ್ತು.. ?

ಏನು ಮಾಡಲಿ ನಿದ್ದೆ ಬರತಾ ಇಲ್ಲ. ಅದು ಏನೊ ಹೇಳ ಬಂದಂತಿತ್ತು. ನಾನೇ ಬಿರುಸಾಗಿ ಮಾತಾಡಿ ತಪ್ಪು ಮಾಡಿದೆ. ಅದರ ಮನಸ್ಸಿಗೆ ಬ್ಯಾಸರಾಯಿತಾ? ‘ಯಾರಿಗಾದ್ರೂ ಗಿವ್ ರೆಸ್‌ಪೆಕ್ಟ್ ಆಂಡ್ ಟೇಕ್ ರೆಸ್‌ಪೆಕ್ಟ್’ ಅಂತ ಗುರುಗಳು ಹೇಳ್ಯಾರ’ ನಾನು ರಫ್ ಆಗಿ ಮಾತಾಡಿದ್ದಕ್ಕೆ ಅದು ಮಾತಾಡಿತು. ಎಲ್ಲರಿಗೂ ಅವರದೆ ಆದ ಗೌರವ ಇರುತ್ತೆ ಎಂಬುದನ್ನು ಮರೆತುಬಿಟ್ಟೆ. ನಾಳೆ ಬರಲಿಕ್ರೆ ಏನು ಮಾಡೋದು…..? ಹಾಳದ್ದು ಕಟುವಾದ ಮಾತುಗಳು ಏಕೆ ಬಂದವು? ಈಗಲೆ ಎದ್ದು ಮಾತು ಮುಗಿಸಿ ಬಿಡಲಾ. ಪಾಪ! ಸಿಟ್ಟು ಮಾಡಿಕೊಂಡಿದೆಯೊ ಏನೊ? ನಾವು ಅಷ್ಟ ಅಲ್ಲ, ಅಪ್ಪ, ಅಮ್ಮ, ಗುರುಗಳು ಬೈದ್ರ ನಗುತಿರುತಿವಾ? ಸ್ವಲ್ಪ ಸಮಯ ಸಿಟ್ಟು ಬಂದಿರುತ್ತಲ್ಲ…! ಆದರೂ ಸೊಳ್ಳೆಯೊಂದು ಮಾತಾಡುತಾದ, ಏನೆಲ್ಲಾ ವಿಷಯ ಹೇಳುತ್ತದ ಅಂದ್ರೆ ಕೇಳುವ ಪೇಶನ್ಸ್ ಇರಲಿಲ್ಲಲ! ಏನು ಮಾಡೋದು? ಇರಲಿ ಬಂದೆ ಬರುತ್ತದೆ. ಎಲ್ಲಾರನ್ನು ಬಿಟ್ಟು ನನ್ನೆ ಮಾತಾಡಸ್ತಾ ಇದೆ ಅಂದ್ರೆ, ನನ್ನಲ್ಲಿ ಏನೋ ಇರಬೇಕು…. ನೋಡೋಣ ಎಂದು ಹೊರಳಾಡುತ್ತ ಮಲಗಿದೆ ; ರಾತ್ರಿ ಎಷ್ಟೊತ್ತು ಆಗಿತ್ತೊ ಗೊತ್ತಿಲ್ಲ. ನಿದ್ದೆಯಂತೂ ಹತ್ತಿತು. ನಿಮ್ಮಪ್ಪ ಹೇಳೊದು ಕೇಳಿಸಿಕೊಂಡೆ…ಕೇಳಿಸಿಕೊಂಡೆ…

ಬೆಳಿಗ್ಗೆ ಎದ್ದಾಗ ಎಂಟಾಗಿತ್ತು… ಅಪ್ಪ ಬಂದು ಹಚ್ಚಡಾ ಜಗ್ಗಿ ಬಯ್ದಾಗಲೆ ಎಚ್ಚರಾಗಿದ್ದು. ಮುಂದ ಕುಳಿತರಷ್ಟೆ ಓದೋದು. ಮರೆಯಾದ್ರೆ ಸಾಕು ಬರಿ ಟಿವಿ ನೋಡೋದು ಮೊಬೈಲು ನೋಡೋದು, ಗೇಮ್ ಆಡೋದು. ಎಂದಾಗ ‘ನಾನ್ಯಾರಿಗೊ ನಾನು ಟಿವಿ ನೋಡಲ್ಲ ಪಿಕ್ಷರ್ ನೋಡಲ್ಲ’ ಎಂದು ಹೇಳಿದ ನೆನೆಪಾಗಿ “ಅಯ್ಯೊ ಸೊಳ್ಳೆಗೆ ಸುಳ್ಳು ಹೇಳಿದ್ದೆನಲ್ಲ.. ಓಹೊ ಅದು ಕನಸೆ ಇರಬೇಕೆನೊ?” ಎಂದುಕೊಳ್ಳುತ್ತಿರುವಾಗಲೆ ಮೂಗಿನ ಮೇಲೆ ಬಂದು ಕುಳಿತ ಸೊಳ್ಳೆ “ಹಾಯ್ ಸಮು..ನಿದ್ದೆ ಆಯ್ತಾ?” ಅಂತ ಕೇಳಿತು.
“ಅಯ್ಯೊ….ಹೌದಲ್ಲ! ಕಂಡಿದ್ದು ಕನಸಲ್ಲ…. ಸೊಳ್ಳೆ ಜೊತೆ ಮಾತಾಡಿದ್ದು ನಿಜಾನೆ?” ಎಂದುಕೊಂಡು “ನೀನು ನಿದ್ದೆ ಮಾಡಿದಿಯಾ? ಎಂದೆ.
“ಎಸ್” ಅಂತು.
“ನಿನಗೆ ನಿನ್ನೆ ಏನೊ ಬೈದೆ, ಕೋಪ ಬಂದಿಲ್ಲೇನು?”ಎಂದೆ.
“ಯಾಕೆ ಬರಬೇಕು? ಎಲ್ಲಾ ನಿಮಗೆ ಬಿಟ್ಟು ಬಿಟ್ಟಿವಿ” ಎಂದು ನಕ್ಕು “ಆಸೆ ಇದ್ದೋರಿಗೆ ಕೋಪ ಇರೋದು?” ಅಂದು ಹಿರಿಯರ ಹಾಗೆ ಮಾತಾಡಿತು.
“ಅಪ್ಪನೂ ಬುದ್ಧಿ ಹೇಳೋತ..ನೀನು ಹಾಗೆ ಆಗಬೇಡಪ…. ಮತ್ತೆ, ನಿನ್ನೆ ಏನೊ ಹೇಳು ಹೊರಟಿದ್ದೆ ಹೇಳು”ಎಂದೆ.
“ಮತ್ತೆನು ನೀನು ಚೀಟರ್… ಲೈಯರ್….”ಅಂತು.
“ಯಾಕೆ? ಹಾಗಂತಿಯಾ?”
“ನಿಮ್ಮಪ್ಪ ಹೇಳೊದು ಕೇಳಿಸಿಕೊಂಡೆ, ನಿಮ್ಮಪ್ಪ ಹೇಳೊದು ಕೇಳಿಸಿಕೊಂಡೆ….:ಕೇಳಿಸಿಕೊಂಡೆ” ಎಂದು ಹಾರಿ ಹಾರಿ ಮೂಗಿನ ಮೇಲೆ ಕುಳಿತು ಡ್ಯಾನ್ಸ್ ಮಾಡ ಹತ್ತಿತು.
“ಏನು? ಕೇಳಿಸಿಕೊಂಡಿದ್ದು”
“ಅದೆ ನೀನು ಟಿವಿ, ಪಿಕ್ಚರ್ ನೋಡೋದು, ಮೊಬೈಲ್ ನಲ್ಲಿ ಆಡೋದು”
“ಹೌದು… ಆಡತಿನಿ… ನೋಡತೀನಿ… ನಾನೇನು ಉಳಿದವರಂಗ ಪಬ್ಜಿ, ಬ್ಲೂ ವೇಲ್..ಗೇಮ್ ಆಡಲ್ಲ ಬಿಡು”
“ಅಂದ್ರ”
“ನಿನಗ ಗೊತ್ತಾಗಲ್ಲ ಬಿಡು.. ಅದರ ಚಟ ಹತ್ತಿದ್ರ ನೀನು ಆಡಕೋತ ಕುಳಿತುಬಿಡ್ತಿಯಾ.. ಎಷ್ಟು ಚಂದ ಇರುತ್ತದ ಮೊಬೈಲ್ ನಲ್ಲಿ ಗೇಮು ಆಡೋದು…ದೊಡ್ಡವರಿಗೇನು ಗೊತ್ತು ಅದರ ಖುಷಿ”
“ಇರಲಿ, ನನಗ ಎಲ್ಲಾ ಗೊತ್ತು, ಅದರೆ ನೀನು ನಿನ್ನೆ ದೊಡ್ಡ ಫಸ್ಟ್ ರ‍್ಯಾಂಕು ಹುಡುಗನ್ನ ತರಹ ಫೊಜು ಕೊಟ್ಟಿ…?”
“ಹೌದು… ಈಗಲೂ ಅದೆ ಹುಡುಗ”
“ಟಿವಿ..ಫಿಲ್ಮು..ಮೊಬೈಲು!”
“ಹೋಹೋ…… ಅದಾ! ನಿನ್ನ ಜೊತೆ ಮಾತಾಡತಾ ಏನೊ ಖುಷಿ ಖುಷಿ ಅನಸ್ತು..ಎಲ್ಲಿ ನೀನು ಬೇಗ ಹೋಗ್ತಿಯಾ ಅಂತ ಖರೆಖರೆ ಸುಳ್ಳು ಹೇಳಿದೆ.. ನಾನು ‘ಈಗ’ ಫಿಲ್ಮ ಹತ್ತು ಸಾರಿ ನೋಡಿನಿ ಗೊತ್ತಾ? ಭಾರಿ ಮಜಾ ಅದ” ಎಂದೆ.
“ಅಮ್ಮಾ…..! ಎಂತಹ ಸುಳ್ಳ ನೀನು?”
“ಹೇಳಿದೆನಲ್ಲಾ..ನಿನ್ನ ಮುಂದೆ; ಏಕೆ ಅಂತ?”
“ಅದಕ್ಕೆ ನೀವು ಸಾಚಗಳಾ? ಮನುಷ್ಯರು ಅಂತ ಕೇಳಿದ್ದು”
‘ಸಮು..ಬೇಗ ಸ್ನಾನ ಮಾಡು ಹೊತ್ತಾಯಿತು..ಪರೀಕ್ಷೆಗೆ ಹೋಗಬೇಕು’ ಎನ್ನುವ ಅಮ್ಮನ ಕರೆ ಅಡುಗೆ ಮನೆಯಿಂದ ಬಂದಾಗ “ಸೊಳ್ಳೆ ಫ್ರೆಂಡ್.. ನೀನು ಇಲ್ಲೆ ಇರು, ಎಲ್ಲಿಗೂ ಹೋಗಬೇಡ ನಾನು ಬೇಗ ಸ್ನಾನ ಮಾಡಿಕೊಂಡು ಬರತೀನಿ” ಎಂದೆ.
“ಕೆನ್ನೆ ಮೇಲೆ ಹಾರಿ ಕುಳಿತು ಕಚ್ಚಿ “ಥ್ಯಾಂಕ್ಸ್ ಸಮು..ಲವ್ ಯು ಅಂತು”
“ಅಮ್ಮಾ, ಕಚ್ಚಿ ಬಿಟ್ಟಿಯಲ್ಲಾ! ಎಷ್ಟು ನೋವಾಯ್ತು?”
“ಕಚ್ಚಿಲ್ಲ ಸಮು..ನೀನು ಫ್ರೆಂಡು ಅಂದಿಯಲ್ಲ..ಖುಷಿಯಾಗಿ ನಿನಗೆ ಕಿಸ್ ಕೊಟ್ಟೆ”
“ಕಿಸ್ಸಾ….! ಅಪ್ಪಾ ಸೊಳ್ಳೆ ಫ್ರೇಂಡು..ನಿನ್ನ ಕಿಸ್ಸು ಬೇಡಪ್ಪಾ ನೋವಾಗುತ್ತೆ. ಯಾವುದಾದರೂ ರೊಗ ಬರುತ್ತೆ”
“ಸ್ವಾರಿ..ನೋವಾದ್ರೆ.. ನನ್ನಿಂದ ನಿನಗೇನೂ ರೋಗಬರಲ್ಲ…ಆಯ್ತು ಸ್ನಾನ ಮಾಡಿ ಬೇಗ ಬಾ”.
“ನಿನಗೇನಾದ್ರೂ ಬೇಕಾ? ತಿನ್ನೋಕೆ…”
“ನಮಗ ನೀವಿದ್ದಿರಲ್ಲ”
“ಅಂದ್ರ…!ನನಗ ಕಿಸ್ ಕೊಟ್ಟು ರಕ್ತ ಹೀರಿ ಬಿಟ್ಟಿ? ಒಂದು ಹನಿ ರಕ್ತ ತಯ್ಯಾರಾಗೋಕೆ ಐವತ್ತು ತುತ್ತು ತಿನ್ನಬೇಕು ಅಂತ. ನಾನು ತಿನ್ನೋದೆ ಇಷ್ಟು….ಅಮ್ಮ ಬಯ್ಯತಿರತಾಳೆ…ಊಟ ಮಾಡೋದೆ ಇಲ್ಲ ಅಂತ”
“ನಿಮಗೆ ಕುರುಕುರೆ, ಚೀಪ್ಸು, ಚಾಕಲೇಟು, ಕಚೋರಿ, ಪಾನಿಪುರಿ, ಗೋಬಿ, ಪಿಜ್ಜಾ ರ‍್ಗರ್’ ಇಂತವೆಲ್ಲ ನಿಮಗ ಇಷ್ಟ ಆಗೋದು..ಹೌದಲ್ಲ”
“ಖರೆ ಹೇಳುಬೇಕಂದ್ರ..ಅವ ರುಚಿನೋಡು ಫ್ರೆಂಡು..ಮನೆಯಲ್ಲಿ ತಿನ್ನಬಾರದು ಹಾಗೆ ಹೀಗೆ ಅಂತ ಪುರಾಣ ಹೇಳ್ತಾರೆ,

“ಅವರು ಹೇಳೊದ್ರಲ್ಲಿ ತಪ್ಪಿಲ್ಲಪ”
“ಆದರೂ ನಾಲಿಗೆ ಕೇಳಬೇಕಲ್ಲ…! ಅವನ್ನೆಲ್ಲ ನೋಡಿದ ಕೂಡಲೆ ಜಗ್ಗುತ್ತದೆ, ಎಳೆಯುತ್ತದೆ. ಲಾಲಿಪಪ್ ಚೀಪಿಗೋತ ತಿನ್ನೋದು, ಕುರುಕುರೆ ತಿಂದ ಮೇಲೆ ಪಾಕೇಟ ಒಳಗಿನ ಮಸಾಲೆನ ನೆಕ್ಕೊದು, ಕಚಕಚ ಅಂತ ಜೊಲ್ಲು ಸುರುಸುಗೋತ ಚಾಕಲೇಟು ತಿನ್ನೊದು..ನಮ್ಮ ರುಚಿಯ ಅನುಭವ ದೊಡ್ಡೋರಿಗೆ ಏನು ಗೊತ್ತಾಗುತ್ತದ…ತಿನ್ನಬಾರದು ತಿನ್ನಬಾರದು ಅನ್ನೊದು ಬಿಟ್ರೆ? ಅವರ ತಿಂದಿಲ್ಲ ಅಂತ ನಮಗೂ ತಿನ್ನಬೇಡಿ ಅಂದ್ರ……! ತಪ್ಪಲ್ಲನು?” ಎಂದು ಮುಖ ಗಂಟು ಮಾಡಿಕೊಂಡು ಹೇಳಿದೆ.
“ಅದರಲ್ಲಿ ಏನೇನೊ ನಾಲಿಗೆ ರುಚಿ ಸೆಳೆಯೊ ಕೆಮಿಕಲ್ ಹಾಕೋದನ್ನ ನೋಡಿನಿ. ಭಾರಿ ಡೇಂಜರ್.. ಅಲ್ಲದ ಬೇಕರಿಯಲ್ಲಿ ಅಪ್ಪಾ…..!ನಾವು ಹೋದ್ರೆ..ಆ ಡಾಲ್ಡಾ ಜಿಡ್ಡಿಗೆ ಅಲ್ಲೆ ಸಿಕ್ಕಿಕೊಂಡು ಬಿದ್ದು ಒದ್ದಾಡಿ ಒದ್ದಾಡಿ ಸತ್ತು ಹೋಗತಿವಿ….ಅದರಲ್ಲಿ ಸಮಾದಿನೂ ಆಗಿ ಬಿಡತಿವಿ..ನಮ್ಮ ಜೊತೆ ಅನೇಕ ಕೀಟಗಳು. ಅದನ್ನೆಲ್ಲಾ ಸೇರಿಸಿ ಮಾಡಿದ ತಿಂಡಿಗಳನ್ನ ನೀವು ತಿಂತಿರಪ….ಯಾಕ್ ಛೀ… ಇನ್ನೊಂದು ಗೊತ್ತದನೋ ಇಲ್ಲೊ…ಮೈದಾ, ಸಕ್ಕರಿ, ಡಾಲ್ಡಾ…ಇವು ಮೂರು ಬಿಳಿ ವಿಷ ಇದ್ದಾಂಗ. ನಿಮ್ಮಗ ಸಕ್ಕರಿ ರೋಗ ಬರೋದು ಇದರಿಂದನಾ..? ಅದಕ್ಕೆ ಅಪ್ಪ ಅಮ್ಮ ಅವೆಲ್ಲ ಬೇಡ ಹಣ್ಣು ತರಕಾರಿ ತಿನ್ನಿ ಅಂತ ಹೇಳೊದು”

“ಅಯೊ..ರ‍್ಮ! ನಿನ್ನ ಮೈಯಾಗ ಅಪ್ಪ ಹೊಕ್ಕಂಡನೇನು? ನೀನು ಥೇಟ್ ಅಪ್ಪನಂಗ ಸುರು ಹಚ್ಚಿಗೊಂಡಿ; ಇದನ್ನು ಬಿಡು ನೀನು ಕಚ್ಚಿದ್ದರಿಂದ ನನಗೇನೂ ಆಗಲಲ್ಲ?”
“ಹಿಂಗ ಒಳ್ಳೆದನ್ನ ಹೇಳಿದ್ರ ಮನಸ್ಸಿಗೆ ಕಚ್ಚಿದಂಗ, ಚುಚ್ಚಿದಂಗ ಆಗುತ್ತದಲ್ಲ” ಎಂದು ನಕ್ಕು “ಇಲ್ಲಪ ನಾನು ಮೇಲ್….ರ‍್ಥಾತ್ ಗಂಡು; ಫಿಮೇಲು ಅಲ್ಲ. ನಮ್ಮ ಊಟ ರಕ್ತ ಅಲ್ಲ. ನಿಮ್ಮ ಮನೆಯ ಹೊರಗಿನ ಗಿಡಗಳೇ ಸಾಕು” ಎಂದಿತು.
“ಅಂದ್ರೆ ನೀನು ವೆಜಿಟೇರಿಯನ್‌ನ ಹಾಗೆ?”
“ಹಾಗೆ ಅನ್ನಕೊ; ಆದರೆ ನಮ್ಮ ಮನೆಯವರಿಗೆ ನಿಮ್ಮ ರಕ್ತ ಬಹು ಪ್ರಿಯ.. ನಾವೇನಿದ್ರು ಸಸ್ಯಗಳದು ಸಾಕು”
“ವಾಟ್ ಆನ ಇನ್ಟರೆಸ್ಟಿಂಗ್!” ಅನ್ನುತ್ತಿರುವಾಗಲೇ “ಸಮು ಎಷ್ಟೊತ್ತು..ಬೇಗ ರೆಡಿ ಆಗು” ಎಂದು ಅಮ್ಮ ಕೂಗಿದಳು.
“ಸೊಳ್ಳೆ ಫ್ರೆಂಡು.. ಪ್ಲೀಜ್ ನೀನು ಎಲ್ಲಿಗೂ ಹೋಗಬೇಡ…ಬಹಳ ಇಷ್ಟ ಆಗತಿದ್ದಿಯಾ? ಶಾಲೆಗೆ ಹೋಗಬೇಕು ನನ್ನ ಜೊತೆ ಬರತೀಯ?”
“ಹೋ..ಹೋ… ಎಸ್…ಎಸ್…ಆದರೆ ಹಾರೋಕೆ ಆಗಲ್ಲ ನನ್ನ ಸ್ಪೀಡ್ ತಾಸಿಗೆ ಒಂದರಿಂದ ಒಂದುವರೆ ಕೀಲೋಮೀಟರ್”
“ಹಾಗಾದರೆ, ಹೇಗೆ ನಿನ್ನನ್ನು ಕರೆದುಕೊಂಡು ಹೋಗೋದು? ಹಾಂ! ಗೊತ್ತಾಯ್ತು ಗೊತ್ತಾಯ್ತು. ನನ್ನ ಬ್ಯಾಗಿನೊಳಗೆ ಸೇರಿಕೊಂಡುಬಿಡು”
“ಬ್ಯಾಗಿನೊಳಗ….ಹೂಂ…ಓಕೆ. ಎಸ್… ಡನ್” ಅಂತು.
“ಓ.ಕೆ ನಾನು ರೆಡಿಯಾಗ್ತೀನಿ” ಎಂದು ಒಳ ಹೋದೆ. ನನಗ ಎಲ್ಲಿಲ್ಲದ ಸಂತೋಷ, ಆನಂದ ಮನೆಮಾಡಿತ್ತು.
ಅಪ್ಪ “ಯಾಕೊ ಖುಷಿ ಖುಷಿಯಾಗಿದ್ದೀಯಾ? ಏನು ವಿಶೇಷ?” ಎಂದ.
“ಏನಿಲ್ಲಪಾ?” ಎಂದು ಪುಸಿ ಹೊಡೆದೆ.
“ಇಲ್ಲ ಇಲ್ಲ, ನಿನ್ನೆ ಇಂಗ್ಲೀಷ್ ಚೆನ್ನಾಗಿ ಓದಿಕೊಂಡಿರಬೇಕು…ಅಲ್ಲಾ? ಅದಕ ಮುಖದಲ್ಲಿ ಖಳೆ ಬಂದಿದೆ. ಇಂಗ್ಲೀಷ್ ಪೇಪರ್ ಇದ್ದಾಗ ಯಾವತ್ತಿಗೂ ಒದ್ದಾಡತಿದ್ದೆ. ಗುಡ್ ಹೀಗೆ ಹೀಗೆ ಇರಬೇಕು…ಒಳ್ಳೆಯ ಹುಡುಗರ ಲಕ್ಷಣ” ಎಂದಾಗಲೆ ನಾನು ಸ್ಟನ್ ಆದೆ. “ಅಯ್ಯಯ್ಯೋ….! ಸೊಳ್ಳೆ ಜೊತೆ ಮಾತುಕತೆಯಲ್ಲಿ ಪೇಪರ್ ಕಡೆ ಲಕ್ಷ್ಯನ ಕಡಿಮೆಯಾಗಿಬಿಡ್ತು. ಇನ್ನೊಂದು ‘ಪೋಯಮ್, ಪ್ರೋಸ್’ ಓದಬೇಕಾಗಿತ್ತು. ಎಲ್ಲಾ ಸೊಳ್ಳೆಯಿಂದಲೆ ಆಯಿತು ಎಂದು ಬಯ್ಯಕೋತ” ಬೇಗ ಬೇಗ ಡ್ರೆಸ್ ಹಾಕಿಕೊಂಡು ರೆಡಿ ಆದೆ.

ತಿಂಡಿ ತಿಂದು, ಬ್ಯಾಗ ಹಾಕಿಕೊಂಡು ಕನ್ನಡಿಯಲ್ಲಿ ಬಾಚಿಕೊಳ್ಳುವಾಗ “ಫ್ರೆಂಡ್…. ನನ್ನನ್ನು ಕರೆದುಕೊಂಡು ಹೋಗ್ತೀನಿ ಅಂದಿದ್ದಿ……” ಎಂದು ಕನ್ನಡಿಯ ಮೇಲೆ ಕುಳಿತು ಕೈ ಮಾಡಿತು.
ಸೊಳ್ಳೆಯಿಂದ ಓದಲು ಆಗದಿದ್ದಕ್ಕಾಗಿ ಸಿಟ್ಟು ಬಂದಿತ್ತಾದರೂ, ಮತ್ತೆ ಸೊಳ್ಳೆಗೆ ಕೊಟ್ಟ ಮಾತು ನೆನಪಿಗೆ ಬಂದು “ನಡಿ ಹೋಗೋಣ” ಎಂದೆ.
“ಸಿಟ್ಟು ಬಂದಂಗದ ನನ್ನ ಮೇಲೆ”
“ಇಲ್ಲಪ ಇಲ್ಲಲ್ಲ..”
“ಇಲ್ಲ…ನನಗ ಗೊತ್ತಾಗುತ್ತದ”
“ಹೇಗೆ…?”
“ನನಗೆ ಮಾತಾಡುವ ಶಕ್ತಿ ಇದೆ ಎಂದ ಮೇಲೆ, ನಿನ್ನ ಮನಸ್ಸಿನಲ್ಲಿರೋದು ಗೊತ್ತಾಗೋದಿಲ್ಲೇನು?”
“ಏನು ಗೊತ್ತಾಯಿತು ನಿನಗೆ?”
“ನನ್ನ ಬೈದುಕೊಂಡಿದ್ದು”
“ನಿನ್ನನ್ನೆಕೆ ಬೈದುಕೊಳ್ಳಲಿ?”
“ಅದೆ ನನ್ನ ಜೊತೆ ಮಾತಾಡತಾ ಓದೋಕೆ ಆಗಲಿಲ್ಲ, ಒಂದು ‘ಪೋಯಮ್ ಪ್ರೋಸು’ ಹಾಗೆ ಉಳಿದಿವೆ ಎಂದು ಬಯ್ಯಕೋತಿದ್ದೆಯಲ್ಲ”
“ನನ್ನ ಮನಸ್ಸಿಂದು ನಿನಗೆ ಗೊತ್ತಾಗುತ್ತ್ತದನಾ?”
“ಹೌದು”
“ಹಾಗಿದ್ದರೆ……ನಿನ್ನೆ ಮೊಬೈಲ್, ಟಿವಿ., ಫಿಲ್ಮ ನೋಡಲ್ಲ ಅಂತ ಸುಳ್ಳು ಹೇಳಿದ್ದನ್ನ, ಆಗಲೆ ನೆನಪಿಸಬಹುದಿತ್ತಲ್ಲ?”
“ನೀನು, ನನ್ನೊಡನೆ ಮಾತಾಡಬೇಕೆಂಬ ಆಸೆಯಿಂದ ಸುಳ್ಳ ಹೇಳಿದೆಯೋ ಹಾಗೆ ನಾನು ನಿನ್ನ ಮನಸ್ಸಿಗೆ ಬೇಜಾರು ಮಾಡಬಾರದು ಅಂತ ಸುಳ್ಳು ಹೇಳಿದೆ” ಎಂದು ನಕ್ಕಿತು.
“ನಿಜನಾ….! ನಿನಗೆ ಗೊತ್ತಾಗೋದು?”
“ಅದೆಲ್ಲ ಬಿಡು, ನಂತರ ಹೇಳುವೆ. ಡ್ಯಾಡಿ ಕರಿತಿದ್ದಾರೆ…ನಡಿ, ಇಗೋ ನೋಡು ಕುಳಿತೆ” ಎಂದು ಬ್ಯಾಗಿನ ಸಂಧಿಯಲ್ಲಿ ಕುಳಿತಿತು.

“ಸರಿಯಾಗಿ ಕುಳಿತಿಯಾ….?” ಎಂದಾಗ
ಹೊರಗೆ ಅಣುಕಿ ಹಾಕಿ “ನಿಧಾನಪ, ಒತ್ತಡ ಹಾಕಬೇಡ ನಾನು ಒಳಗಡೆ ಪ್ರೆಸ್ ಆಗಿ ಸತ್ತು ಹೋಗ್ತೀನಿ”
“ಇಷ್ಟೆಲ್ಲ ಮಾತಾಡೋ ನೀನು ಸಾಯ್ತಿಯಾ?”
“ನಮ್ಮ ಗಂಡು ಸೊಳ್ಳೆ ಬದುಕು ಬರಿ ಟೆನ್‌ಡೇಜು ಪಾ…ಲೈಫ್ ರ‍್ಕಲ್? ನಾಟಿ ಬಾಯ್…ನಡಿ ಅಪ್ಪಾ ಕರಿತಿದ್ದಾರೆ” ಎಂದಿತು.
ಸಮು ಬ್ಯಾಗನ್ನು ನಿಧಾನವಾಗಿ ಹಿಂದೆ ಹಾಕಿಕೊಂಡು ಅಪ್ಪನ ಗಾಡಿಯತ್ತ ಹೊರಟ
“ಯಾಕೊ ಅಷ್ಟು ನಿಧಾನವಾಗಿ ಹೊರಟಿ, ಕಾಲಿಗೆ ಏನಾಗಿದೆ?” ಎಂದಳು ಅಮ್ಮ.
“ಬೇಗ ಬಾರೊ… ಏನಾಗಿದೆ?” ಎಂದನು ಅಪ್ಪ.
“ಏನಿಲ್ಲೇನಿಲ್ಲ” ಎಂದು ನಿಧಾನವಾಗಿ ಗಾಡಿ ಹತ್ತಿ ಕುಳಿತೆ.

|ಇನ್ನು ಮುಂದಿನ ವಾರಕ್ಕೆ |

‍ಲೇಖಕರು avadhi

February 27, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಮಲ್ಲಿಕಾಜು೯ನ

    ತುಂಬ ಸುಪರ್ ಸರ್. ಮಕ್ಕಳ ಮನಸನ್ನು ಉಲ್ಲಾಸಗೊಳಿಸುವ ಈ ಕತೆ ಅತ್ಯುತ್ತಮ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: