ಗೀತೋಸ್ಮಿ
ಪ್ರಪಂಚವೆಲ್ಲ
ಪ್ರತಿಮೆಗಳಿಂದ ತುಂಬಿಹೋಗಿದೆ!
ಸರಿಯಾದ ಸಮಯಕ್ಕೆ ಉತ್ತಿ,
ಸರಿಯಾದ ಕ್ರಮದಲ್ಲಿ ಬಿತ್ತಿ,
ಸರಿಯಾದ ಪ್ರತಿಮೆಯನ್ನೆತ್ತಿ
ಕೂರಿಸಬೇಕಾದ್ದಷ್ಟೇ
ಉಳಿದಿದೆ!
ಹ್ಞಾ! ಮೆಲ್ಲಗೆ..!
ನಿಟ್ಟುಸಿರಿನ
ಬಿಸುಪಿಗೆ ಕರಗಿ
ಹೋದೀತು-
ಪ್ರತಿಮೆ!

ಯಾವುದೋ ಎದೆಯಲ್ಲಿ
ಯಾವುದೋ ನೆಪದಲ್ಲಿ
ಸುಳಿದೀತು ಕವಿತೆ-
ಒಲುನಲುಮೆ ಶಿಶುವಾಗಿ;
ಬಟ್ಟೆಗಳನೂ, ಬರೆಗಳನೂ ಕಳಚಿ-
ಬತ್ತಲಲ್ಲಿ;
ಪುಟ್ಟ-
ಅಂಬೆಗಾಲಲ್ಲಿ!






0 Comments