ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಳಿಯಲ್ಲಿಯೇ ನಡೆವ ರಾಗಗಳೇನೋ..

ಮಾಯದ ಹೆಜ್ಜೆಗಳು

shrikant selfy

ಶ್ರೀಕಾಂತ್ ಪ್ರಭು

ಒಂದಾನೊಮ್ಮೆ ಇದೊಂದು ಕಚ್ಚಾ ದಾರಿ. ಈಗ ಟಾರ್ ಹಾಕಿ, ಗುಡಿಸಿ, ಒಪ್ಪ ಓರಣ ಮಾಡಿ, ಪಟ್ಟೆ ಬಳೆದು ಹೀಗೆಯೇ ನಡೆಯಬೇಕು ಎಂದು ಗುರುತಿಸಲಾಗಿದೆ.
ದಾರಿಗೆ ಮುಖ ಮಾಡಿ ಅರೆತೆರೆದ ಬಾಗಿಲು. ಮರೆಯಿಂದಲೇ ಇಣುಕುವ ಚಪಲ, ತವಕ. ದಾರಿಯ ದಿಕ್ಕನ್ನು ಹೇಗಾದರೂ ಮಾಡಿ ತಿರುಗಿಸಿ, ಬದಲಿಸಿ ಮನೆಯೊಳಗೆ ಬಿಟ್ಟುಕೊಳ್ಳುವ,ತನ್ನದಾಗಿಸುವ, ತೀರದ ಬಯಕೆ. ದಾರಿ ಹಾಗೆ ಬರಲೊಪ್ಪದು. ಅದು ಅದರ ಗುಣವಲ್ಲ. ಅದಕ್ಕೆ ನಡೆ, ಚಲನೆ ಇಲ್ಲ. ಸುಮ್ಮನೆ ಬಿದ್ದುಕೊಂಡಿರುತ್ತದೆ.
ಹೆಜ್ಜೆಗಳು ಕೂಡಾ ಅಷ್ಟೆ. ತಮ್ಮಷ್ಟಕ್ಕೆ ನಡೆದಾಡಿಕೊಂಡಿವೆ. ಅವು ತಮ್ಮ ನಡೆ ನಡೆದು ಸವೆಯುತ್ತಾ ದಾರಿ ಸವಿಸುತ್ತಾ ಮಾಯವಾಗಿಬಿಡುತ್ತವೆ. ಹಾಗೆ ಮರೆಯಾಗುವದು, ಮರೆಯುವದು ಹೆಜ್ಜೆಗಳ ಹುಟ್ಟು ಗುಣ.
ಕೆಲವೊಮ್ಮೆ ಮಾತ್ರ ಎಲ್ಲಿಂದಲೋ ಹಟಾತ್ತನೇ ಕಾಣಿಸಿಕೊಂಡು ಗಾಳಿಯಲ್ಲಿಯೇ ನಡೆವ ರಾಗಗಳೇನೋ ಎನ್ನುವ ಹಾಗೆ ಚಂಚಲಗೊಳಿಸಿದ ಅವು ತಿರುವಿನಲ್ಲಿ ಮರೆಯಾಗಿ ಬಿಡುತ್ತವೆ.
ಅದೊಂದು ಲಹರಿ. ಒಂದು ಆಹ್ಲಾದ. ಹೆಜ್ಜೆಗಳ ಹಿಂದಿರುವ ಅನಾಮಿಕ, ಅಪರಿಚಿತ ಮುಖ ನೋಡಬಹುದೇ ಎಂದು ಹಳಹಳಿಸುವಷ್ಟರಲ್ಲಿ ಮಾಯವಾಗಿಬಿಡುತ್ತವೆ. ಯಾರು, ಏನು, ಎತ್ತ ಎಂದು ತಿಳಿದರೆ ಎಲ್ಲಿ ಗುಟ್ಟಾದ ಒಂದು ತಂಪನೆಯ ಚಿಲುಮೆಯೇ ಬತ್ತಿ ಹೋಗುವುದೇನೊ ಅನ್ನಿಸುವಂಥ ಶಂಕೆ, ಕಳವಳ. ದಾರಿ ತನ್ನಷ್ಟಕ್ಕೆ ಬಿದ್ದುಕೊಂಡೇ ಇರುತ್ತದೆ.
ಇಣುಕಿ, ಕೆಣಕಿ, ಚೆಲ್ಲಾಟವಾಡಿ, ಚಂಚಲಗೊಳಿಸಿ ಗಾಳಿಯಲ್ಲಿ ಲೀನವಾದ ಅಹ್ಲಾದವೂ ಕೆಲ ಕ್ಷಣ ತಂಪಾಗಿ ಎಲ್ಲೆಡೆ ಪಸರಿಸಿಕೊಂಡುಬಿಡುತ್ತದೆ.
P1470614 P1470623 P1470632

‍ಲೇಖಕರು Avadhi

10 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading