ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧಿ ಬಜ಼ಾರ್ ಗೌರಿ..

ಜಿ ಶಿಲ್ಪಶ್ರೀ 

ಗಾಂಧಿ ಬಜ಼ಾರ್ ನಲ್ಲಿಂದು
ಗೌರಿ ಹಬ್ಬದ ಸಂಭ್ರಮ
ಇಡೀ ಬಜಾರೇ
ಕಂಗೊಳಿಸುತ್ತಿದೆ
ಹೊಸ ಸೀರೆಯುಟ್ಟು
ಮೈತುಂಬ ಒಡವೆಯಿಟ್ಟು
ಸರಬರ ಓಡಾಡುತ್ತಿರುವ
ನವ ವಧುವಿನಂತೆ

ಅರಿಶಿನ ಕುಂಕುಮ
ಬಳೆ ಬಂಗಾರ ಬಾಗಿನ
ಬಣ್ಣ ಬಣ್ಣದ ತೋರಣ
ಚಿತ್ತಾರದ ರಂಗವಲ್ಲಿ
ಕುತೂಹಲದಿಂದ ಕಾಯುತ್ತಿವೆ
ಯಾರ ಮನೆ ಸಿಂಗರಿಸುವುದೆಂದು

 

ಪೇಟೆಯ ತುಂಬಾ
ಹೆಂಗಸರದೇ ಕಾರುಬಾರು
ಅಂಗಡಿಗಳಲ್ಲಿ ಚೌಕಾಸಿ ಮಾಡಿ
ಜಾಣ್ಮೆ ಮೆರೆಯುತ್ತಿರುವರು
ಅವರ ಹಿಂದೆ ಹ್ಯಾಪು
ಮೋರೆ ಹಾಕಿದ
ಭಾರ ಹೊತ್ತು
ಸುಸ್ತಾದ ಗಂಡುಮಕ್ಕಳು

ಹೂ ಮಾರುವ
ತಮಿಳು ಹೆಂಗಸಿನ ಪಕ್ಕದಲ್ಲಿ
ಇಡೀ ಸಂಭ್ರಮಕ್ಕೆ
ಮೂಖ ಸಾಕ್ಷಿಯಂತೆ
ಹಾಸಿದ ಚಿಂದಿ ಮೇಲೆ
ಅರೆ ಬಿರಿದ ಮಲ್ಲಿಗೆಯ
ನಗೆ ಸೂಸುತ
ಸ್ವಪ್ನ ಲೋಕಕೆ ಜಾರಿದ
ಹಾಲುಗೆನ್ನೆಯ ಹಸುಳೆ

‍ಲೇಖಕರು avadhi

11 September, 2018

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading