ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧಾರಿ ಉವಾಚ…

ಅಖಿಲೇಶ್ ಚಿಕ್ಕದೇವನೂರು

ಭೀಷ್ಮ, ದ್ರೋಣ,
ಶಲ್ಯ, ಕರ್ಣ,
ದುರ್ಯೋಧನ, ದುಶ್ಯಾಸನ,
ಹನ್ನೊಂದು ಅಕ್ಷೋಹಿಣಿ ಸೈನ್ಯ
ಇಷ್ಟೆಲ್ಲಾ ಇದ್ದೂ ಕೌರವರು ಸತ್ತರೇ?
ನಿಮಗೆಲ್ಲೋ ಭ್ರಾಂತು..
ಗೆಲುವಿನ ಹುಚ್ಚು ಪಾಂಡವರನ್ನು
ಕೆಲ ದಿನಗಳಷ್ಟೇ ಬದುಕಿಸಿತು.

ಆದರೆ, ಸೋಲಿನ ಕಿಚ್ಚು ಕೌರವರನ್ನು ಇನ್ನೂ ಬದುಕಿಸಿದೆ
ಸೋಲು-ಅಸೂಯೆಯ ಕಿಚ್ಚಿನಿಂದಲೇ ಹುಟ್ಟಿದವರು
ಒಂದು ಯುದ್ಧದ ಸೋಲಿನಿಂದ ಸಾಯುವರೇ?
ಅಯ್ಯೋ ಮುಗ್ದರೇ..
ಸತ್ತಿಲ್ಲ ನನ್ನ ಮಕ್ಕಳು, ಸೋತಿರುವರಷ್ಟೇ!
ಒಮ್ಮೆ ಗೆದ್ದು ಜಗವ ಮರೆತರಷ್ಟೇ ಸಾವು,
ಸೋತು ಅವಮಾನಿತರಾದಾಗಲಲ್ಲ!

‍ಲೇಖಕರು Admin

28 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading