ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಣೆ ಗೌರವಕ್ಕಿಂತ ಡಾಕ್ಟರೇಟ್ ದೊಡ್ದದಾ ?? ಗೌರವ ಪ್ರಶಸ್ತಿ ಸ್ವೀಕರಿಸಿ ಕಲಬುರ್ಗಿ ಅವರಿಗೆ ಅನ್ಯಾಯ ಮಾಡಲಾರೆ

ಎರಡು ಭರವಸೆಯ ದನಿಗಳು ಕೇಳಿ ಬಂದಿವೆ

ನಾಡನ್ನು ಸದಾ ತಮ್ಮ ಚಿಂತನೆಗಳ ಮೂಲಕ ಮುನ್ನಡೆಸಿದ ಇಬ್ಬರು ತಮಗೆ ಸಂದ ಪ್ರಶಸ್ತಿಗಳಿಂದ ದೂರವೇ ಉಳಿಯಲು ನಿರ್ಧರಿಸಿದ್ದಾರೆ

kadidal shamanna with gane2ನೋವಿನ ಮಧ್ಯೆ ನಮಗೇಕೆ ಸಂಭ್ರಮ ಎನ್ನುವುದು ಆ ಹಿರಿಯರಿಬ್ಬರ ನಿಲುವು

ಒಬ್ಬರು ಕಡಿದಾಳ್ ಶಾಮಣ್ಣ 

ಇನ್ನೊಬ್ಬರು ಜಿ ರಾಮಕೃಷ್ಣ 

ಅಲ್ಲ ಸ್ವಾಮಿ ಸಿರಾ ಸೀಮೇಲಿ ಮೊನ್ನೆ ಶಿವರಾತ್ರಿ ದಿನ ನನಗೆ ಕೂರಿಸಿ, ಕೊಳಲು ನುಡಿಸೋದಿಸೋದಿಕ್ಕೆ ಹೇಳಿ, ಗಣೆ ಗೌರವ ಕೊಟ್ರಲ್ಲಾ ಅದಕ್ಕಿಂತ ಭೂಮಿ ಮೇಲೆ ದೊಡ್ಡದು ಇನ್ಯಾವುದು ಇದೆ ಹೇಳಿ ಅಂತ ಕೇಳಿದವರು ಕಡಿದಾಳು ಶಾಮಣ್ಣ

ತುಮಕೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಕೊಡುತ್ತೆ ಅಂತ ಗೊತ್ತಾದ ತಕ್ಷಣವೇ ಅದನ್ನು ಒರೆಸಿ ಬಿಸಾಕಿದ್ದಾರೆ

ಆ ಗಣೆ ಗೌರವಕ್ಕಿಂತ ಡಾಕ್ಟರೇಟ್ ದೊಡ್ದದಾ ಅನ್ನೋ ಪ್ರಶ್ನೆ ಶಾಮಣ್ಣ ಅವರದ್ದು

ದಸರಾ ಉದ್ಘಾಟನೆ ಮಾಡಿ ಬನ್ನಿ ಅಂದಾಗ ರೈತ ಸಾಯ್ತಾ ಇರೋ ನಾಡಲ್ಲಿ ದಸರಾನಾ ಅಂತ ಕೇಳಿದವರು ಇವರು

ನಂತರ ಜನಪರ ತಂಡಗಳ ವೇದಿಕೆಯಲ್ಲಿ ವೇದಿಕೆ ಏರಿ ಕೊಳಲು ನುಡಿಸುತ್ತಾ ಕುಳಿತವರು

Dr G Ramakrishna with Prof V Shreedhar and Pradeep Ramavat, Asst Prof National Law school,Bengaluru seen at the inauguration of  the seminar “Democratic Campuses for Education for Social Change Contemporary Challenges” organised by Karnataka Vidhyarthi Sanghatane in memory of late Rohit Vemula at Senate Hall, Central college, in Bengaluru on Wednesday 17th February 2016 Pics: www.pics4news.com

 

ಈ ಮಧ್ಯೆ ಜಿ ರಾಮಕೃಷ್ಣ ತಮಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡಿದ ಗೌರವ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ

ಪುತ್ತೂರಿನಲ್ಲಿ ಧರ್ಮ ಕಾರಣಕ್ಕಾಗಿ ಜಿಲ್ಲಾಧಿಕಾರಿಯನ್ನು ಹೊರಗಿಟ್ಟಿರುವುದು, ವೆಂಕಟಪ್ಪ ಆರ್ಟ್ ಗ್ಯಾಲರಿ ಸೇರಿದಂತೆ ಹಲವು ಸಾಂಸ್ಕೃತಿಕ ತಾಣಗಳನ್ನು ಖಾಸಗಿಯವರ ಕೈಗೆ ಒಪ್ಪಿಸುತ್ತಿರುವುದು, ಮೌಡ್ಯ ನಿಷೇದ ಕಾಯಿದೆ ಜಾರಿ ಮಾಡದಿರುವುದು, ಕಲಬುರ್ಗಿ ಹತ್ಯೆ ಹಂತಕರನ್ನು ಇನ್ನೂ ಪತ್ತೆ ಹಚ್ಚದಿರುವುದು ಜಿ ಆರ್ ಅವರಿಗೆ ನೋವು ತಂದಿದೆ

‍ಲೇಖಕರು admin

6 April, 2016

2 Comments

  1. shridhar

    ಹಿರಿಯರಿಬ್ಬರ ನಿರ್ದಾಕ್ಷಿಣ್ಯ ನಿರ್ಧಾರಕ್ಕೆ ದೊಡ್ಡ ಸಲಾಂ

  2. Dr.B.S.Biradar

    Great things

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading