ಮುಂದೆ ಮೀನು, ಅಣಬೆ, ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಬೇಡ ಎಂದರೂ ಆಶ್ಚರ್ಯವಿಲ್ಲ!!

quotes

 

 

ಕಲಾವತಿ.ಎಸ್

ಯಾವುದೇ ಆಹಾರ ಯಾರನ್ನೂ ಬದಲಾಯಿಸುವುದಿಲ್ಲ, ಅವರವರ ಸಂಸ್ಕಾರಗಳಷ್ಟೇ ಅವರವರ ನಡವಳಿಕೆಗಳಿಗೆ ಕಾರಣವೆಂಬ ಸತ್ಯದ ಅರಿವಿದ್ದವರು ಇಂತಹ ಅಪ್ರಬುದ್ದ ನಿರ್ಣಯಗಳನ್ನು ಕೈಗೊಳ್ಳುವುದಿಲ್ಲ. ಜಾತ್ರೆಗಳು ಮತ್ತು ಊರ ಹಬ್ಬಗಳು ನಮ್ಮ ಸಾಂಸ್ಕೃತಿಕ ಆಚರಣೆಗಳು, ಇಲ್ಲಿ ವೈದಿಕತೆಯ ಅಧಿಪತ್ಯದ ನೆರಳಾಗಲಿ, ಗರ್ಭಗುಡಿ ಸಂಸ್ಕೃತಿಯಾಗಲೀ ಅನಾವಶ್ಯಕ ಮತ್ತು ಅಪ್ರಸ್ತುತ. ನೀಗಬೇಕಿರುವ ಸಮಸ್ಯೆಗಳು ಎಷ್ಟೋ ಇವೆ. ಸಮಸ್ಯೆಯಲ್ಲದ ಆಚರಣೆಗಳಲ್ಲಿ ಸಮಸ್ಯೆ ಹುಡುಕುವುದು ಬೇಡ…… ದೊಡ್ಡತನ, ಪ್ರಬುದ್ಧತೆ ಮೆರೆಯುವ ಮನಸ್ಸುಗಳು ಬೇಕಷ್ಟೇ.

quotes

 

 

ಸತ್ಯನಾರಾಯಣ

ಗೋವಧೆ ನಿಷೇಧದ ಬಗ್ಗೆ ಚರ್ಚೆ ನಡೆದಾಗಲೇ, ಮುಂದೆ ಇವರು ಕುರಿಕೋಳಿ ಮಾಂಸವೂ ಬೇಡ ಎಂದರೂ ಆಶ್ಚರ್ಯವಿಲ್ಲ ಎನ್ನಲಾಗಿತ್ತು. ಅದು ಈಗ ನಿಜವಾಗುತ್ತಿದೆ. ‘ನಾನು ಮಾತ್ರ ಸರಿ; ಉಳಿದವರೆಲ್ಲರೂ ತಪ್ಪು’ ಎನ್ನುವ ಮನೋಭಾವದರವರು ಮುಂದೆ ಮೀನು, ಅಣಬೆ, ಮೊಟ್ಟೆ, ಈರುಳ್ಳಿ, ಬೆಳ್ಳುಳ್ಳಿ ಬೇಡ ಎಂದರೂ ಆಶ್ಚರ್ಯವಿಲ್ಲ!!!!!!!
ನಮ್ಮ ಊಟವನ್ನು ಪರೀಕ್ಷಿಸುವ ಅನಧಿಕೃತ ಫುಡ್ ಇನ್ಸ್ಪೆಕ್ಟರ್ಸ್ ಇವರು!!!! ವಿಚಿತ್ರವೆಂದರೆ, ನಿಜವಾದ ಆಹಾರತಜ್ಞ ಮೆದುಳಿನಿಂದ ಯೋಚಿಸಿದರೆ, ಇವರು ಹೃದಯದಿಂದಲೇ ಯೋಚಿಸುತ್ತಾರೆ.!!!!!

quotes

 

 

 

ವಸಂತ

ನಿಜ ಶೋಷಣೆಯ ಕೇಂದ್ರಗಳು ತಿರುಪತಿ, ಉಡುಪಿಯಂತಹ ದೇವಸ್ಥಾನಗಳು. ಯಾವುದೇ ಜಾತ್ರೆ (ಕಪ್ಪಡಿ ಅಥವಾ ಚಿಕ್ಕೆಲ್ಲೂರು ಜಾತ್ರೆ) ಅಥವಾ ಗ್ರಾಮ ದೇವತೆಗಳ ಹೆಸರಿನಲ್ಲಿ ಆಚರಿಸುವ ಹಬ್ಬಗಳಲ್ಲಿ ವೈದಿಕ ದೇವಸ್ಥಾನಗಳಲ್ಲಿ ಕಂಡು ಬರುವ ಸಾಮಾಜಿಕ ಮತ್ತು ಅರ್ಥಿಕ ಶೋಷಣೆ ಇರುವುದಿಲ್ಲ. ಎಲ್ಲಾ ಜನ ಸಮೂಹಗಳು ಸೇರಿ ವರ್ಷದ ಒಂದೆರಡು ದಿನ ತಮ್ಮ ಕೆಲಸ ಕಾರ್ಯಗಳ ಬೀಡುವಿನ ವೇಳೆಯಲ್ಲಿ ತಮ್ಮ ಕುಟುಂಬ ಮತ್ತು ಸಂಬಂಧಿಕರೊಂದಿಗೆ ಸೇರಿ ಆಚರಿಸುವ ಜಾತ್ರೆಗಳು ಮತ್ತು ಊರ ಹಬ್ಬಗಳು ನಮ್ಮ ಸಂಸ್ಕøತಿಯ ಪ್ರತೀಕಗಳು.

ಜಾತ್ರೆಗಳಲ್ಲಿ ಮಾಂಸ ಆಹಾರ ಸೇವನೆ ಮಾಡುವುದು ಅಥವಾ ಪ್ರಾಣಿ ಬಲಿ ನೀಡುವುದು ಪ್ರಶ್ನೆಯೇ ಅಲ್ಲ. ಇವುಗಳಿಂದ ಯಾರಿಗೂ ತೊಂದರೆ ಇಲ್ಲ. ಕುರಿ, ಕೋಳಿಗಳನ್ನು ಸಾಕುವುದು ಆಹಾರಕ್ಕಾಗಿ. ಈ ದೇಶದ ನ್ಯಾಯಾಲಯಗಳು ಮತ್ತು ಪ್ರಾಣಿ ದಯಾ ಸಂಘಗಳು ಪ್ರಶ್ನಿಸಬೇಕಿರುವುದು ತಿರುಪತಿಯಂತಹ ದೇವಸ್ಥಾನಗಳಲ್ಲಿ ನೆಡೆಯುತ್ತಿರುವ ಅರ್ಥಿಕ ಸುಲಿಗೆ ಲೂಟಿಯಂತಹ ಶೋಷಣೆಗಳನ್ನು, ಬಡವ ಶ್ರೀಮಂತರೆಂದು ವಿಂಗಡಿಸುವ ಹೀನ ಮನೋಧರ್ಮವನ್ನು, ಜಾತಿಯ ಹೆಸರಿನಲ್ಲಿ ಪಂಕ್ತಿ ಬೇಧ ಮಾಡುವ ವ್ಯವಸ್ಥೆಯನ್ನು.

quotes

 

 

Sunil kumar ms

ದೇವರಿಗೆ ಮಾಂಸದ ನೈವೇದ್ಯ ಇಡುವಾಗ ಬಾಡೂಟ ಇಡುವುದು ತಪ್ಪಲ್ಲ. ಜಾತಿಗೂ ಆಹಾರ ಪದ್ದತಿಗೂ ಒಂದಕ್ಕೂ ಸಂಬಂಧವಿಲ್ಲ.ಬ್ರಾಹ್ಮಣರು ಮಾಂಸವನ್ನು ತಿನ್ನುತ್ತಾರೆ. ಮೊದಲು ಸರಕಾರ ಎಲೆಕ್ಷನ್ ಟೈಮಲ್ಲಿ ಬಾಡೂಟ ಇಡುವುದು ನಿಲ್ಲಿಸಲಿ. ಆಹಾರ ತಿನ್ನುವ ಇಚ್ಛೆ ಹಕ್ಕು ಯಾರಿಂದಲು ಕಿತ್ತಿಕೂಳ್ಳಲು ಆಗುವುದಿಲ್ಲ.

 

 

‍ಲೇಖಕರು admin

April 6, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: