ಅಲ್ಲೊಂದು ಮದುವೇನೋ, ಬೀಗರ ಊಟವೋ ನಡೀತಿದೆ ಅಂತಾ ಸುಮ್ಮನಾಗಿ..

asha deepa

ಆಶಾದೀಪ 

ವಿಚಾರವನ್ನು ನೇರ ಹಾಗೂ ಸ್ಪಷ್ಟವಾಗಿ ಹೇಳಬೇಕು ಅಥವಾ ಅರ್ಥೈಸಬೇಕು ಅಥವಾ ಚರ್ಚಿಸಬೇಕು..

ಏನನ್ನೋ ಉದ್ದೇಶಿಸಿ, ಇನ್ನೇನನ್ನೂ ಪ್ರಶ್ನಿಸಿ, ಮತ್ತೇನನ್ನೋ ಹೀಯಾಳಿಸಿ, ದೂರುವ ಮನಸ್ಥಿತಿಯಿಂದ ಯಾವ ಚರ್ಚೆಯು ಪರಿಪೂರ್ಣವಾಗೋದಿಲ್ಲ. ಅವರು ಹಾಲು ಕುಡಿಯೋದು ತಪ್ಪಾದ್ರೆ, ಇವ್ರು ಮಾಂಸ ತಿನ್ನೋದು ತಪ್ಪು ಇಲ್ಲದಿದ್ರೆ ಸರಿ ಅನ್ನೋದು. ಒಂದೇ ದ್ವಾರದ ಎರಡು ಬಾಗಿಲಲ್ಲಿ ತೆರೆದಿರುವ ಒಂದು ಬಾಗಿಲನ ಬಗ್ಗೆ ಒಬ್ಬರು, ಮುಚ್ಚಿರುವ ಮತ್ತೊಂದು ಬಾಗಿಲ ಬಗ್ಗೆ ಮತ್ತೊಬ್ಬರು ವಿತಂಡವಾದ ಮಾಡಿದ ಹಾಗಷ್ಟೆ… ಜಾತಿ, ಬಣ್ಣ, ವರ್ಗದ ತಾರತಮ್ಯದ ಭುಜದ ಹಿಂದೆ ನಿಂತೂ, ಕಾಲಮಾನದ ಚರ್ಚೆಯಡಿ, ಗುರಿಗೆ ಗುಂಡು ಹೊಡೆಯೋದರಿಂದ ಅವರರವರ ಸ್ವಾರ್ಥ ಸಾಧನೆಯಾಗುತ್ತದೆ.

ಇನ್ನೂ.. ವಿಚಾರಕ್ಕೆ ಬರೋದಾದ್ರೆ, ಮಾಂಸಹಾರ ಸೇವಿಸಬೇಕಾ ಬೇಡವಾ ಅನ್ನೋದು ಅವರವರ ಇಚ್ಛೆ.

17JANHNR03- ELUDANDU JATHRE (1) copyಬಹಿರಂಗವಾಗಿ ಪ್ರಾಣಿಬಲಿ ಮಾಡಬಾರದು ಸರಿ ಅನುಸರಿಸೋಣ. ಯಾರೂ ಇಲ್ಲದ ಜಾಗದಲ್ಲಿ ಕುರಿ ಕೋಳಿ ತಿನ್ನಲು ಅಡ್ಡಿಯಿಲ್ಲ.. ಜಾತ್ರೆ ಅಂತಹ ಸಂದರ್ಭದಲ್ಲೇ ಮಾಂಸಾಹಾರ ತಿನ್ಬೇಡಿ, ಮನೇಲಿ ತಿನ್ಕಳ್ಳಿ ಅನ್ನೋದು ಶುದ್ಧ ತಪ್ಪೇ.. ಇಲ್ಲಿ ಮುಖ್ಯವಾಗಿ ಯುಗಾದಿಯಲ್ಲಿ ಸಿಹಿ ಹಾಗೂ ಖಾರ ಅನ್ನೋ ಎರಡು ದಿನಗಳು ಇರುತ್ತವೆ. ಆಯಾ ದಿನ ಆಯಾ ಸಂಭ್ರಮವೇ ಬೇರೆ. ಅದೇ ಥರ, ಜಾತ್ರೆಯಲ್ಲಿ ಕೂತು ಮಾಂಸಾಹಾರ ತಿನ್ನೋದು ಕೂಡ ಒಂದು ಸಂಭ್ರಮವೇ.. ಅದನ್ನು ಕಳೆದುಕೋ ಅನ್ನೋದು ಸರಿಯಲ್ಲ.. ಯಾರಿಗೋ ಇಷ್ಟವಾಗಲ್ಲ ಅಂತಾ ನಾವು ಬದಕೋದನ್ನೂ ಬಿಡೋದಕ್ಕಾಗಲ್ಲ.. ಹಾಗಿದ್ದ ಮೇಲೆ ಯಾರಿಗೋ ಇಷ್ಟವಾಗಿಲ್ಲ ಅಂತಾ ನಮ್ಮ ಆಚರಣೆಗಳನ್ನ ಬಿಡೋದಕ್ಕಾಗುತ್ತಾ ಅನ್ನೋ ಪ್ರಶ್ನೆ ಕೂಡ ಎದುರಾಗುತ್ತೆ.

ಮಾರಮ್ಮನ ಜಾತ್ರೆಗಳಲ್ಲಿ ಮೊದಲ ದಿನ ವೆಜ್ ಆದ್ರೆ, ಎರಡನೇ ದಿನ ನಾನ್​ವೆಜ್​ ಇರುತ್ತೆ. ಇಲ್ಲಿ ದೇವರನ್ನೇ ಒಂದಿನ ವೆಜ್​ ಮತ್ತೊಂದಿನ ವೆಜ್​ ಅಂತಾ ಪಾಲ್​ ಮಾಡಿಕೊಳ್ಳಲಾಗಿದೆ. ಸೌಹಾರ್ಧಯುತವಾಗಿ ಒಬ್ಬರಿಗೊಬ್ಬರು ತಲೆಕೆಡಿಸಿಕೊಳ್ಳದೇ ತಮ್ಮದೇ ರೀತಿಯಲ್ಲಿ ದೇವರನ್ನ ಆರಾಧಿಸ್ತಾರೆ. ಪೂಜಿಸ್ತಾರೆ. ಅವರು ಖೀರು ಪಾಯಸ ತಿಂದ್ರೆ, ಇವ್ರು ಕೋಳಿ ಬಲಿಕೊಟ್ಟು ಕಬಾಬು, ಕೀಮಾ ಅಂತಾ ಮಾಡ್ಕೊಂಡು ತಿಂತಾರೆ. ಇಷ್ಟು ವರ್ಷ ಈ ಸಾಮರಸ್ಯಕ್ಕೆ ಬಾರದ ತೊಂದ್ರೆ ಈಗ್ಯಾಕೆ ಬರುತ್ತಿದೆ.

ಪ್ರಾಣಿಗಳ ಮೇಲೆ ದಯೆ ಇರೋರು ಪ್ರಾಣಿಗಳ ಭಾವನೆಗಳನ್ನೂ ಅರ್ಥಮಾಡಿಕೊಳ್ತಿದ್ದಾರಾ.? ಪ್ರಾಣಿಗಳನ್ನ ಉಳಿಸಲು ಹೊರಟವರಿಗೆ ರಸ್ತೆ ಪಕ್ಕದಲ್ಲೇ ಮಟನ್​ ಕಡಿಯವಾಗ ಹಿಂಸೆಯಾಗಲಾರದೇ.. ದನಗಳನ್ನ ರೋಡಲ್ಲಿ ಕಡಿದು ಚರ್ಮ ಸುಲಿಯುವಾಗ ಹಿಂಸೆ ಎನಿಸಲಾರದೇ? ಮನುಷ್ಯನಂತೂ ಕಟುಕ ಬಿಡಿ, ತಮ್ಮದೇ ಸಹಪಾಠಿಯ ಇಡೀ ಕಳೇಬರವನ್ನು ನೇತುಹಾಕಿರೋದನ್ನು ನೋಡೋ ಕುರಿಗಳಿಗೆ ಕೋಳಿಗಳಿಗೆ ಏನೇನಿಸ್ತುತ್ತೆ ಅಂತಾ ಪ್ರಾಣಿ ದಯೆ ಉಳ್ಳವರು ಯೋಚಿಸಿಬೇಕಿದೆ. ಇವ್ರುಗೆ ಬೇಸರ ಅಗುತ್ತೆ ಅಂತಾ ಮಾಂಸಾ ತಿನ್ಬೇಡಿ ಅನ್ನುವವರು ಹಾಗಂತ ಪ್ರಚಾರ ಮಾಡಲಿ ಅದು ಅವರ ಇಷ್ಟ.. ಅದನ್ನ ಪಾಲಿಸಲೇಬೇಕು ಅಂದ್ರೆ ಮಾತ್ರ ಕಷ್ಟ ಕಷ್ಟ..

27-1453887431-23-jan-2016-chnr-photo-008ttಮನುಷ್ಯ ಎಲ್ಲವೂ ತನ್ನದೇ ಸ್ಬತ್ತು ಅಂತ ತಿಳಿದುಕೊಂಡವನು. ಅಲ್ಲಿ ಒಂದಷ್ಟು ಪಾಲು ಮಾಡಿಕೊಂಡಿದ್ಧಾನೆ.. ನಾವದನ್ನು ಪಾಲಿಸ್ತುತ್ತಿದ್ದೇವೆ. ಸಂಪ್ರದಾಯ, ಪದ್ದತಿಯ ಹೆಸರಲ್ಲಿ ನಮ್ಮ ಬದುಕಿನ ಆಚರಣೆ ನಡೆಯುತ್ತಿದೆ. ಅದಕ್ಕೆ ಧಕ್ಕೆ ಮಾಡಿದ್ರೆ, ಪ್ರತಿಫಲವಾಗಿ ಸಿಗೋದು ವಿರೋಧ ಮತ್ತು ಆಕ್ರೋಶವಷ್ಟೆ.. ಯಾರಿಗೆ ಪ್ರಾಣಿಬಲಿ ಮಾಂಸಾಹಾರ ಇಷ್ಟವಾಗೋದಿಲ್ವೋ ಅವರು ಅಂತಹ ಜಾತ್ರೆಗಳಿಗೆ ಹೋಗದಿರಲಿ, ಮಾಂಸಾಹಾರ ಸೇವೆನೆಯನ್ನು ನೋಡದಿರಲಿ, ಪ್ರಾಣಿಬಲಿಯಾಗುವಾಗ ಕಣ್ಮುಚ್ಚಿಕೊಳ್ಳಲಿ.ಕಣ್ತೆರೆಯುವಷ್ಟರಲ್ಲಿ ಬಲಿ ಮುಗಿದಿರುತ್ತದೆ. ಆಗ ಅವರ ಮನಸ್ಸಿಗೂ ನೋವಾಗೋದಿಲ್ಲ. ವಿರೋಧ ಅನ್ನಿಸುವುದಿಲ್ಲ. ನೂರು ಜನ್ರ ಸಮಸ್ಯೆಗೆ, ಲಕ್ಷ ಜನ್ರೇ ತಮ್ಮ ಆಚರಣೆಗಳನ್ನು ಬದಲಾಯಿಸಿಕೊಳ್ಳಬೇಕು ಅನ್ನೋದು ಮೂಡನಂಭಿಕೆಯ ಮೌಢ್ಯತೆಗಿಂತ ಅನರ್ಥವೆನಿಸಿಕೊಳ್ಳುತ್ತದೆ.

ಇವತ್ತು ಯಾರು ಮಾಂಸ ತಿನ್ನುತ್ತಿಲ್ಲ ನೂರಕ್ಕೆ ಕನಿಷ್ಟ ಎಂಬತ್ತು ಮಂದಿ ತಿಂತೀರಬಹುದಾ.. ನಾನ್​ ತಿನ್ನಲ್ಲಾ ಅನ್ನೋರು ಕೂಡ, ಬಾಡಿನ ರುಚಿ ಹೇಳಬಲ್ಲರು ಅನ್ನೋದು ಬಹಳಷ್ಟು ಜನ್ರಿಗೆ ಗೊತ್ತಿರುತ್ತೆ. ಅದರ ಚರ್ಚೆಯ ಅಗತ್ಯ ಇಲ್ಲಿಲ್ಲ. ಆದ್ರೇ ಹೇಳುತ್ತಿರುವ ಉದ್ದೇಶ ಇಷ್ಟೆ, ಮಾಂಸಹಾರ ಪದ್ಧತಿಯಲ್ಲ. ಆಹಾರದ ವಿಭಿನ್ನ ರುಚಿ.. ಅದನ್ನು ಯಾರು ಬೇಕಾದ್ರೂ ಸೇವಿಸಬಹುದು. ಒಟ್ಟಾರೆ ಒಂದಿಡೀ ಸಮುದಾಯ ಒಟ್ಟಿಗೆ ಕುಳಿತು ಮಾಂಸ ಸೇವಿಸ್ತೇವೆ ಅಂದ್ರೆ, ಅಲ್ಲೊಂದು ಮದುವೇನೋ, ಬೀಗರ ಊಟವೋ ನಡೀತಿದೆ ಅಂತಾ ಸುಮ್ಮನಾಗಿ

‍ಲೇಖಕರು admin

April 6, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. nandinarasimha

    ಮಾಂಸಹಾರ ಪದ್ಧತಿಯಲ್ಲ. ಆಹಾರದ ವಿಭಿನ್ನ ರುಚಿ.. ಅದನ್ನು ಯಾರು ಬೇಕಾದ್ರೂ ಸೇವಿಸಬಹುದು. ಒಟ್ಟಾರೆ ಒಂದಿಡೀ ಸಮುದಾಯ ಒಟ್ಟಿಗೆ ಕುಳಿತು ಮಾಂಸ ಸೇವಿಸ್ತೇವೆ ಅಂದ್ರೆ, ಅಲ್ಲೊಂದು ಮದುವೇನೋ, ಬೀಗರ ಊಟವೋ ನಡೀತಿದೆ ಅಂತಾ ಸುಮ್ಮನಾಗಿ…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: