ಹಿಂದಿ ಮೂಲ- ಮುನವ್ವರ್ ರಾಣಾ
ಕನ್ನಡಕ್ಕೆ- ಡಾ ದಾವಲಸಾಬ ನರಗುಂದ
ನೆಲದ ಮೇಲಿನ ನೆಮ್ಮದಿ
ಫಕೀರರು ಅಮೃತಶಿಲೆಯ ಮಹಲುಗಳಲ್ಲಿ ಇರುವುದಿಲ್ಲ
ನಾನು ಅಸಲಿ ತುಪ್ಪ, ಬನಿಯಾಗಳ ಅಂಗಡಿಗಳಲ್ಲಿ ಸಿಗುವುದಿಲ್ಲ
ಇದು ಒಳ್ಳೆಯ ಶೇರ್ ಕಾರ್ಖಾನೆಗಳಲ್ಲಿ ಸಿಗುವಂಥದ್ದಲ್ಲ
ಹಾಗಾದರೆ ನನ್ನ ಅಭಿಮಾನಿಗಳು ಸಿಗುವುದಾದರೂ ಎಲ್ಲಿ?
ಉರ್ದು ಮತ್ತು ಹಿಂದಿಯಲ್ಲಿ ಸೋದರ ಸಂಬಂಧವಿದೆ
ಈ ಬಂಧುತ್ವ ಜಗತ್ತಿನ ಯಾವ ಎರಡು ಭಾಷೆಯಲ್ಲೂ ಕಾಣುವುದಿಲ್ಲ
ಇನ್ನೊಬ್ಬರ ಕಷ್ಟಕ್ಕೆ ತನ್ನನ್ನು ತಾ ಬರ್ಬಾದ್ ಮಾಡಿಕೊಳ್ಳುವ
ಮನೋಭಾವ ಒಳ್ಳೊಳ್ಳೆ ಕುಟುಂಬದಲ್ಲಿ ಕಾಣುವುದಿಲ್ಲ
ನೆಲದ ಮೇಲಿನ ನೆಮ್ಮದಿ ಆಗಸದಲ್ಲಿ ಸಿಗುವುದಿಲ್ಲ
ಹಾಗೆಂದೇ ಪಕ್ಷಿಗಳು ಸಂಜೆಯಾದ ಕೂಡಲೇ ಗೂಡಿಗೆ ಮರಳುತ್ತವೆ
ಇಲ್ಲಿಯೇ ಉತ್ತಿ ಬಿತ್ತಿ ಬೆಳೆಸಿದ್ದಾರೆ ಹಾಗಾದರೆ
ಯಾವ ರೈತನು ಕೂಡ ಖುಷಿಯಿಂದ ಯಾಕಿಲ್ಲ?
ಜನರು ಇನ್ನೂ ಸ್ವಲ್ಪ ನ್ಯಾಯಯುತವಾಗಿದ್ದಿದ್ದರೆ
ಈ ಜೈಲುಗಳಲ್ಲಿ ಒಬ್ಬ ನಿರಪರಾಧಿಯೂ ಇರುತ್ತಿರಲಿಲ್ಲ






0 Comments