
ಕೆ ಪಿ ಲಕ್ಷ್ಮಣ್
ಅವ್ವನ ಬೆರಳ ಸಂದಿಯಿಂದ ಹರಿದ ರಂಗೋಲೆ ಎಳೆ ಬಳ್ಳಿಗಳು
ಹಟ್ಟಿ ತುಂಬ ಹಬ್ಬಿ ಹೂಬಿಡುವಾಗ
ಇರುಳೆಲ್ಲ ಸವತಿ ಜಿದ್ದಿನಲಿ ಬಿದ್ದು ಜಗಳಾಡಿ
ದಣಿದ ಗೌರೀ ಗಂಗವ್ವರು ಸೆರಗಿನಲಿ ಕಣ್ಣೊರೆಸಿ
ರಂಗೋಲಿ ಗರತಿಯ ಬಳಿ ನ್ಯಾಯ ತಂದಾಗ
ಬಳ್ಳಿಯಾಗಿನ ಮಲ್ಲಿಗೆ ಗಮ್ಮೆಂದು ನಕ್ಕಿತು
ಕೈಲಾಸದಿಂದ ಶಿವನದೊಂದು ಕಣ್ಸನ್ನೆ
ಹೆಂಗಾರ ಮನವೊಲಿಸಿ ಕಳಿಸೆಂದು
ಹೊಣೆ ಹೊತ್ತ ರಂಗವ್ವ
ಗಂಗೆ ಗೌರಿಯ ಕೆನ್ನೆಗೆ
ಅರಿಶೀನ ಬಳಿಯೂತ
ನಿಮ್ಮ ನಲ್ಲ ನೆನ್ನೆ ಮಲ್ಲಿಗೆ ಬಳ್ಳಿಯಲಿ
ಹೂ ಕೂಯ್ವುದ ಕಂಡೆ !!
ಯಾರಿಗಿತ್ತನೋ ಏನೋ ?!!
ಗಂಗೆ ಗೌರವ್ವರು
ಮಕ ಮಕವ ನೋಡಿಕಂಡು
ಕ್ಷಣ ಹೊತ್ತೆ ಆದದ್ದು …
ಕೈಲಾಸದ ತುಂಬಾ
ಗುಡ ಗುಡನೆ ಗುಡುಗು ಮಿಣಮಿಣನೆ ಮಿಂಚು
ಧರೆಯ ಮೇಲೆ ಮಳೆಯೋ ಮಳೆ!!





“ಗಂಗೆ ಗೌರವ್ವರು
ಮಕ ಮಕವ ನೋಡಿಕಂಡು
ಕ್ಷಣ ಹೊತ್ತೆ ಆದದ್ದು …
ಧರೆಯ ಮೇಲೆ ಮಳೆಯೋ ಮಳೆ!!”
Sooooper
🙂 🙂 🙂 🙂 🙂 Cute .,, fine
ಕವನದ ಹುಟ್ಟು ಸಖತ್ತಾಗಿದೆ. ಕವಿಗೆ ಕವನ ಬರೆಯುವಾಗ ವಿಷಯ ಯಾವುದಾದರೇನು. ಕವನ ಒಪ್ಪವಾಗಿದ್ದರೆ ಅಷ್ಟೆ ಸಾಕು. ನಿಮ್ಮ ಕವನ ಉತ್ತಮ ನಿದರ್ಶನ.
channagide bhaashe mttu Bhaava