ಹಾಯ್ಕುಗಳು
ಎಂ ಎಂ ಶೇಖ್
ಮರದ ನೆರಳಲ್ಲಿ
ಮರ ನಿದ್ದೆ
ಮಾಡಿದ್ದು ಹೀಗೆ
* *
ಕನಸುಗಳು
ಇಳೆಗಿಳಿದ
ಅಮೃತದ ಹನಿಗಳು
* *
ಗಂಗೆಗಿಂತಲು
ಪವಿತ್ರ
ಕಣ್ಣೀರು
* *
ಸಿಟ್ಟನ್ನು
ಇಂಗಿಸಿಕೊಳ್ಳುವ
ಸಾಧನವೊಂದೆ
ಮುಗುಳ್ನಗೆ
* *
ನಿನ್ನ ಕಣ್ಣಲ್ಲಿ
ನೀರುಕ್ಕಿಸಿದ
ಕ್ಷಣಗಳನ್ನು
ಚೆಲ್ಲದಿರು ಹಾದಿಗೆ
* *
ನಾ ಸುರಿಸುವ
ಕಣ್ಣೀರು
ನನ್ನ ಪಾದಗಳಿಗೆ
ತಲುಪಿದರೆ ಸಾಕು.







chenada ide-smitha
– ಮೇಡಂ ವಂದನೆಗಳು ಹಾಯ್ಕುಗಳು ಸರಳ, ಸುಂದರ ಜೊತೆಗೆ ಅರ್ಥಗರ್ಭಿತವಾಗಿವೆ, ಚಿತ್ರ ಸೊಗಸಾಗಿದೆ ಜೊತೆಗೆ ನಿಮ್ಮ ರಚನೆಗಳ ಘನತೆಯನ್ನು ಇನ್ನಷ್ಟು ಹೆಚ್ಚಿಸಿದೆ, ತಮ್ಮ ಲೇಖನಿಯಿಂದ ಇನ್ನಷ್ಟು ಹಾಯ್ಕು, ಗಜಲ್ ಮತ್ತು ಕವನಗಳು ಮೂಡಿ ಬರಲಿ.
ಚೆನ್ನಾಗಿವೆ
ಕನಸು, ಕಣ್ಣೀರು, ನಿದ್ದೆ, ಮುಗುಳ್ನಗೆಯನ್ನು ಒಂದೇ ಸೂತ್ರದಲ್ಲಿ ಹೆಣೆದಿದ್ದೀರಿ. ಚೆಂದ ಇವೆ.
ಗಂಗೆಗಿಂತಲು
ಪವಿತ್ರ
ಕಣ್ಣೀರು
This one is too good… Nothing can purify our souls than regret, remorse….
tamagella tumbu hrudayada dhanyavaadagaLu..
first one is very heartening,thanks for giving good bunch of ‘haykugalu’