ಗಂಗಾ ಚಕ್ರಸಾಲಿ ಕವಿತೆ – ಜಾತ್ರೆ…

ಗಂಗಾ ಚಕ್ರಸಾಲಿ

ಐದು ವರ್ಷಗಳಿಗೊಮ್ಮೆ..
ನಡೆಯುವ ಜಾತ್ರೆಯಿದು
ರಥವಿಲ್ಲ,ಅದರೊಳು ಮೂರ್ತಿಯೂ ಇಲ್ಲ
ಆದರೂ ಅದ್ದೂರಿ ಆಡಂಬರ,ಸಡಗರ;

ತಿಂಗಳುಗಳ ಮೊದಲೇ…
ನಡೆಯುತ್ತದೆ ಪೂರ್ವ ತಯಾರಿ
ದೇವರುಗಳು ಆಜ್ಞೆ ನೀಡುತ್ತಾರೆ
ಪೂಜಾರಿಗಳು ಅದಕ್ಕಾಗಿ ದುಡಿಯುತ್ತಾರೆ;

ಇವರಿಗೂ ಒಂದೊಂದು ಬಣ್ಣವಿದೆ
ಬಾವುಟವಿದೆ,ತತ್ವ ಸಿದ್ಧಾಂತವಿದೆ
ಆದರೆ ಅವು ಬದಲಾಗಬಹುದು…
ದೇವರುಗಳು ತಮ್ಮ ಗುಡಿ ಬದಲಾಯಿಸಿದಾಗ;

ಈ ದೇವರು ಕಲ್ಲಿನ ಮೂರ್ತಿಯಂಥಲ್ಲ
ಭಕ್ತರು ಕೈಮುಗಿಯಬಹುದು..ಬಿಡಬಹುದು
ದೇವರುಗಳೇ ಕೈ ಮುಗಿಯುತ್ತಾರೆ
ತಮ್ಮನ್ನು ಕೈ ಬಿಡಬೇಡಿರೆಂದು;

ತಮ್ಮ ಗುಡಿಗಳಿಂದ ಹೊರಬರುತ್ತಾರೆ
ಪೂಜಾರಿಗಳನ್ನು ಜೊತೆಮಾಡಿಕೊಂಡು,
ಹಣ, ಸೀರೆ, ಬಾಡೂಟ, ಸುರಪಾನ
ಭಕ್ತರಿಚ್ಛೆಯಂತೆ ಧಾರಾಳವಾಗಿ ನೀಡುತ್ತಾರೆ;

ಕೊನೆಗೊಂದು ದಿನ ಜಾತ್ರೆ ನಡೆಯುತ್ತದೆ
ಭಕ್ತರು ತಮ್ಮ ತಮ್ಮ ದೇವರುಗಳಿಗೆ,
ಕಾಣಿಕೆಗಳನ್ನು ಹಾಕುತ್ತಾರೆ…
ಹುಂಡಿಗಳು ತುಂಬಿಕೊಳ್ಳುತ್ತವೆ;

ಮುಂದೊಂದು ದಿನ ದೇವರ ಸತ್ವ ಪರೀಕ್ಷೆ
ಹೆಚ್ಚು ಕಾಣಿಕೆ ಸ್ವೀಕರಿಸಿದ ದೇವರು..
ಶಕ್ತಿಶಾಲಿ, ಬಲಾಢ್ಯವಂತನಾಗುತ್ತಾನೆ
ಹಾರ, ತುರಾಯಿ ಭಕ್ತರಿಂದ, ಪೂಜಾರಿಗಳಿಂದ;

ಸಂತುಷ್ಟಗೊಂಡ ದೇವರುಗಳು..
ಗದ್ದುಗೆ ಏರುತ್ತಾರೆ, ಗುಡಿ ಸೇರುತ್ತಾರೆ
ಈಗ ಪರಿಸ್ಥಿತಿ ಅದಲು, ಬದಲು..
ಭಕ್ತರು ಗೋಗರೆದರೂ..ದೇವರೂ ಇಲ್ಲ, ಪೂಜಾರಿಯೂ ಇಲ್ಲ;

‍ಲೇಖಕರು avadhi

January 29, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: