ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖಾಲಿ ಕಾಗದದ ಮೇಲೆ..

ಎಂ ಎಸ್ ರುದ್ರೇಶ್ವರಸ್ವಾಮಿ

ಖಾಲಿ ಕಾಗದದ ಮೇಲೆ
ಏನನ್ನಾದರೂ
ಬರೆದುಕೊಡು, ಇಲ್ಲವೆ ಮಳೆಯನ್ನಾದರೂ
ಚಿತ್ರಿಸು, ಎಂದಳು.

ಖಾಲಿ ಕಾಗದದ ಮೇಲೆ
ಅಕ್ಷರಗಳನ್ನು
ಮೂಡಿಸುತ್ತ ಹೋದೆ: ಅಕ್ಷರಗಳು ಬೆಳೆದು
ಕಪ್ಪು ಚುಕ್ಕಿಗಳಾದವು
ಪದಗಳು ಅರ್ಥ ಕಳೆದುಕೊಂಡವು.

ಅವಳು ಒಂದೊಂದು
ವಾಕ್ಯವನ್ನು,
ಪದಪುಂಜವನ್ನು, ಪದಗಳ ನಡುವಿನ
ನಿಶ್ಯಬ್ದವನ್ನು ಆಲಿಸಿದಳು.

ಪದಗಳು ಸೇತುವೆಯಾಗಿ
ಅರ್ಥಕಟ್ಟಿಕೊಡಲಿಲ್ಲ.
ನೋಡಿದವರು ಯಾರೇ ಇರಲಿ; ಶಪಿಸದೆ
ಸುಮ್ಮನೆ ಇರಲಾರರು.

ಹಾಳೆಯನ್ನು ಮಳೆಯಲ್ಲಿ ತೊಳೆದು
ಮಳೆಯನ್ನು
ಚಿತ್ರಿಸುವ ಆಸೆ ಹುಟ್ಟಿಸಿತು.

ಬಾಗಿಲು ತೆರೆದೆ
ಮನೆ ಬಾಗಿಲಲ್ಲಿ ಮಳೆ ನೆಲಮುಗಿಲಿಗೆ ಒಂದಾಗಿ
ನಿಂತಿತ್ತು, ಅದಕ್ಕೆ ತೂಫಾನ್-
ಸಾಥ್ ನೀಡುತ್ತತ್ತು.

ಚಿತ್ರಿಸುವುದು ಹೇಗೆ
ಒದ್ದೆ ಕಾಗದದ ಮೇಲೆ ಗಾಯಗೊಂಡ ಮಳೆಯ
ಅಹಂ ಅನ್ನು?

‍ಲೇಖಕರು Avadhi

14 September, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading