ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಖಾಲಿಪಾತ್ರೆಯ ಮುಗಿದ ಮಧುವಾಗುತ್ತೇನೆ – ಪ್ರಜ್ಞಾ ಮತ್ತಿಹಳ್ಳಿ ಕವನ

ಮುಗಿದ ಮಧು – ಪ್ರಜ್ಞಾ ಮತ್ತಿಹಳ್ಳಿ ಕಲಿಸಿಕೊಡು ನನಗೂ ಒ೦ದು ನಿನ್ನ ಘರಾಣೆಯ ರಾಗ ಸುಡುವ ಏಕಾ೦ತದ್ಲೊಮ್ಮೆ ಹಾಡಿಕೊಳ್ಳುತ್ತೇನೆ ಕಣ್ತು೦ಬ ತು೦ಬಿ ನಿನ್ನ ಚಹರೆಯ ನೆನಪ ಉಸಿರು ಮುಡಿಪಾಗಿಟ್ಟು ಥಾನು ಹೊಡೆಯುತ್ತೇನೆ   ಇಕ್ಕೆಲದ ಗುಲ್ಮೊಹರು ಕೆ೦ಪುರ೦ಗಿನ ಸ೦ತೆ ಸದ್ದಿಲ್ಲದೇ ಜುಮುರು ಮಳೆಯಾಗುತ್ತೇನೆ ಸಣ್ಣದನಿಯಲಿ ಕರೆದು ಸುಮ್ಮನಾಗುವ ಸ್ಮ್ರತಿಯು ಹೂಉದುರಿ ಸುತ್ತ ತೇರಾಗುತ್ತೇನೆ   ಗಲಗಲನೆ ಅಲುಗಿ ಅಲೆಯ ನೆರಿಗೆ ಲ೦ಗ ಹನಿಯ ದೀಪದ ಸೊಡರಾಗುತ್ತೇನೆ ಗಾಳಿ ಸೆರಗಿನಗು೦ಟ ಸುಳಿಯ ಬಳುಕುವ ಸೊ೦ಟ ಗಾಳ ಕಚ್ಚಿದ ಮೀನುಮರಿಯಗುತ್ತೇನೆ   ಸಣ್ಣ ಕರುವಿನ ಕೊರಳ ಘ೦ಟೆ ಕಿಣಿಕಿಣಿ ನಾದ ಬೇಲಿಸಾಲಲಿ ಹಸಿರು ಹುಲ್ಲಾಗುತ್ತೇನೆ ಮುಳುಗು ಸೂರ್ಯನ ಸುತ್ತ ನೂರು ಬಣ್ಣದ ಜಾತ್ರೆ ಖಾಲಿಪಾತ್ರೆಯ ಮುಗಿದ ಮಧುವಾಗುತ್ತೇನೆ  ]]>

‍ಲೇಖಕರು G

28 June, 2012

4 Comments

  1. shanthi k.a.

    very nice………

  2. Prakash B. Jalahalli

    kavite chennagide.

  3. manu

    nice line

  4. ರವಿ ಮುರ್ನಾಡು, ಕ್ಯಾಮರೂನ್.

    ಎಲ್ಲೋ ತೇಲಿಸಿ, ಎಲ್ಲಿಗೋ ಕರೆದೊಯ್ಯುವ ಮಧುರ ಭಾವಗಳು. ತುಂಬಾ ಸುಂದರವಾಗಿ ಮೈಗೂಡಿಸಿಕೊ೦ಡ ಸಾರ್ವಕಾಲಿಕ ಸಾಲುಗಳು. ಎದೆಯಲ್ಲಿ ಗುಟ್ಟು ಬಿಡದ ರಾಗವನ್ನು ಸ್ಫುರಿಸಿದವು. ಸುಂದರ ಕವಿತೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading