ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಷಮಿಸಿ,ಬರೆಯಬಾರದಿತ್ತು ಬರೆದುಬಿಟ್ಟೆ…

ಏಳರೊಳಗೆ….

– ಪ್ರಸನ್ನ ಚಲಂ

1,

‘ಅಬ್ಬಾ ನೀನ್ ಬಿಡಪ್ಪಾ’

ಅನ್ನುವುದರಲ್ಲಿ

ನನ್ನ ಗ್ರಹಚಾರ

‘ಬಿಡಪ್ಪ’ಒಂದೇ

ಅರ್ಥವಾದದ್ದು

2

ಇನ್ನ ಸಾಕು

ಅನ್ನುವುದರ ಅರ್ಥ

ಬೇಕೇಬೇಕು ಅನ್ನುವುದರ

ಮದ್ಯೆಯಿಂದೆದ್ದಿದ್ದು

3,

ಅವಮಾನದ ಬಗ್ಗೆ

ಬರೆಯಬೇಕಿದೆ

ದಯವಿಟ್ಟು ಮಾನದ ಬಗೆಗಿನ

ಮಾಹಿತಿ ನೀಡಿ

4,

ಇನ್ನೆಷ್ಟು ಬರೆಯಬೇಕಂತ….?

ಕೇಳಿದವನಿಗೆ ಒಂದೇ ಗಾಬರಿ

ಅವನ ಬಗ್ಗೆ ನಾನಿನ್ನು ಬರೆದಿರಲಿಲ್ಲ.

5,

ಭಾರ ಹೊತ್ತವನ ಮುಂದೆ

ಕತೆ,ಕವಿತೆ ಬರೆದು

ಹಗುರವಾದೆ ಎಂದವನಿಗೆ

ಅಷ್ಟೆ ಹಗುರವಾದ

ಗಂಧದಹಾರ

6,

ನಿನ್ನ ಹಣೆಬರಹವೆ ಇಷ್ಟು

ಎಂದವರಿಗೆ ಪಾಪ

ಮುಂದಿನದರ ಕಲ್ಪನೆಯಿರಲಿಲ್ಲ.

7,

ಕ್ಷಮಿಸಿ,ಬರೆಯಬಾರದಿತ್ತು

ಬರೆದುಬಿಟ್ಟೆ,ನೀವು

ಅಮಾಯಕರು

ಓದಿಬಿಟ್ಟಿರಿ.

 

‍ಲೇಖಕರು G

27 October, 2012

2 Comments

  1. mmshaik

    nice…

  2. parashuram boner

    tumba chenagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading