ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ ಶುರುವಾಯ್ತು..

shivakumar mavali

ಶಿವಕುಮಾರ್ ಮಾವಲಿ 

ಅವಳೊಂದು ಚಿಕ್ಕ ವೃತ್ತ
ಬರೆದುಕೊಂಡು
ನನ್ನನ್ನು ಹೊರಹಾಕಿದಳು
ನಾನೋ ಅದಕ್ಕಿಂತ ದೊಡ್ಡದೊಂದು
ವೃತ್ತ ಬರೆದುಕೊಂಡು ಅವಳನ್ನು
ಒಳಸೆಳೆದುಕೊಂಡೆ …
chalk-circleಈಗ ಅದರೊಳಗೆ ಅದೆಷ್ಟಾದರೂ ಚಿಕ್ಕ ಚಿಕ್ಕ
ವೃತ್ತಗಳನ್ನು ಅವಳು ಬರೆದುಕೊಂಡರೂ
ನನ್ನದೆಂಬ ದೊಡ್ಡ ವೃತ್ತದೊಳಗೇ ಇರುತ್ತಾಳೆ.
ಅಂದಹಾಗೆ ಇದು,
ನಾನವಳನ್ನು ಪ್ರೀತಿಸಿದ ಪರಿಯಲ್ಲ
ಬದಲಾಗಿ ಮೋಸದ ವಾಸನೆ ಕಂಡಾಕ್ಷಣ
ಅವಳನ್ನು ಬಂಧಿಸಿದ ಪರಿ.

‍ಲೇಖಕರು Admin

5 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading