ಶಿವಕುಮಾರ್ ಮಾವಲಿ
ಅವಳೊಂದು ಚಿಕ್ಕ ವೃತ್ತ
ಬರೆದುಕೊಂಡು
ನನ್ನನ್ನು ಹೊರಹಾಕಿದಳು
ನಾನೋ ಅದಕ್ಕಿಂತ ದೊಡ್ಡದೊಂದು
ವೃತ್ತ ಬರೆದುಕೊಂಡು ಅವಳನ್ನು
ಒಳಸೆಳೆದುಕೊಂಡೆ …
ಈಗ ಅದರೊಳಗೆ ಅದೆಷ್ಟಾದರೂ ಚಿಕ್ಕ ಚಿಕ್ಕ
ವೃತ್ತಗಳನ್ನು ಅವಳು ಬರೆದುಕೊಂಡರೂ
ನನ್ನದೆಂಬ ದೊಡ್ಡ ವೃತ್ತದೊಳಗೇ ಇರುತ್ತಾಳೆ.
ಅಂದಹಾಗೆ ಇದು,
ನಾನವಳನ್ನು ಪ್ರೀತಿಸಿದ ಪರಿಯಲ್ಲ
ಬದಲಾಗಿ ಮೋಸದ ವಾಸನೆ ಕಂಡಾಕ್ಷಣ
ಅವಳನ್ನು ಬಂಧಿಸಿದ ಪರಿ.
0 ಪ್ರತಿಕ್ರಿಯೆಗಳು