ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಮಣ್ಣಿನ ಬೋಗುಣಿಗೆ ತಿದ್ದಿದ ಮೂಗು

ಶತಮಾನಗಳ ದಾಹ
%e0%b2%b8%e0%b3%8d%e0%b2%aa%e0%b3%82%e0%b2%b0%e0%b3%8d%e0%b2%a4%e0%b2%bf-%e0%b2%97%e0%b2%bf%e0%b2%b0%e0%b3%80%e0%b2%b6%e0%b3%8d

ಸ್ಪೂರ್ತಿ ಗಿರೀಶ್

ಮಣ್ಣಿನ ಬೋಗುಣಿಗೆ
ತಿದ್ದಿದ ಮೂಗು
ತುಟಿ ಕಟಿ
ಉಬ್ಬು ತಗ್ಗಿಗ್ಗು
sheರಕ್ತ ಮಾಂಸ
ಓಹೋ ಹೆಣ್ಣು ಫಲವತ್ತಿನ ಹಣ್ಣು
‘ಇವು ನನ್ನವು  ಗಂಡಸಿನ ಸ್ವತ್ತು’ ಕೂಗಿದಿರಿ
ಗೂನಾಗಿಸಿ ನಿಮ್ಮನ್ನೇ ಉರಿಸೆಳೆಯ ಬಟ್ಟಲೊಳಗೆ ಕಾರಿಕೊಂಡಿರಿ
ನಾನು ಕಲ್ಲಾದೆನು ಕೆನ್ನೀರು ಬಸಿದುಕೊಂಡು

ಇಲ್ಲ, ಇಲ್ಲಿ ಬೆಳದಿಂಗಳಿಲ್ಲ
ಹೂವಿಲ್ಲ ಕಾಯಿಲ್ಲ
ಬೆನ್ನೆಲುಬಿಗಂಟಿದ ಹಸಿದ ಹೊಟ್ಟೆ
ದಿಟದ ಹೊಟ್ಟೆ ಇದೆ ಕಿರಿಚಿದೆನು
ಕಿರುನಾಲಿಗೆಯೊಳಗೆ ಇಂಗಿದ  ಧ್ವನಿ ನಿಮಗೆಂದೂ
ತಲುಪಲಿಲ್ಲ
ನನ್ನ ಹಸಿಮಾಂಸ ಇಡಿಯಾಗಿ
ಬಗೆದು ತಿಂದಿರಿ
ನಿಮಗೋ ಮುಗಿಯದ ಹಸಿವು

ಹಿಂದೆ ಒಂದಾನೊಂದು ಕಾಲದಲ್ಲಿ
ನಾನು ಹೆಣ್ಣಾಗಿದ್ದೆ
ಎಲ್ಲ ಪ್ರಾಣಿಗಳಂತೆ
ಇಂದು ನಿನ್ನ ನೆತ್ತಿಯ ಮೇಲೆ
ರಕ್ತ ಕಾರುವ ಮಾರಿಯಾಗಿದ್ದೇನೆ
ಒಪ್ಪಿಸು ಬಲಿ
ನನಗೂ  ಶತ ಶತಮಾನಗಳಿಂದಲೂ ತೀರದು ದಾಹ

‍ಲೇಖಕರು admin

15 October, 2016

1 Comment

  1. ಸಂಗಮೇಶ್ ಡಿಗ್ಗಿ ಸಂಗಾಮಿತ್ರ

    ಅಬ್ಬಾ..!
    ನನ್ನನ್ನು ನಾನು ಮುಟ್ಟಿ ನೋಡಿಕೋಳ್ಳಬೇಕು…ಹಾಗಿದೆ ಕವಿತೆ…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading