ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಲಿಕ್ ಆಯ್ತು ಕವಿತೆ: ಕಪ್ಪು ಕೋಣೆಯ ಒಂಟಿ ಕೈ

krishna sreekanta devangamuttಕೃಷ್ಣ ಶ್ರೀಕಾಂತ ದೇವಾಂಗಮಠ

ಮೆಟ್ಟು ಹರಿದಿವೆ ಅಲ್ಲಿ ಇಲ್ಲಿಯ
ಕೆಂಪು ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ
ತೀರಲೇ ಇಲ್ಲ ಮನದ ತೃಷೆ
ಕಾವೇರಿದ ಮೈ ಹಣ್ಣಗಾಗಿದೆ
ಆಸೆ ಇನ್ನೂ ತೀರದ ದಾಹ.

ಮೊಗೆದಷ್ಟು ಅಗೆದಷ್ಟು ಎಲ್ಲವನ್ನೂclick-kavte4
ದಕ್ಕಿಸಿಕೊಳ್ಳಬೇಕೆಂಬ ಹುಕಿ
ಸಿಕ್ಕದ್ದರ ಮೇಲೆರಗಿ ದಾಳಿಗೈವ ಪರಿಗೆ
ಸ್ತ್ರೀ ಸಂಕುಲ ಕಣ್ಣೀರಿಟ್ಟ ಕಥೆ ಹಳತು
ಹಪಾಹಪಿ ನಿಲ್ಲಲೇ ಇಲ್ಲ ಪಾಪಿ ಜೀವಕ್ಕೆ.

ಪರಾಂಗನೆಯ ಮತ್ತೆ ಮಂಚಕ್ಕೆಳೆದು
ಬಹಿಷ್ಠೆಯ ಬೆರೆವುದೇನು
ಲಗಾಮಿಲ್ಲದ ಮೃಗದಂತೆ
ಮೈ ಮನಸ್ಸುಗಳ ಜಖಮುಗೊಳಿಸಿ.

ಅಣಿಯಾಗಲೇ ಬೇಕು ಕಾಮಸಜ್ಜಿಕೆಗೆಂದು
ಮತ್ತೋರ್ವ ಕನ್ನಿಕೆ
ಶಾಪಗ್ರಸ್ಥೆಯದಾಕೆ ಯಾರು ಬಲ್ಲರು
ಜಂಟಿ ಜರುಗುವುದಲ್ಲಿ ಸಾಮೂಹಿಕ ದೃಶ್ಯ
ಪ್ರಬುದ್ಧರ ಬೆದೆ ವಿಕೃತ ಸತ್ಯ.

‍ಲೇಖಕರು Admin

7 October, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading