ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ರಿಸ್ತನ ವಶವಾಯಿತು..

ಸವಿತಾ ನಾಗಭೂಷಣ 

ಕಲ್ಲು ಒಗೆದ ಮೇಲೆ
ಕ್ರಿಸ್ತನ ನೆನಪಾಯಿತು !

ಸುಳ್ಳು ನುಡಿದ ಮೇಲೆ
ಕ್ರಿಸ್ತನ ನೆನಪಾಯಿತು !

ಹಗೆ ಬಗೆದ ಮೇಲೆ
ಕ್ರಿಸ್ತನ ನೆನಪಾಯಿತು !

ಜಳ್ಳ ತೂರಿ ಪೊಳ್ಳ ಕೇರಿದೆ
ಕುಲುಮೆಯಲಿ ಕಾದು
ಹೃದಯ ಹದವಾಯಿತು

ತಪ್ಪನೊಪ್ಪಿಸಿದೆ…
ಕರುಣೆಗೆ ಕಾಯ
ವಶವಾಯಿತು…!!

‍ಲೇಖಕರು avadhi

25 December, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading