ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಯಾಮರಾ ನನ್ನ ಜೀವ

 

 

ಸಿದ್ದರಾಮ್ ಕೂಡ್ಲಗಿ

ಅದು ೭೦ರ ದಶಕ. ನಾನಾಗ ತುಂಬಾ ಚಿಕ್ಕವನು.

ನನ್ನ ಸಂಬಂಧಿಕರ ಮನೆಯಲ್ಲಿ ಅದೇ ತಾನೇ ಯಶೀಕಾ ಕ್ಯಾಮೆರ ತಂದಿದ್ದರು.

ನನಗೆ ನೋಡಬೇಕೆನ್ನುವ ಅದರಲ್ಲಿ ಹೊರಗಿನ ಪ್ರಪಂಚ ಹೇಗೆ ಕಾಣುತ್ತದೆ ಎಂದು ನೋಡುವ ಕುತೂಹಲ. ಸಂಬಂಧಿಕರಲ್ಲೊಬ್ಬರಿಗೆ ನೋಡುತ್ತೇನೆಂದು ಕೇಳಿದೆ. ಅವರೇನೋ ಪಾಪ ನೋಡೆಂದು ಕೊಟ್ಟರು. ನನಗೆ ಅದೆಷ್ಟೋ ಖುಷಿ. ಆ ಖುಷಿ ಬಹಳ ಹೊತ್ತಿರಲಿಲ್ಲ. ಮತ್ತೊಬ್ಬರು ಬಂದು ಕೆನ್ನೆಗೆ ಏಟು ಕೊಟ್ಟು ಕೋಪದಿಂದ ಕುದಿಯುತ್ತಾ “ನಿನಗೇನ್ ಗೊತ್ತಾಗತೈತಿ ಇದರಾಗ, ಎಷ್ಟೂ ಕಾಸ್ಟ್ಲಿ ಕ್ಯಾಮರಾ ಗೊತ್ತದೇನ್ ನಿಂಗ” ಎಂದು ತಿವಿದು ಕ್ಯಾಮೆರಾ ಕಸಿದುಕೊಂಡರು.

ನನಗೆ ಚಿಲ್ಲನೆ ಕಣ್ಣಲ್ಲಿ ನೀರು, ಅವಮಾನ, ದು:ಖ, ಆಕ್ರೋಶ ಎಲ್ಲ. ಹಿರಿಯರು ಏನನ್ನೂ ಮಾತನಾಡುವಂತಿಲ್ಲ. ದು:ಖವನ್ನು ನುಂಗಿಕೊಂಡೆ

ಇವತ್ತು.. ಕ್ಯಾಮೆರಾ ನನ್ನ ಜೀವ. ಯಾರು ಏನೇ ಅಂದರೂ ನನ್ನ ಹವ್ಯಾಸವನ್ನು ಬಿಟ್ಟಿಲ್ಲ. ನಾನು ತೆಗೆದ ಚಿತ್ರಗಳಿಂದಲೇ ಎಷ್ಟೋ ಜನ ಹೊರ ರಾಜ್ಯಗಳಲ್ಲಿಯೂ ಸ್ನೇಹಿತರಾಗಿದ್ದಾರೆ. ಭೇಟಿಯಾಗಿದ್ದಾರೆ. ಮೆಚ್ಚುವ, ಅಭಿಮಾನಪಡುವ ಸ್ನೇಹಿತರಿದ್ದಾರೆ. ಅಷ್ಟು ಸಾಕು.

ನಾನು ಕೇಳುವುದಿಷ್ಟೇ ಮಕ್ಕಳು ಕುತೂಹಲದಿಂದ ಏನನ್ನಾದರೂ ನೋಡುವಂತಿದ್ದರೆ ಬೆಳೆಯುವ ಚಿಗುರನ್ನು ಮೊಳಕೆಯಲ್ಲೇ ಚಿವುಟಬೇಡಿ. ಸಮಾಧಾನದಿಂದ ಅವರ ಕುತೂಹಲ ತಣಿಸಿ.

ಯಾಕೋ ಇವತ್ತು ಇದೆಲ್ಲ ನೆನಪಾಯ್ತು.

‍ಲೇಖಕರು admin

16 May, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading