ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕ್ಯಾಮರಾ ಕವಿತೆ

ಗಾಯತ್ರೀ ರಾಘವೇಂದ್ರ

ಚಕಚಕನೆ ಬೆಳಕಾಗಿ
ಕ್ಷಣದಲಿ ನೂರುಚಿತ್ರ
ಎದೆಯೊಳಗೆ ಸದಾ ಬೆಳಗಿಸುವ
ನಗೆ ದೀಪ

ನೋಡದ ಮುಖಗಳುಂಟೆ
ಮೂತಿ ತಿರುವಿ ಕಣ್ ಮಿಟುಕಿ
ದೂರ ದೂರದ್ದೆಲ್ಲ ಆಪ್ತ
ಸಂತಸಗಳ ಆಲ್ಬಂ

ಈಗ ಬೆಳಕಿಲ್ಲ ನನ್ನಲ್ಲಿ
ಒಡೆದ ಲೆನ್ಸು ಕಣ್ ಮಂಜು
ಯಾವತ್ತೋ ಬಿದ್ದ ನೋವು
ಇದೀಗ ಕೊನೆಯ ಹಂತ

ಮಾಸಿದೆ ಬಣ್ಣ ,ಭಾವ
ಕ್ಲಿಕ್ಕಿಸಲಾರದಷ್ಟು ವೇದನೆ
ಖಾಲಿ ಎದೆಯೊಳಗೆ
ನೆನಪಿನ ರೀಲೂ ಸರಿಯುತ್ತಿಲ್ಲ

ತಡಕಿ ಹುಡುಕಿ ಇಡಲಾಗಿದೆ
ಮುರಿದ ಹಲ್ಲುಗಳಲ್ಲೇ ನಗುತ್ತೇನೆ
ಚಿತ್ರಸಂತೆಯಲ್ಲೀಗ
ಚಿತ್ರವಾಗಿ

‍ಲೇಖಕರು Avadhi

1 July, 2018

3 Comments

  1. raghavendra

    Super

  2. ರಾಜು ಪಾಲನಕರ ಕಾರವಾರ

    ಗಾಯತ್ರೀ ಮೇಡಂ ಅವಧಿಯಲ್ಲಿ ನಿಮ್ಮ ಕವಿತೆ ತುಂಬಾ ಚೆನ್ನಾಗಿದೆ…. ನಿಮ್ಮ ಪ್ರತಿಯೊಂದು ಬರಹಗಳು ತುಂಬಾ ಚೆನ್ನಾಗಿರುತ್ತವೆ…ನಿಮಗೆ ಅಭಿನಂದನೆಗಳು

  3. Vasudev nadig

    ಚಿತ್ರಸಂತೆಯಲಿ ಈಗ ಚಿತ್ರ ವಾಗಿ
    ಬ್ಯುಟಿಫುಲ್
    ಮನುಷ್ಯರೂ ಹೀಗೇ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading