ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಕೋವಿಡ್ ಕಥೆಗಳು’ ನೆನಪಿಗೆ ನೀಡಿದ ಸಂದರ್ಭ…

ಗುಬ್ಬಿ ತಾಲ್ಲೂಕು ಪ್ರಜಾವಾಣಿ ಪತ್ರಿಕೆಯ ವರದಿಗಾರ ಜಯಣ್ಣ ಕೋವಿಡ್ ಗೆ ಬಲಿಯಾಗಿದ್ದರು. ಮನೆಯಲ್ಲಿ ಕಡು ಕಷ್ಟದ ಕಾಲ. ಆಗ ಅವರ ಕುಟುಂಬಕ್ಕೆ 5 ಲಕ್ಷ ಪರಿಹಾರವನ್ನು ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಕೊಡಿಸಲಾಗಿತ್ತು.

ಇಂದು ತುಮಕೂರಿನಲ್ಲಿ ನಡೆದ ಕೆಯುಡಬ್ಲ್ಯೂಜೆ ಜಿಲ್ಲಾ ಘಟಕದ ಕಾರ್ಯಕ್ರಮದಲ್ಲಿ ಪತ್ರಕರ್ತ ದಿ.ಜಯಣ್ಣ ಪತ್ನಿ ಜ್ಯೋತಿ ಅವರು ಮಾತನಾಡಿ,
5 ಲಕ್ಷ ರೂ ಪರಿಹಾರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ತಮ್ಮ ಬದುಕು ಬದಲಿಸಿದ ಬಗೆಯನ್ನು ವಿವರಿಸಿದಾಗ ನನಗೂ ಮನಸ್ಸು ತುಂಬಿ ಬಂತು.

ಚಿಕ್ಕ ಮಗು ಕಟ್ಟಿಕೊಂಡು ಹೇಗೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುವುದು ಎನ್ನುವ ಕಷ್ಟದಲ್ಲಿದ್ದಾಗ ನೆರವು ನೀಡಿ, ಬದುಕಿನ ಭರವಸೆ ಮೂಡಿಸಿದ್ದಕ್ಕೆ ಕಾಲಿಗೆರಗಿ ನಮಸ್ಕರಿಸಿದ ಆ ಹೆಣ್ಮಗಳಿಗೆ ಅದೇ ವೇದಿಕೆಯಲ್ಲಿ ಯಡಿಯೂರಪ್ಪ ಅವರಿಂದ ಕೋವಿಡ್ ಕಥೆಗಳು ಪುಸ್ತಕವನ್ನು ನೆನಪಿಗೆ ನೀಡಿದ ಸಂದರ್ಭದ ಪೋಟೋ…

‍ಲೇಖಕರು Admin

16 June, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading