ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೈಫಿ ಅಜ್ಮಿನ ಕನ್ನಡಕ್ಕೆ ಕರೆತಂದಿದ್ದಾರೆ ವಿದ್ಯಾ

ಒಂದು ಮುತ್ತು..

ವಿದ್ಯಾ ರಾವ್


ನಿನ್ನ ಸುಂದರ ಕಣ್ಣುಗಳಿಗೆ ಮುತ್ತಿಟ್ಟಾಗಲೆಲ್ಲ
ಕತ್ತಲಲ್ಲಿ ಝಗಮಗಿಸುತ್ತವೆ ನೂರು ದೀಪಗಳು
 
ಹೂವೇನು, ಮೊಗ್ಗೇನು, ಚಂದ್ರ ತಾರೆಗಳೇನು
ಎಲ್ಲ ತಲೆಬಾಗುತ್ತವೆ ಎದುರಾಳಿಯ ಪಾದಗಳಿಗೆ..
 
ಅಜಂತಾದ ಶಿಲ್ಪಗಳೆಲ್ಲ ನರ್ತಿಸತೊಡಗುತ್ತವೆ
ಹಾಡತೊಡಗುತ್ತವೆ ಯುಗಗಳಿಂದ ಮೂಕವಾಗಿದ್ದ ಗುಹೆಗಳು..
 
ಹೂಗಳರಳುತ್ತವೆ ಹಾಳುಬಿದ್ದ ಬಂಜರು ಹೂ ತೋಟದಲ್ಲಿ
ಮೋಡಗಳಾವರಿಸುತ್ತವೆ ಬಾಯಾರಿದ ಭೂವಿಯ ಮೇಲೆ
 
ಒಂದು ಕ್ಷಣ ಜಗತ್ತು ಹಿಂಸೆ ಬಿಟ್ಟು ಬಿಡುತ್ತದೆ..
ಒಂದು ಕ್ಷಣ ಎಲ್ಲ ಕಲ್ಲುಗಳೂ ನಗಲಾರಂಭಿಸುತ್ತವೆ..

***

ಉರ್ದು ಮೂಲ: ಕೈಫಿ ಆಜ್ಮಿ
ಅನುವಾದ:ವಿದ್ಯಾ
 

‍ಲೇಖಕರು G

26 November, 2014

5 Comments

  1. mmshaik

    nice..

  2. M.S.Prasad

    kya baat hai !!!

  3. srinidhi

    ಮುತ್ತು ಮುತ್ತೇ! ನಿಷ್ಕಲ್ಮಶ ಪ್ರೀತಿಯ ಈ ಸ೦ಕೇತ ಅದೆಷ್ಟು ಪ್ರಭಾವಶಾಲಿ ಅಲ್ಲವಾ?

  4. gururaj katriguppe

    Beautiful poem . thank for bringing kaifi to Kannada ….

  5. CHALAM

    OLLEYA PRAYATHNA…ISTAVAYTHU.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading