ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇಶವ ಶರ್ಮ ಕವಿತೆ- ಒಂದು ನೃತ್ಯ ಮತ್ತು ಒಂದು ಬಣ್ಣವು ಸಾಕು

ಕೇಶವ ಶರ್ಮ ಕೆ

ಹೊಗಳಲು ಕಲಿಯಿರಿ ಮತ್ತೆ ಮತ್ತೆ ಸಿಕ್ಕ ಸಿಕ್ಕಲ್ಲಿ ಹೊಗಳಿ
ಬರುತ್ತಿದ್ದಾರೆ ಅವರು
ರಾಜಸಭೆಗೆ – ದಿನನಿತ್ಯವೂ ಹೀಗೆ ಹೊಸಪೋಷಾಕಿನಲ್ಲಿ
ಒಂದೊಂದು ಬಟ್ಟೆಗೂ ಲಕ್ಷಾಂತರ ವೆಚ್ಚ.
ಹೊಗಳು ಭಟರು ಮತ್ತೆ ಹೊಗಳುತ್ತಾರೆ
‘ಬರುತ್ತಿದ್ದಾರೆ ಅವರು. ಎದ್ದು ನಿಲ್ಲಿ.
ನಡು ಬಗ್ಗಿಸಿ ಕೈಮುಗಿದು
ಮುಜುರೆ ಒಪ್ಪಿಸಿ’
ಎಲ್ಕರೂ ನಿಂತರು. ಕೈ ಮುಗಿದರು.
ಬಂದರು ಅವರೇ ಬಂದರು. ಹಿಂದೆ ಮುಂದೆ ಕೆಲವು ಜನರು.

ಅವರಿಗೆ ಕಪ್ಪು ಕನ್ನಡಕ ಲೋಕ ನೋಡಲು.
ಬರುತ್ತಿದ್ದಾರೆ ಅವರು ಬರುತ್ತಿದ್ದಾರೆ. ಎದ್ದು ನಿಲ್ಲಿ.
ಸೊಂಟ ಬಗ್ಗಿಸಿ ಕೈ ಮುಗಿಯಿರಿ.
ಅವರು ಬಂದು ಕುಳಿತ ಮೇಲೆ ನೀವೂ ಕುಳಿತುಕೊಳ್ಳಿ
ಹಾರ ಹಾಕಿ. ಕೈಗೆ ಲಿಂಬೆ ಹಣ್ಣು ಕೊಟ್ಟರು ಕೆಲವರು.
ಈಗ ಮುಂದಿನ ಕಾರ್ಯಕ್ರಮ.
ನೀಲಾಂಜನೆಯರು ಬಂದರು. ಸಭೆಗೆ ಕೈಮುಗಿದರು ಒಬ್ಬೊಬ್ಬರಿಗೆ ಒಂದೊಂದು ಬಣ್ಣ,
ಪ್ರಭುವಿಗೆ ಹೇಳಿದರು- ದೊರೆಯೆ ಮುಂದಿನ ಸಿನಿಮಾಕ್ಕೆ ನೀವೇ ನಮ್ಮ ನಾಯಕರು.
ನೃತ್ಯವು ಶುರುವಾಗಲಿದೆ. ಯಾರೂ ಗಲಾಟೆ ಮಾಡಬಾರದು.
ಅವರೂ ಕೈಮುಗಿದರು ಸಭೆಗೆ.
ಸೇನೆಯ ಅಧಿಪತಿ ತನ್ನ ಕನ್ನಡಕವನ್ನು ಜೇಬಿಂದ ತೆಗದು ಹಾಕಿಕೊಂಡು ಸರಿ ಮಾಡಿಕೊಂಡ.
ಹಣ ಕಾಸು ಮಂತ್ರಿಗೆ ಕಿವಿಕೇಳಿಸುವುದಿಲ್ಲ.

ಮತ್ತೊಬ್ಬ ಕೋಲು ಹಿಡಿಯದೆ ನಡೆಲಾರ.
ನೃತ್ಯವು ಮುಗಿದಿದೆ.
ನೀಲಾಂಜನೆಯರು ಮತ್ತೆ ಕೈಮುಗಿದರು.
ಒಬ್ಬಳಿಗೆ ಶ್ರೇಷ್ಟ ನೃತ್ಯಗಾತಿಯ ಪ್ರಶಸ್ತಿ.
ಮತ್ತೊಬ್ಬಳ ನಗುವಿಗೆ ಚಿನ್ನದ ಹಾರ.
ಇನ್ನೊಬ್ಬಳಿಗೆ ಹಣಕಾಸಿನ ದಾನ.
ಮತ್ತೊಬ್ಬಳಿಗೆ ನಗದು ಬಹುಮಾನ
ಒಬ್ಬ ಹೇಳಿದ ‘ರಾತ್ರಿ ಊಟಕ್ಕೆ ಬಾ’
ಕಿವಿ ಕೇಳದವನು ರಾಜ್ಯ ಪ್ರಶಸ್ತಿಯು ನಿನಗೆ ಕಟ್ಟಿಟ್ಟದು.
ನನಗೆ ಸಣ್ಣ ಸೇವೆ ಸಲ್ಲಿಸಿದರೆ ಸಾಕು ಎಂದ.
ದೂರದಲ್ಲಿ ನಿಂತ ಬ್ರೆಕ್ಟ್ ಹೇಳಿದ:
‘ನಿಮಗೆ ಪ್ರಶಸ್ತಿಗಳು ಬೇಕೆ- ರಾಜ ಸೇವೆಯ ಮಾಡಿ
ಹೆಸರು ಬರುತ್ತದೆ. ಕೀರ್ತಿ ಬರುತ್ತದೆ.
ಉಳಿದ ಉಸಾಬರಿ ನಿಮಗೆ ಯಾಕೆ?
ನೆಲಕ್ಕೆ ಗುದ್ದಿ ಎಣ್ಣೆ ತೆಗೆಯಬಲ್ಲಿರಿ’

‍ಲೇಖಕರು Admin

22 July, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading