ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇಳಿರದಾ ರಾಗವಿದೆ

ಕವಿತೆಯ ಘನತೆ

– ಬಿ.ಎಸ್.ಶ್ರೀನಿವಾಸ್

ಕವಿತೆಗೊಂದು ಘನತೆಯಿದೆ
ಭಾವಗಳ ತೂಕವಿದೆ
ಬಂಧಗಳ ಭಾರವಿದೆ
ಹೃದಯದ ಪಿಸುದನಿಯಿದೆ

ಕವಿತೆಗೊಂದು ಘನತೆಯಿದೆ
ಕಾಣದ ಕಂಬನಿಯಿದೆ
ಕೇಳಿರದಾ ರಾಗವಿದೆ
ರವಿಕಾಣದ ರಸತುಂಬಿದೆ

ಕವಿತೆಗೊಂದು ಘನತೆಯಿದೆ
ಮೈಮರೆಸುವ ಶ್ರುತಿಲಯವಿದೆ
ನೊಂದ ಮನವ ಸಂತೈಸುವ
ಸಾತ್ವಿಕ ಶಕ್ತಿಯಿದೆ

ಕವಿತೆಗೊಂದು ಘನತೆಯಿದೆ
ಹರಿವ ನದಿಯ ಬಳುಕಿದೆ
ಗರಿಗೆದರಿ ನರ್ತಿಸುವ
ನವಿಲಿನ ಲಾಸ್ಯವಿದೆ

ಕವಿತೆಗೊಂದು ಘನತೆಯಿದೆ
ಭಕ್ತಿಯಿದೆ ವಿರಕ್ತಿಯಿದೆ
ತಿಮಿರವನ್ನು ತೊಲಗಿಸುವ
ಸೃಜನ ಸ್ವಯಂಪ್ರಭೆಯಿದೆ

‍ಲೇಖಕರು

21 December, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading