
ರಾಜೇಂದ್ರ ಪ್ರಸಾದ್
ಕೆ.ಎಸ್.ನರಸಿಂಹಸ್ವಾಮಿ ನೂರರ ನೆನಪು ಕಾರ್ಯಕ್ರಮವನ್ನು ಮಂಡ್ಯದಲ್ಲಿ ಮಾಡಿದಾಗ ಉದ್ಘಾಟನೆಯನ್ನು ‘ಮಲ್ಲಿಗೆ ಗಿಡ’ ನೆಡುವ ಮೂಲಕ ಆರಂಭಿಸಿದ್ದೊ…
ಅಂದೇ ಮತ್ತೊಂದು ಅಂಟನ್ನು ( ಬಳ್ಳಿಯ ಎಳೆ) ನಮ್ಮನೆಯಲ್ಲೂ ಹಾಕಿದ್ದೆ.
ಈವಾಗ ಅದು ಎತ್ತರಕ್ಕೆ ಹಬ್ಬಿ ನಿತ್ಯ ಘಮಿಸುವ ಮಲ್ಲಿಗೆ ಚೆಲ್ಲುತ್ತಿದೆ.
ಆದ್ರೆ ಪಾಪ ಅಪ್ಪ ನಿತ್ಯ ಬೆಂಗಳೂರಿನಿಂದ ಸಂಜೆ ಬರುವುದೇ ತಡ ಕತ್ತಲಾಗುವುದರೊಳಗೆ ಏನೋನೋ ಸರ್ಕಸ್ ಮಾಡಿ ಎಲ್ಲಾ ಮೊಗ್ಗು ಬಿಡಿಸಿಕೊಡಬೇಕು.
ಇಲ್ಲಾಂದ್ರೆ ಅಮ್ಮ ಬಿಡಬೇಕಲ್ಲ ! 😜
ಕಳೆದೆರಡು ತಿಂಗಳಿನಿಂದ ಮನೆಯಲ್ಲಿ – ಹೊರಗೆ ಮಲ್ಲಿಗೆಯದೇ ಪರಿಮಳ






0 Comments