ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ಎಫ್ ಸಿ ಪಾರ್ಸಲ್ ನಲ್ಲಿ..

ಭವ್ಯ ಕಬ್ಬಳಿ 

ಇಷ್ಟದ ಕೆ.ಎಫ್.ಸಿ ಫುಡ್
ಪಾರ್ಸಲ್ ಒಂದರ ಕವರ್ ಹಿಡಿದು
ಪೇಟೆ ಬೀದಿಯಲ್ಲಿ ನಡೆಯುತ್ತಿದ್ದೆ

ದಾರಿಯಲ್ಲಿ
ದೇವರ ಗುಡಿಯ ಮುಂದೆ
ಮುದುಕಿಯೊಬ್ಬಳು
ಒಳಗೆ ಹೋಗಿ ಬರುವವರ
ಚಪ್ಪಲಿ ಕಾಯುತ್ತಾ ಕುಳಿತಿದ್ದಾಳೆ,
ಸವೆದ ಜೀವದ ಕಣ್ಣುಗಳಲ್ಲಿ
ಹಸಿವಿನದ್ದೇ ತಾಂಡವ

ನೋಡಿದಾಕ್ಷಣ
ಯಾರೊ ಬೆನ್ನು ತಿವಿದಂಥಹ
ಅನುಭವ,
ಎತ್ತ ಕಣ್ಹೊರಳಿಸಲೂ
ಸಾಧ್ಯವಾಗದೆ,
ನನ್ನನ್ನು ನಾನೆ
ನಿಲ್ಲಿಸಲಾರದವಳಂತೆ ನಡೆದು,
ಕೈಲಿದ್ದ ಗಂಟನ್ನು ಆಕೆಯ ಕೈಲಿರಿಸಿದೆ

ದೇವರ ಕಡೆ ನೋಡಿ,
ತಪ್ಪಿದ್ದರೂ-ಒಪ್ಪಿದ್ದರೂ
ನಮ್ಮಿಬ್ಬರದೂ ಸಮಪಾಲು ಎಂದೆ

ಅಷ್ಟರಲ್ಲಿ ಮುದುಕಿ,
ಪಾರ್ಸಲ್ನ ಒಂದು
ಪೊಟ್ಟಣವನ್ನು ಹಿಂತಿರುಗಿಸಿ
“ಈ ಪಾಲು ನಿನಗಿರಲಿ” ಎಂದಳು

ದೇವರು ನಗುತಲಿದ್ದ… ನನ್ನೊಳಗೆ..

‍ಲೇಖಕರು avadhi

3 March, 2018

8 Comments

  1. Mithunraj

    KFC -Kindhearted Food Carrier… Bhavya

    • Bhavya

      Mithun 🙂

  2. Akshatha

    Very nice Bauvya

    • Bhavya

      Thank You Akshatha

  3. Shivakumar Gowda

    ವಿವೇಕನ೦ದರು ಹೇಳಿದ್ದು ಇದನ್ನೆ ಮೇಡಮ್. ದೆವರನ್ನ ಎಲ್ಲೆಲೋ ಹುಡುಕ್ತಾವರೆ ಜನ.

    • Bhavya

      Houdu Sir 🙂

    • Bhavya

      Thank You

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading