ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆವಿಎನ್ ಮೇಷ್ಟ್ರಿಗೆ ಧನ್ಯವಾದಗಳು…

ಕಿರಣ್ ಗಾಜನೂರು

ವರ್ತಮಾನದಲ್ಲಿ ಬುದ್ಧಿಜೀವಿ ಎಂಬ ಪರಿಭಾಷೆಯ ಕುರಿತು ಅಪಹಾಸ್ಯ/ಗೇಲಿ ಇತ್ಯಾದಿ ಇತ್ಯಾದಿಗಳು ನಡೆಯುತ್ತಿವೆ, ಕೆಲವರಂತೂ ಇನ್ನು ಮುಂದೆ ಹೋಗಿ ಮೇಲಿನ ಮನೋಧೋರಣೆಯನ್ನು ಸೊ ಕಾಲ್ಡ್ ಪುಸ್ತಕವಾಗಿ ಪ್ರಕಟಿಸಿ ಸಮರ್ಥಿಸುವ ಹಂತಕ್ಕೂ ಹೋಗಿದ್ದರು…!
ಕನ್ನಡದ ಸಾಂಸ್ಕೃತಿಕ ಸಂಧರ್ಭದಲ್ಲಿ ನಡೆಯುತ್ತಿದ್ದ ಈ ಬೆಳವಣಿಗೆಯನ್ನು ಗ್ರಹಿಸುವುದು ಹೇಗೆ, ಇದು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಕೆಲವು ಟ್ರೋಲರ್‌ಗಳ ಮನಸ್ಥಿತಿಯೇ..? ಒಂದು ಸಿದ್ದಾಂತ ಬದ್ಧವಾದ ಜನರು ಮತ್ತೊಂದು ಸಿದ್ದಾಂತದ ಜನರನ್ನು ಹೀಗಳೆಯುವ ಮಾದರಿಯೇ ಇತ್ಯಾದಿ ಇತ್ಯಾದಿ ಪ್ರಶ್ನೆಗಳನ್ನು ಆಗಾಗ ಕೇಳಿಕೊಳ್ಳುತ್ತಿದ್ದೆ ಆದರೆ ಸ್ಪಷ್ಟತೆ ಸಿಕ್ಕಿರಲಿಲ್ಲ…!

ಪ್ರೊ. ಕೆ. ವಿ ನಾರಾಯಣ ಅವರು ಬರೆದ (ಭಾವಾನುವಾದಿಸಿದ) ಪ್ರಸಿದ್ಧ ಚಿಂತಕ ಸಾತ್ರೆ ಅವರ ಪುಸ್ತಕ ‘ಬುದ್ಧಿಜೀವಿಗಳ ಭಿಕ್ಕಟ್ಟು’ ಓದಿದ ಮೇಲೆ ಈ ವಿಷಯ ನಾನು ಅಂದುಕೊಂಡಷ್ಟು ಸರಳವಾದುದ್ದಲ್ಲ ಎಂಬ ಅರಿವು ಧಕ್ಕುತ್ತಾ ಹೋಯಿತು..!

ಈ ಪುಸ್ತಕದ ಕುರಿತ ಮೂರು ದಿನಗಳ ಅಧ್ಯಯನ ಶಿಬಿರದಲ್ಲಿ ‘ಬುದ್ಧಿಜೀವಿ’ ಎಂಬ ಹೀಗಳಿಕೆಗೆ ಒಂದು ಚರಿತ್ರೆಯೇ ಇದೆ, ಅದು ರೂಪುಗೊಳ್ಳುವುದು ಒಂದು ನಿರ್ದಿಷ್ಟ ಸಮಾಜೋ-ರಾಜಕೀಯ ಸನ್ನಿವೇಶದಲ್ಲಿ, ಪೂರ್ವ/ಪಶ್ಚಿಮಗಳ ಮಹತ್ವದ ಚಿಂತಕರು (ಚಾಮ್ಸ್ಕೀ, ರೋಮಿಲಾ ಥಾಪರ್/ಎಡ್ವರ್ಡ್ ಸೈದ್) ಆ ಸಮಸ್ಯೆಯೊಂದಿಗೆ ಅರ್ಥಪೂರ್ಣ ಭೌದ್ಧಿಕ ಸಂವಾದವೊಂದನ್ನೆ ರೂಪಿಸಿದ್ದಾರೆ ಎಂಬ ಅರಿವು ಧಕ್ಕುತ್ತಾ ಹೋಯಿತು…!

ಇನ್ನು ಮುಂದೆ ಯಾರಾದರೂ ಟ್ರೋಲರ್ ಬುದ್ಧಿಜೀವಿಯನ್ನು ಅಪಹಾಸ್ಯ ಮಾಡಿದರೆ, ಪುಸ್ತಕವನ್ನು ಬರೆದರೆ ನಕ್ಕು ಮುಂದಕ್ಕೆ ಹೋಗುವ, ಅವರದು ಗಂಭೀರ ಆರೋಪ ಅನ್ನಿಸಿದರೆ ನಿಂತು ಚರ್ಚೆ ಬೆಳೆಸುವ ಅರಿವು ರೂಪಿಸಿಕೊಟ್ಟ KVN ಮೇಷ್ಟ್ರಿಗೆ ಧನ್ಯವಾದಗಳು.

‍ಲೇಖಕರು Admin

14 November, 2022

1 Comment

  1. M A Sriranga

    ಕಿರಣ್ ಗಾಜನೂರು ಅವರಿಗೆ…ಸರ್ ತಾವು ಈ ಲೇಖನ ದ ಪ್ರಾರಂಭದಲ್ಲಿ ಹೇಳಿದ ಬುದ್ಧಿಜೀವಿಗಳನ್ನು ಕುರಿತ “ಆ ಪುಸ್ತಕದ ಹೆಸರು” ಮತ್ತು ಅದರ ಲೇಖಕರ ಹೆಸರು ತಿಳಿಸುವಿರಾ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading