ಕೆಲವು ಮಾತುಗಳು
ಪ್ರಜ್ಞಾ ಮತ್ತೀಹಳ್ಳಿ
ಒಂದಿಷ್ಟು ಮಾತುಗಳು
ಹಾಗೇ ಕುಳಿತಿವೆ
ಕಿವಿಗಳ ಮೇಲೆ ಬೆಚ್ಚಗೆ
ಕೆಲವು ಮಾತುಗಳು ಹಾಗೇ
ಹಗುರಾಗಿರುವುದಿಲ್ಲ
ಗಾಳಿಯಲಿ ಸೇರಿ
ಹಾರಿ ಹೋಗುವಂತೆ
ನಯವಾಗಿರುವುದಿಲ್ಲ
ಕೆನ್ನೆಗುಂಟ ಜಾರಿ
ಸೋರಿಹೋಗುವಂತೆ
ಘನವಾಗಿರುವುದಿಲ್ಲ
ಶಿರದ ಮೇಲೇರಿ
ತುರಾಯಿಯಂತೆ
ಕರಗಿದ ಸಕ್ಕರೆಯಂತೆ
ಎದೆಯೆಲ್ಲ ಒದ್ದೆ
ಅಕ್ಕರೆ ಹರಳುಗಟ್ಟಿ
ಕಣ್ಣ ಹೊಳಪಂತೆ
ಮುಸ್ಸಂಜೆ ಸಂಚಾರದಂತೆ
ದೂರದ ಜಾಗಟೆಯಂತೆ
ಹುಣ್ಣಿಮೆ ಸೋನೆಯಂತೆ
ಕೆಲವು ಮಾತುಗಳು
ಅಗಲುವುದೇ ಇಲ್ಲ
ಜೀವಜೋಪಡಿ ಬಿಟ್ಟು






sundara abhivykti….
olleya kavithe prajnaa